ಚಂದನವನದ ಪ್ರಖ್ಯಾತ ನಟ, ನಿರ್ದೇಶಕ, ಉತ್ತಮ ವಾಗ್ಮಿ, ಕ್ರಿಯಾಶೀಲ ವ್ಯಕ್ತಿ ರಮೇಶ್ ಅರವಿಂದ್. ಸಿನಿಮಾ ಜೊತೆ ಜೊತೆಗೆ ಸ್ಫೂರ್ತಿದಾಯಕ ಮಾತುಗಳ ಮೂಲಕ ಎಂತವರನ್ನು ಹುರಿದುಂಬಿಸುವ ವ್ಯಕ್ತಿತ್ವ ಅವರದ್ದು. ಯಾವುದೇ ಕಾರ್ಯಕ್ರಮ ಇರಲಿ, ಯಾವುದೇ ವೇದಿಕೆ ಇರಲಿ ಅಲ್ಲಿ ರಮೇಶ್ ಅರವಿಂದ್ ಇದ್ದಾರೆ ಅಂದ್ರೆ ಒಂದೊಳ್ಳೆ ಸಂದೇಶ ನೀಡುವ, ಸ್ಫೂರ್ತಿದಾಯಕ ಮಾತುಗಳ ಮೂಲಕ ಜಾಗೃತಗೊಳಿಸುವ ಕೆಲಸವನ್ನು ಅವರು ಮಾಡಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಅನುಭವಗಳನ್ನು ಕಥೆಯಾಗಿಸಿ ಹೇಳುವ ಮೂಲಕ ಯುವ ಜನತೆಗೆ ಪ್ರೇರಣೆ ನೀಡುತ್ತಿದ್ದಾರೆ. ಇದೀಗ ರಮೇಶ್ ಅರವಿಂದ್ ಹೊಸ ವರ್ಷಕ್ಕೆ ಹೊಸದಾದ ಪ್ರಯೋಗದ ಮೂಲಕ ಇನ್ನಷ್ಟು ಜನರಿಗೆ ಪ್ರೇರಣೆ ನೀಡಲು ಅಡಿ ಇಟ್ಟಿದ್ದಾರೆ. ಅದುವೇ ಮಾಸದ ಮಾತುಗಳು.
ಪ್ರತಿ ವರ್ಷ ಹೊಸ ವರ್ಷಕ್ಕೆ ತಮ್ಮದೇ ವಿಶಿಷ್ಟ ರೀತಿಯಲ್ಲಿ ಎಲ್ಲರಿಗೂ ಶುಭ ಕೋರುತ್ತಿದ್ದ ರಮೇಶ್ ಅರವಿಂದ್ ಈ ಬಾರಿ ತಮ್ಮ ಅನುಭವಗಳನ್ನು ಕಥೆಯಾಗಿಸಿ ಆಡಿಯೋ ಮುಖಾಂತರ ಹರಿಯ ಬಿಡಲಿದ್ದಾರೆ. ಅರೆ ಇದೇನಪ್ಪಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಆದ್ರೆ ಇದನ್ನು ಸಾಧ್ಯವಾಗಿಸುತ್ತಿರೋದು Storytel App. Storytel ಆಪ್ ಕನ್ನಡದಲ್ಲಿ Storytel ಒರಿಜಿನಲ್ ಆಡಿಯೋ ಸರಣಿ ಬಿಡುಗಡೆ ಮಾಡುತ್ತಿದೆ. ಈ ಕನ್ನಡ ಆಡಿಯೋ ಭಾಗವಾಗಿ ರಮೇಶ್ ಅರವಿಂದ್ ಅನುಭವಗಳು, ಪ್ರೇರಣಾತ್ಮಕ, ಭರವಸೆ ತುಂಬುವ ಕಥೆಗಳು ಮೂಡಿಬರಲಿದೆ. ಸ್ವತಃ ರಮೇಶ್ ಅರವಿಂದ್ ರಚಿಸಿರುವ 90 ನಿಮಿಷದ ಕಥೆಗಳು ರಮೇಶ್ ಅರವಿಂದ್ ಅವರ ದನಿಯಲ್ಲೇ ಆಡಿಯೋ ರೂಪದಲ್ಲಿ Storytel App ನಲ್ಲಿ ಬಿಡುಗಡೆಯಾಗಲಿದೆ.
Advertisement
ಈ ಸರಣಿಗೆ ಮಾಸದ ಮಾತುಗಳು ಎಂದು ಶೀರ್ಷಿಕೆ ಇಡಲಾಗಿದೆ. 90 ನಿಮಿಷದ ಹನ್ನೆರಡು ಕಥೆಗಳಿದ್ದು ಜನವರಿ 2ಕ್ಕೆ ಮಾಸದ ಮಾತುಗಳು ಸರಣಿ Storytel App ನಲ್ಲಿ ಬಿಡುಗಡೆಯಾಗುತ್ತಿದೆ. ಪ್ರತಿ ಕಥಾನಕ ಪ್ರತಿಯೊಬ್ಬರಿಗೂ ಹೊಸ ವರ್ಷಕ್ಕೆ ಭರವಸೆಯ ಬೆಳಕಾಗಬೇಕು ಎನ್ನುವುದೇ ಇದರ ಹಿಂದಿರುವ ಸೊಗಸಾದ ಉದ್ದೇಶ.
Advertisement
Storytel ಕನ್ನಡ ಸರಣಿ ಬಗ್ಗೆ ರಮೇಶ್ ಅರವಿಂದ್ ಕೂಡ ಸಂತಸ ವ್ಯಕ್ತಪಡಿಸಿದ್ದು, ಇಲ್ಲಿ ಹೇಳುವ ಕಥೆಗಳು ನನ್ನ ಜೀವನದಲ್ಲಿ ನಡೆದ ಘಟನೆಗಳು, ಅನುಭವಗಳು, ನಾನು ತಿಳಿದುಕೊಂಡಿದ್ದು ಇವುಗಳೆಲ್ಲವನ್ನೂ ಒಳಗೊಂಡಿದ್ದು, ಯಾರು ಬೇಕಾದರೂ, ಯಾವಾಗ ಬೇಕಾದರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಕೇಳುಗರಲ್ಲಿ ಭರವಸೆ ಮೂಡಿಸುವ, ಪ್ರೇರೆಪಿಸುವ, ಉತ್ತೇಜಿಸುವ ಮುನ್ನಡೆಸುವ ಈ ಭೂಮಿಕೆ 2022ಕ್ಕೆ ಒಂದೊಳ್ಳೆ ಮಾರ್ಗದರ್ಶಕ ಆಗೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಾರೆ ರಮೇಶ್ ಅರವಿಂದ್.