ಸ್ಯಾಂಡಲ್ವುಡ್ನ ಡೈನಾಮಿಕ್ ಫ್ರಿನ್ಸ್ ಪ್ರಜ್ವಲ್ ದೇವರಾಜ್ ಸುಮಾರು ಎರಡು ವರ್ಷಗಳಿಂದ ತೆರೆಮೇಲೆ ಕಾಣಿಸುತ್ತಿಲ್ಲ. ಮದ್ವೆ ಆದ್ಮೇಲೆ ಸಿನ್ಮಾ ಮಾಡೋದ್ ಬಿಟ್ರಾ ಅಂತ ಬೇಸರವಾಗಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದೇ ‘ಜಂಟಲ್ ಮನ್’ ಚಿತ್ರದಿಂದ. ಪ್ರಜ್ವಲ್‍ರ ಈ ಜಂಟಲ್‍ಮನ್ ಅವತಾರಕ್ಕೆ ನಾಯಕಿ ಯಾರು ಅಂದಾಗ, ಸದ್ಯ ಚಂದನವನದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇದ್ದ ಬ್ಯೂಟಿ ನಿಶ್ವಿಕಾ ನಾಯ್ಡು ಅಂತ ಕೇಳಿ ಫುಲ್ ಖುಷ್ ಆಗಿದ್ರು ಪಡ್ಡೆ ಹೈಕಳು. ಇದೆಲ್ಲ ಸರಿ ‘ಜಂಟಲ್ ಮನ್’ ಏನು ಅಂದವರಿಗೆ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ವಿಭಿನ್ನವಾಗಿನೇ ಕ್ಯೂರಿಯಾಸಿಟಿ ಹುಟ್ಟುಹಾಕಿದ್ರು.
Advertisement
ಹೌದು. ಯಾಕಂದ್ರೆ ಈ ಚಿತ್ರ ನಿಂತಿರೋದೇ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ರೇರ್ ನಿದ್ರಾ ಕಾಯಿಲೆ ಮೇಲೆ. ಸೈಂಟಿಫಿಕ್ ಪ್ರಕಾರ ಈ ಸಿಂಡ್ರೋಮ್ ಇರುವವರು ದಿನದಲ್ಲಿ 18 ಗಂಟೆ ನಿದ್ರೆ ಮಾಡ್ತಾರೆ. ಆದರೆ ಇನ್ನುಳಿದ 6 ಗಂಟೆ ಎಚ್ಚರವಾಗಿರ್ತಾರೆ. ಆದರೆ ನಾಯಕನಾಗಿ ಪ್ರಜ್ವಲ್ ಸಿನಿಮಾದಲ್ಲಿ ಫೈಟ್, ಪ್ರೀತಿ, ಹಾಡು, ಸ್ಟಂಟ್ಸ್ ಇವೆಲ್ಲ ಯಾವಾಗ್ ಮಾಡ್ತಾರೆ…? ಇವೆಲ್ಲ ಒಂದು ಚಿತ್ರದಲ್ಲಿ ಇಲ್ಲದೇ ಇದ್ರೆ ಹೇಗೆ ಅಂದವರಿಗೆ ಚಿತ್ರದ ಟ್ರೈಲರ್ ಉತ್ತರ ಕೊಟ್ಟು,ಜಂಟಲ್ ಮನ್ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿತ್ತು.
Advertisement
Advertisement
ಇನ್ನು ಚಿತ್ರದಲ್ಲಿರೋ ಅಜನೀಶ್ ಲೋಕನಾಥ್ ಅವರ ಸಂಗೀತ ಸಖತ್ ಹಿಡಿಸಿದೆ. ಇಷ್ಟು ದಿನ ಸೂಪರ್ ಸಕ್ಸಸ್ ಸಿನಿಮಾಗಳನ್ನು ನಿರ್ದೇಶನ ಮಾಡ್ತಿದ್ದ ಗುರುದೇಶ್ ಪಾಂಡೆ, ಜಂಟಲ್‍ಮನ್‍ಗೆ ಬಂಡವಾಳ ಹೂಡಿ ನಿರ್ಮಾಪಕರಾಗ್ತಿರೋದು ಇನ್ನೊಂದು ವಿಶೇಷ. ಹಲವು ತಾರಾಬಳಗ ಹೊಂದಿರೋ ಈ ಚಿತ್ರದಲ್ಲಿ ವಿಶೇಷ ಪಾತ್ರಕ್ಕಾಗಿ ಸಂಚಾರಿ ವಿಜಯ್ ಬಣ್ಣ ಹಚ್ಚಿರೋದು ಮತ್ತೊಂದು ಹೈಲೇಟ್. ಒಟ್ಟಾರೆ ಶುರುವಾದಾಗಿನಿಂದ ಕ್ಯೂರಿಯಾಸಿಟಿ ಹುಟ್ಟಿಸಿ, ಫೆ.07ಕ್ಕೆ ಥಿಯೇಟರ್ ಗೆ ಕಾಲಿಡುತ್ತಿರೋ ಈ ಜಂಟಲ್ ಮನ್, ಡೈನಾಮಿಕ್ ಪ್ರಿನ್ಸ್ ಪ್ರಜ್ಜುಗೆ ಧಮಾಕ ಎಂಟ್ರಿ ಕೊಡುತ್ತಾ ಅನ್ನೋದರೊಂದಿಗೆ ನಿಶ್ವಿಕಾ ನಾಯ್ಡು ಜೊತೆ ಡೈನಾಮಿಕ್ ಪ್ರಿನ್ಸ್ ರೊಮ್ಯಾನ್ಸ್ ಹೇಗಿರತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.