Connect with us

Bengaluru City

ಕಣ್ಣಿಗೆ ಕಾಣುವ ದೇವರಿಗೆ ಸ್ಯಾಂಡಲ್‍ವುಡ್ ತಾರೆಯರ ಸ್ಪೆಷಲ್ ಪೋಸ್ಟ್

Published

on

ಬೆಂಗಳೂರು: ಅಮ್ಮ ಎಂದರೆ ಮಕ್ಕಳ ಪಾಲಿಗೆ ಕಣ್ಣಿಗೆ ಕಾಣುವ ದೇವರು. ಕುಟುಂಬಕ್ಕಾಗಿ ಹಗಲಿರುಳು ಶ್ರಮಿಸುವ ಜೀವ ಎಂದರೆ ಅಮ್ಮ. ಇಂದು ನಮ್ಮನ್ನು ಭೂಮಿಗೆ ತಂದ ದೇವರಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದ್ದು, ಎಲ್ಲರೂ ತಮ್ಮ ತಾಯಿಯಂದಿರಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಈ ವಿಶೇಷ ದಿನವನ್ನು ಸ್ಯಾಂಡಲ್‍ವುಡ್ ಕಲಾವಿದರೂ ಕೂಡ ಖುಷಿಯಿಂದ ಆಚರಿಸಿದ್ದು, ತಮ್ಮ ಮುದ್ದಿನ ಅಮ್ಮಂದಿರ ಜೊತೆಗಿರುವ ಫೋಟೋಗಳನ್ನು ಪೋಸ್ಟ್ ಮಾಡಿ ತಾಯಿ ಪ್ರೀತಿಗೆ ಸಾಟಿಯಿಲ್ಲ ಎಂದಿದ್ದಾರೆ.

ಚಂದನವನದ ನಟ, ನಟಿಯರು ತಮ್ಮ ಅಮ್ಮಂದಿರ ಜೊತೆಗಿರುವ ಕ್ಯೂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಅಲ್ಲದೇ ಕೆಲವರು ಅಮ್ಮನನ್ನು ವರ್ಣಿಸಿ ಕವಿತೆ ಬರೆದು ಎಲ್ಲರ ಗಮನ ಸೆಳೆದಿದ್ದಾರೆ. ನವರಸ ನಾಯಕ ಜಗ್ಗೇಶ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಶ್ರೀಮುರುಳಿ, ರಾಘವೇಂದ್ರ ರಾಜ್‍ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಮೇಶ್ ಅರವಿಂದ್, ನಟಿ ರಕ್ಷಿತಾ, ಪ್ರಣಿತಾ, ಹರಿಪ್ರಿಯಾ, ರಚಿತಾ ರಾಮ್ ಹೀಗೆ ಹಲವು ಕಲಾವಿದರು ಅಮ್ಮಂದಿರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಾಯಿಯಂದಿರ ದಿನದ ಶುಭಾಷಯ ಕೋರಿದ್ದಾರೆ.

View this post on Instagram

#ಅಮ್ಮನದಿನದ ಶುಭಾಶಯಗಳು… ಸನಾತನಧರ್ಮದಲ್ಲಿ ಅಮ್ಮನನ್ನು ಜಗತ್ತಿಗೆ ಹೋಲಿಸಲಾಗಿದೆ! ಜಗತ್ತು ಪಂಚಭೂತದಿಂದ ಸೃಷ್ಟಿಯಾಗಿದೆ! ಹಾಗೆ ತಾಯಿಯ ಒಡಲು ಪಂಚಭೂತಗಳಿಂದ! ಅಂದರೆ "ಅಗ್ನಿ ವಾಯು ಜಲ ಭೂಮಿ ಆಕಾಶ" (ಅಗ್ನಿ ಅಮ್ಮನ ಬೆಚ್ಚನೆಯ ಮಡಿಲು ವಾಯು ಅಮ್ಮನ ಉಸಿರು ದೇಣಿಗೆ ಜಲ ಅಮ್ಮನ ಎದೆಹಾಲು ಭೂಮಿ ಅಮ್ಮ ಜನ್ಮಕೊಟ್ಟ ಉದರ ಆಕಾಶ ಅವಳು ಕೊಟ್ಟ ಪ್ರೀತಿಯ ಎತ್ತರ ) ಇಂಥ ದೇವತೆಗೆ ನಾವೇನು ಮರಳಿಕೊಟ್ಟರು ಸಾಸಿವೆಯ ಸಹಸ್ರ ಕಣದ ಧೂಳಿಗೆ ಸಮ! ಇಂದು ಮಾತ್ರ ನೆನೆಯುವ ಬದಲು ಸಾಯುವವರೆಗೂ ಆರಾಧಿಸಿ ಅಮ್ಮನನ್ನ. ಶುಭದಿನ…

A post shared by ???????????????????????????? ???????????????????????????????????????????????????? (@actor_jaggesh) on

ಪೋಸ್ಟ್ ನಲ್ಲಿ ಏನಿದೆ?
ನವರಸ ನಾಯಕ ಜಗ್ಗೇಶ್ ಅಮ್ಮನನ್ನು ಜಗತ್ತಿಗೆ ಹೋಲಿಸಿ, ಅಮ್ಮನ ಪ್ರೀತಿಯನ್ನು ವರ್ಣಿಸಿದ್ದಾರೆ. “ಅಮ್ಮಂದಿರ ದಿನದ ಶುಭಾಶಯಗಳು. ಸನಾತನ ಧರ್ಮದಲ್ಲಿ ಅಮ್ಮನನ್ನು ಜಗತ್ತಿಗೆ ಹೋಲಿಸಲಾಗಿದೆ. ಜಗತ್ತು ಪಂಚಭೂತದಿಂದ ಸೃಷ್ಟಿಯಾಗಿದೆ. ಹಾಗೆ ತಾಯಿಯ ಒಡಲು ಪಂಚಭೂತಗಳಿಂದ ಅಂದರೆ “ಅಗ್ನಿ, ವಾಯು, ಜಲ, ಭೂಮಿ, ಆಕಾಶ” (ಅಗ್ನಿ ಅಮ್ಮನ ಬೆಚ್ಚನೆಯ ಮಡಿಲು, ವಾಯು ಅಮ್ಮನ ಉಸಿರು ದೇಣಿಗೆ, ಜಲ ಅಮ್ಮನ ಎದೆಹಾಲು, ಭೂಮಿ ಅಮ್ಮ ಜನ್ಮಕೊಟ್ಟ ಉದರ, ಆಕಾಶ ಅವಳು ಕೊಟ್ಟ ಪ್ರೀತಿಯ ಎತ್ತರ) ಇಂಥ ದೇವತೆಗೆ ನಾವೇನು ಮರಳಿಕೊಟ್ಟರು ಸಾಸಿವೆಯ ಸಹಸ್ರ ಕಣದ ಧೂಳಿಗೆ ಸಮ. ಇಂದು ಮಾತ್ರ ನೆನೆಯುವ ಬದಲು ಸಾಯುವವರೆಗೂ ಆರಾಧಿಸಿ ಅಮ್ಮನನ್ನ” ಎಂದು ಅಮ್ಮನನ್ನು, ಅಮ್ಮನ ಪ್ರೀತಿಯನ್ನು ವರ್ಣಿಸಿ, ತಮ್ಮ ಕೈಮೇಲೆ ಇರುವ ತಮ್ಮ ಅಮ್ಮನ ಟ್ಯಾಟು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರು ಅಮ್ಮಂದಿರ ದಿನಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. “ಜೀವ ಕೊಟ್ಟ ನನ್ನ ಹೆತ್ತ ತಾಯಿಗೆ, ಜೀವನ ಕೊಟ್ಟ ನನ್ನ ಕನ್ನಡ ತಾಯಿಗೆ, ಅನ್ನ ಕೊಟ್ಟ ಭೂತಾಯಿಗೆ, ತಮ್ಮ ಹೃದಯಗಳಲ್ಲಿ ಪ್ರೀತಿಯ ಸ್ಥಾನ ಕೊಟ್ಟು, ನನ್ನನ್ನು ಅಕ್ಕರೆಯಿಂದ ಬೆಳೆಸುತ್ತಿರುವ ಎಲ್ಲಾ ಮಾತೃಹೃದಯಿ ಸ್ವರೂಪ ಅಭಿಮಾನಿ ತಾಯಂದಿರಿಗೆ ನಾನು ಸದಾ ಋಣಿ. ವಿಶ್ವದ ಎಲ್ಲಾ ಅಮ್ಮಂದಿರಿಗೆ ಈ ಕಿಚ್ಚನ ಶುಭಾಶಯಗಳು” ಎಂದು ಬರೆದು ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಅಮ್ಮ ನೀನು ನಮಗಾಗಿ ಎಂದು ಪುನೀತ್ ರಾಜ್‍ಕುಮಾರ್ ಪವರ್‍ಫುಲ್ ವಿಶ್ ಜೊತೆ ಅಮ್ಮನ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಡಿನ ಸಾಲುಗಳನ್ನು ಬರೆದು ಅಮ್ಮನ ಪ್ರೀತಿ ವರ್ಣಿಸಿ ಶುಭಕೋರಿದ್ದಾರೆ. ತಾಯಿನೇ ಎಲ್ಲಾ ಬದಲಾಗೋದಿಲ್ಲ ಯುಗ ಉರುಳಿ ಕಳೆದೋದರೂ ಎಂದು ಶಿವಣ್ಣ ಅಮ್ಮನನ್ನು ನೆನೆದು ಫೋಟೋವನ್ನು ಹಂಚಿಕೊಂಡಿದ್ದಾರೆ.

ಇತ್ತ ನಟಿ ರಕ್ಷಿತಾ ಪ್ರೇಮ್ ಅಮ್ಮನೊಂದಿಗೆ ಇರುವ ತಮ್ಮ ಬಾಲ್ಯದ ಫೋಟೋವನ್ನು ಹಂಚಿಕೊಂಡು ಹ್ಯಾಪಿ ಮದರ್ಸ್ ಡೇ ಎಂದು ವಿಶ್ ಮಾಡಿದ್ದಾರೆ. ನಟಿ ರಚಿತಾ ರಾಮ್ ಅವರು ಕೂಡ ಅಮ್ಮನ ಜೊತೆ ಇರುವ ಬಾಲ್ಯದ ಫೋಟೋ, ಈಗಿನ ಫೋಟೋಗಳನ್ನ ಅಪ್ಲೋಡ್ ಮಾಡಿ ಲವ್ ಯು ಅಮ್ಮ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *