ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ(Harshika Poonacha) ಅವರು ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇದೀಗ ಅಮ್ಮನಾಗ್ತಿರುವ ನಟಿಗೆ ಗೋಲ್ಡನ್ ಸ್ಟಾರ್ ಗಣೇಶ್ (Goldenstar Ganesh) ದಂಪತಿ ಸರ್ಪ್ರೈಸ್ ಬೇಬಿ ಶವರ್ ಪಾರ್ಟಿ ಆಯೋಜಿಸಿದ್ದಾರೆ. ಬೇಬಿ ಶವರ್ ಪಾರ್ಟಿಯಲ್ಲಿ ನಟಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
8 ತಿಂಗಳು ತುಂಬು ಗರ್ಭಿಣಿ ಆಗಿರುವ ಹರ್ಷಿಕಾಗೆ ಬೇಬಿ ಶವರ್ ಪಾರ್ಟಿ ಆಯೋಜಿಸಿ ಗಣೇಶ್ ಮತ್ತು ಶಿಲ್ಪಾ ದಂಪತಿ ಸರ್ಪ್ರೈಸ್ ನೀಡಿದ್ದಾರೆ.
ಈ ಸಂಭ್ರಮದಲ್ಲಿ ನಟಿ ಶರಣ್ಯಾ ಶೆಟ್ಟಿ, ಅಮೂಲ್ಯ ಜಗದೀಶ್ ದಂಪತಿ, ಮಾಲಾಶ್ರೀ, ಆರಾಧನಾ, ಪ್ರಿಯಾಂಕಾ ಉಪೇಂದ್ರ, ಅನುಪ್ರಭಾಕರ್, ಹಿರಿಯ ನಟಿ ಶ್ರುತಿ ಮತ್ತು ಅವರ ಪುತ್ರಿ ಗೌರಿ ಸೇರಿದಂತೆ ಅನೇಕರು ಭಾಗಿಯಾಗಿ ಹರ್ಷಿಕಾಗೆ ವಿಶ್ ಮಾಡಿದ್ದಾರೆ.
ಇನ್ನೂ ಅಕ್ಟೋಬರ್‌ನಲ್ಲಿ ಹರ್ಷಿಕಾ ಮತ್ತು ಭುವನ್ ಜೋಡಿ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಪುಟ್ಟ ಕಂದಮ್ಮನನ್ನು ನೋಡಲು ಎದುರು ನೋಡುತ್ತಿದ್ದಾರೆ.
ಹಲವು ವರ್ಷಗಳು ಪ್ರೀತಿಸಿ ಕಳೆದ ವರ್ಷ ಆಗಸ್ಟ್‌ನಲ್ಲಿ ಹರ್ಷಿಕಾ ಮತ್ತು ಭುವನ್ ಹುಟ್ಟೂರಿನಲ್ಲಿ ಮದುವೆಯಾದರು. ಇದನ್ನೂ ಓದಿ:Bigg Boss Kannada 11: ಸ್ವರ್ಗ, ನರಕದ ಪಾಠ ಮಾಡಿದ ಸುದೀಪ್
ಈ ಮದುವೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕರು ಭಾಗಿಯಾಗಿ ನವಜೋಡಿಗೆ ಶುಭಕೋರಿದ್ದರು. ಇದನ್ನೂ ಓದಿ:ತೆಲುಗಿನತ್ತ ರವೀನಾ ಟಂಡನ್- ವಿಲನ್ ಆದ ‘ಕೆಜಿಎಫ್ 2’ ನಟಿ
ಅಂದಹಾಗೆ, ಭುವನ್ ನಟನೆಯ ಹೊಸ ಚಿತ್ರಕ್ಕೆ ಹರ್ಷಿಕಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಪತಿ ಸಿನಿಮಾವನ್ನು ನಟಿಯೇ ನಿರ್ಮಾಣ ಮಾಡಲು ಮುಂದಾಗಿದ್ದಾರೆ.