Connect with us

Cinema

ಇನ್ನೊಂದು ವಾರದಲ್ಲಿ ಮದ್ವೆಯಾಗಲಿದ್ದಾರೆ ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್ ರಕ್ಷಿತ್-ರಶ್ಮಿಕಾ!

Published

on

ಬೆಂಗಳೂರು: ಸ್ಯಾಂಡಲ್‍ವುಡ್ ಅಂಗಳದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಟಿ ಮೇಘನರಾಜ್- ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ, ಚಂದನವನದ ಮತ್ತೊಂದು ಕ್ಯೂಟ್ ಕಪಲ್ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ.

ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿರುವಾಗಲೇ ಮೇಘನರಾಜ್- ಚಿರಂಜೀವಿ ಸರ್ಜಾ ಹಸೆಮಣೆ ಏರಿದ್ದಾರೆ. ಸ್ಯಾಂಡಲ್‍ವುಡ್‍ನ ಕೆಲವು ಸ್ಟಾರ್ಸ್ ಕ್ಯಾಂಪೇನ್‍ನಲ್ಲಿ ತೊಡಗಿಕೊಂಡಿದ್ದರೆ ಇತ್ತ ಚಿರು- ಮೇಘನಾ, ರಾಜಕೀಯದ ಗೋಜಿಗೆ ಹೋಗದೇ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಮದುವೆಯಾದರು. ಆದರೆ ಇದೀಗ ಚಂದನವನದ ಮತ್ತೊಂದು ಜೋಡಿ ಹಸೆಮಣೆ ಏರೋಕೆ ಸಜ್ಜಾಗಿದೆ.

ವಿರಾಜಪೇಟೆಯಲ್ಲಿ ಗ್ರ್ಯಾಂಡ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇದೀಗ ಸದ್ದಿಲ್ಲದೇ ಮದುವೆಯಾಗೋದಕ್ಕೆ ಹೊರಟಿದ್ದಾರೆ. ಇನ್ನೂ ಎರಡು ಮೂರು ವರ್ಷ ಮ್ಯಾರೇಜ್ ಆಗೋ ಮಾತಿಲ್ಲ ಎಂದು ನಟಿ ರಶ್ಮಿಕಾ ಹೇಳಿದ್ದರು. ಆದರೆ ಈಗ ಏಕೆ ತರಾತುರಿಯಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ಕೂತುಹಲ ಅಭಿಮಾನಿಗಳಿಗೆ ಮೂಡಿದೆ.

ಖಾಸಗಿ ವಾಹಿನಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ರಕ್ಷಿತ್ ಗೆಸ್ಟ್ ಆಗಿ ಹೋಗಿದ್ದರು. ಕಾರ್ಯಕ್ರಮದಲ್ಲಿ ನಡೆಯುವ ಸತ್ಯ ಅಥವಾ ಧೈರ್ಯ ಸುತ್ತಿನಲ್ಲಿ ರಕ್ಷಿತ್ ಸತ್ಯ ಆಯ್ಕೆ ಮಾಡಿಕೊಂಡರು. ಆಗ ಇನ್ನೊಂದು ವಾರದಲ್ಲಿ ಮದುವೆ ಆಗೋದರ ಬಗ್ಗೆ ರಶ್ಮಿಕಾ ಏನ್ ಹೇಳ್ತಾರೆ ಕೇಳಿ ಎಂದು ಶಿವಣ್ಣ ರಕ್ಷಿತ್‍ಗೆ ಹೇಳಿದ್ದರು.

ಆಗ ರಕ್ಷಿತ್ ಕಾರ್ಯಕ್ರಮದಲ್ಲೇ ರಶ್ಮಿಕಾಗೆ ಕರೆ ಮಾಡಿ ಮುಂದಿನ ವಾರ ದಿನಾಂಕ ಚೆನ್ನಾಗಿದೆ. ಅಲ್ಲದೇ ಮನೆಯಲ್ಲಿ ಮುಂದಿನ ವಾರನೇ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದಾಗ, ರಶ್ಮಿಕಾ ಹಿಂದೆ ಮುಂದೆ ಯೋಚಿಸದೇ ಮದುವೆ ಆಗೋಣ ಎಂದು ರಕ್ಷಿತ್ ಶೆಟ್ಟಿಗೆ ತಿಳಿಸಿದ್ದಾರೆ.

ಶಿವಣ್ಣ ಕೊಟ್ಟಿರೋ ಡೇರ್ ಆಟಕ್ಕೆ ರಕ್ಷಿತ್, ರಶ್ಮಿಕಾ ಜೊತೆ ಫೋನಿನಲ್ಲಿ ಮಾತನಾಡಿದ್ದರು. ಲವ್‍ಲೈಫ್‍ನ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿರುವ ರಕ್ಷಿತ್- ರಶ್ಮಿಕಾ ಸದ್ಯಕ್ಕಂತೂ ಮದುವೆ ಆಗುತ್ತಿಲ್ಲ. ಆದರೆ ರಕ್ಷಿತ್ ಮಾತನ್ನು ರಶ್ಮಿಕಾ ತಿರಸ್ಕರಿಸಲ್ಲ ಎನ್ನುವುದಕ್ಕೆ ಈ ಉತ್ತರವೇ ಸಾಕ್ಷಿ. ಏನೇ ಇರಲಿ ರಶ್ಮಿಕಾ ಅಂತೂ ಮದುವೆಗೆ ರೆಡಿ ಆಗಿದ್ದಾರೆ.

ಸದ್ಯಕ್ಕೆ ರಕ್ಷಿತ್ ಶ್ರೀಮನ್ನಾರಾಯಣ ಹಾಗೂ ಚಾರ್ಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರಶ್ಮಿಕಾ ಯಜಮಾನ ಹಾಗೂ ಟಾಲಿವುಡ್ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರ ಮದುವೆ ಇನ್ನೊಂದು ವಾರದಲ್ಲಿ ನಡೆಯೋದು ಸುದ್ದಿ ಕಾರ್ಯಕ್ರಮದ ಒಂದು ಭಾಗ ಹೊರತು ಇವರಿಬ್ಬರು ಯಾವಾಗ ಮದುವೆಯಾಗುತ್ತೇವೆ ಎನ್ನುವುದನ್ನು ತಿಳಿಸಿಲ್ಲ.

Click to comment

Leave a Reply

Your email address will not be published. Required fields are marked *