‘ಉದ್ಭವ’ ಸಿನಿಮಾ ನೋಡಿದವರು ‘ಮತ್ತೆ ಉದ್ಭವ’ಕ್ಕಾಗಿ ಕಾಯುತ್ತಿದ್ದಾರೆ. ನೋಡದವರೆಲ್ಲ ‘ಮತ್ತೆ ಉದ್ಭವ’ ಹೆಸರು ಕೇಳಿದ್ದೇ ತಡ ‘ಉದ್ಭವ’ ಸಿನಿಮಾವನ್ನ ಒಂದು ರೌಂಡ್ ನೋಡಿ, ‘ಮತ್ತೆ ಉದ್ಭವ’ ಇನ್ನೇಗಿರಬಹುದು ಎಂಬ ಅಂದಾಜು ಹಾಕುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಸಿನಿಮಾದ ರುವಾರಿ ನಿರ್ದೇಶನ ಕೂಡ್ಲು ರಾಮಕೃಷ್ಣ.
Advertisement
ಕೂಡ್ಲು ರಾಮಕೃಷ್ಣ ಅವರ ನಿರ್ದೇಶನದ ಸಿನಿಮಾಗಳನ್ನೆಲ್ಲ ನೋಡಿದ್ದವರು ಈ ಸಿನಿಮಾದ ನಿರ್ಮಾಪಕರು. ಹೀಗಾಗಿಯೇ ಈ ಸಿನಿಮಾದ ನಿರ್ಮಾಣಕ್ಕೆ ನಿತ್ಯಾನಂದ ಭಟ್, ಸತ್ಯಾ ವೆಂಕಟೇಶ್, ಮಹೇಶ್ ಮತಗತು ರಾಜೇಶ್ ಕೈ ಹಾಕಿದ್ದಾರೆ. ಈ ಮುಂಚೆ ಕಾಫಿತೋಟ ಸಿನಿಮಾಗೆ ಬಂಡವಾಳ ಹೂಡಿದ್ದ ರಾಜೇಶ್, ಸಿನಿಮಾ ಗೆದ್ದರೆ ಮಾತ್ರ ನೆಕ್ಸ್ಟ್ ಮೂವಿ ಅಂತ ತೀರ್ಮಾನಿಸಿದ್ದರಂತೆ. ಕಾಫಿತೋಟ ಗೆದ್ದ ಕಾರಣ ಇಂದು, ಈ ನಾಲ್ಕು ಜನ ಸ್ನೇಹಿತರು ಸೇರಿ ಒಂದು ನಿರ್ಮಾಣ ಸಂಸ್ಥೆಯೊಂದನ್ನು ಕಟ್ಟಿ ‘ಮತ್ತೆ ಉದ್ಭವ’ ಮಾಡಿದ್ದಾರೆ.
Advertisement
Advertisement
ಈ ಸಿನಿಮಾಗಾಗಿ ಅದರಲ್ಲೂ ಕ್ಲೈಮ್ಯಾಕ್ಸ್ ಸೆಟ್‍ಗಾಗಿಯೇ 22 ಲಕ್ಷ ಖರ್ಚಾಗಿದೆಯಂತೆ. ಕೇಳಿದ ಎಲ್ಲಾ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದು, 150 ಜನ ಜೂನಿಯರ್ಸ್ ಕರೆಸಿ ಅಂದ್ರೆ 200 ಜನ ಕರೆಸ್ತಾ ಇದ್ರು. ಯಾವುದಕ್ಕೂ ಕೊರತೆ ಕಾಡದಂತೆ ನಿರ್ಮಾಪಕರು ನೋಡಿಕೊಂಡಿದ್ದಾರೆ ಎಂದು ನಿರ್ದೇಶಕ ಕೂಡ್ಲು ರಾಮಕೃಷ್ಣ ಹೇಳಿಕೊಂಡಿದ್ದಾರೆ.
Advertisement
ಈ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಗಳು ತುಂಬಾ ಮುಖ್ಯವಾಗುತ್ತವೆ. `ಉದ್ಭವ’ದಲ್ಲಿ ಅನಂತ್ ನಾಗ್ ಇದ್ರು. ಮುಂದುವರಿದ ಅವರ ಪಾತ್ರವನ್ನ ನಿರ್ವಹಿಸೋದಕ್ಕೆ ರಂಗಾಯಣ ರಘು ಸೂಕ್ತವಾಗಿದ್ದಾರೆ. ಹಾಗೇ ಉಳಿದೆಲ್ಲಾ ಪಾತ್ರಗಳು ಕೂಡ ಅಷ್ಟೇ ಮುಖ್ಯವಾಗುತ್ತವೆ. ಇಲ್ಲಿ ರಂಗಾಯಣ ರಘು ಹೆಂಡತಿ ಪಾತ್ರದಲ್ಲಿ ಸುಧಾ ಬೆಳವಾಡಿಯವರು ಮಾಡಿದ್ದಾರೆ. ಸಿನಿಮಾದಲ್ಲಿನ ಕೆಲವೊಂದು ಅನುಭವಗಳನ್ನ ಸುಧಾ ಬೆಳವಾಡಿ ಅವರು ಹಂಚಿಕೊಂಡಿದ್ದಾರೆ. `ಕೂಡ್ಲು ರಾಮಕೃಷ್ಣ ಅವರ ಜೊತೆ `ಮಿಸ್ಟರ್ ಡೂಪ್ಲಿಕೇಟ್’ ಅನ್ನೋ ಸಿನಿಮಾವನ್ನ ಮಾಡಿದ್ದೀನಿ. ರಂಗಾಯಣ ರಘು ಕಾಂಬಿನೇಶನ್ ನಲ್ಲಿ ಹೀರೋ ಅಮ್ಮನಾಗಿ ಮಾಡಿದ್ದೀನಿ. ಒಮ್ಮೊಮ್ಮೆ ಕಾಮಿಡಿ, ಇನ್ನೊಂದೊಮ್ಮೆ ಎಮೋಷನಲ್ಲಾಗಿರೋ ಪಾತ್ರ ನಿರ್ವಹಣೆ ಮಾಡಿದ್ದೇನೆ ಅಂತಾರೆ.
ಸಿನಿಮಾದಲ್ಲಿ ಪ್ರಮೋದ್‍ಗೆ ನಾಯಕಿಯಾಗಿ ಮಿಲನ ನಾಗರಾಜ್ ಅಭಿನಯಿಸಿದ್ದು, ಸುಧಾ ಬೆಳವಾಡಿ, ರಂಗಾಯಣ ರಘು ಕಾಂಬಿನೇಷನ್ ಜನರನ್ನ ಮತ್ತಷ್ಟು ಮನರಂಜಿಸುತ್ತೆ. ವಿ. ಮನೋಹರ್ ಸಂಗೀತದಲ್ಲಿ ಕಿವಿಗೆ ತಂಪೆನಿಸುವ ಹಾಡುಗಳಿದ್ದು, ಥ್ರಿಲ್ಲರ್ ಮಂಜು ಸಾಹಸವಿದೆ. ಫುಲ್ ಮನರಂಜನೆ ನೀಡಲು ಕೂಡ್ಲು ಟೀಂ ರೆಡಿಯಾಗಿದೆ. ಇನ್ನೆನಿದ್ರು ಆ ಮೀಲ್ಸ್‍ನ ಜನ ಸವಿದು ತೃಪ್ತಿ ಪಟ್ಟುಕೊಳ್ಳಬೇಕಷ್ಟೆ.