ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಸ್ನೇಹಿತರು ಒಟ್ಟಿಗೆ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿಯನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಒಂದೇ ನಾಣ್ಯದ ಎರಡು ಮುಖಗಳು ಎಂದು ಬರೆದುಕೊಂಡು ಸ್ನೇಹಿತರೊಟ್ಟಿಗೆ ಇರುವ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ರಮ್ಯಾ ಅವರ ಹೇರ್ ಸ್ಟೈಲ್‍ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದನ್ನೂ ಓದಿ: ಸುದೀಪ್ ಫೋಟೋಗೆ ಫಿದಾ ಆದ ನಟಿ ರಮ್ಯಾ
ರಮ್ಯಾ ಫೋಟೋದಲ್ಲಿ ಸಖತ್ ಕ್ಯೂಟ್ ಮತ್ತು ಸ್ಲಿಮ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಂಪು ಬಣ್ಣದ ಬಟ್ಟೆ ಹಾಕಿರುವ ರಮ್ಯ ಶಾರ್ಟ್ ಹೇರ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮೆಚ್ಚುವುದರ ಜೊತೆಗೆ ಸ್ಯಾಂಡಲ್‍ವುಡ್‍ನ ಹಲವು ಕಲಾವಿದರು ರಮ್ಯಾ ಅವರ ಫೋಟೋವನ್ನು ನೋಡುತ್ತಿದ್ದಂತೆ ಕಾಮೆಂಟ್‍ಗಳ ಸುರಿ ಮಳೆಗೈದಿದ್ದಾರೆ.
View this post on Instagram
ಶರ್ಮಿಳಾ ಮಾಂಡ್ರೆ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ. ಎಷ್ಟು ಸುಂದರವಾದ ಗೊಂಬೆ ಸ್ಯಾಂಡಲ್‍ವುಡ್‍ನ ಕ್ವೀನ್ ರಮ್ಯ ಎಂದು ನಟಿ ಕಾರುಣ್ಯಾ ರಾಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡದ ರಾಜಕುಮಾರಿ, ಸುಮ್ನೆ ಹೇಳಲ್ಲ ಸ್ಯಾಂಡಲ್‍ವುಡ್ ಕ್ವೀನ್ ಎಂದು, ನೀವು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟಿವ್ ಆಗಿರಿ, ನಿಮ್ಮ ಬರಹಗಳು ಬರಲಿ, ನಿಮ್ಮನ್ನು ನೋಡುವುದಕ್ಕಿಂತ ನಮಗೆ ಬೇರೇನೂ ಇಲ್ಲ ಎಂದು ಅಭಿಮಾನಿಗಳು ರಮ್ಯಾ ಅವರನ್ನು ಮಿಸ್ ಮಾಡಿಕೊಳ್ಳುತ್ತೀರುವುದಾಗಿ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
View this post on Instagram
ನಿನ್ನೆ ಸುದೀಪ್ ಅವರ ವರ್ಕಔಟ್ ಫೋಟೋಗೆ ರಮ್ಯಾ ಕಮೆಂಟ್ ಮಾಡುವ ಮೂಲಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದರು. ಮತ್ತೆ ತೆರೆ ಮೇಲೆ ಬನ್ನಿ, ನೀವು ಸುದೀಪ್ ಅವರ ಜೊತೆಗೆ ಸಿನಿಮಾ ಮಾಡಿ ಎನ್ನುವ ಬೇಡಿಕೆಯನ್ನು ಅಭಿಮಾನಿಗಳು ಇಟ್ಟಿದ್ದರು. ಇದೀಗ ರಮ್ಯಾ ಅವರ ಸೆಲ್ಫಿ ನೋಡುತ್ತಿದ್ದಂತೆ ಅಭಿಮಾನಿಗಳು ರಮ್ಯಾ ಅವರ ಸೌಂದರ್ಯವನ್ನು ಹಾಡಿಹೊಗಳಿದ್ದಾರೆ.