ಬೆಂಗಳೂರು: ಸ್ಯಾಂಡಲ್‍ವುಡ್‍ನ ಮೋಹಕತಾರೆ ರಮ್ಯಾ ಕಿಚ್ಚ ಸುದೀಪ್ ಅವರ ಜೀಮ್ ಫೋಟೋವನ್ನು ನೋಡಿ ಫಿದಾ ಆಗಿದ್ದಾರೆ. ಕಾಮೆಂಟ್ ಮಾಡುವ ಮೂಲಕವಾಗಿ ರಮ್ಯಾ ಸುದ್ದಿಯಾಗಿದ್ದಾರೆ.
ಕಿಚ್ಚ ಬಹಳ ದಿನಗಳ ನಂತರ ಮತ್ತೆ ವರ್ಕಔಟ್ ಶುರು ಮಾಡಿದ್ದಾರೆ. ಲಾಕ್‍ಡೌನ್‍ನಿಂದ ಹೊಸ ಸಿನಿಮಾಗಳ ಕೆಲಸಗಳಿಗೆ ಬ್ರೇಕ್ ಆಗಿತ್ತು. ಈ ಬ್ರೇಕ್‍ನಲ್ಲಿ ಜಿಮ್‍ಗೆ ಕೂಡ ಅಲ್ಪ ವಿರಾಮ ಪಡೆದು ಚಿಲ್ ಮಾಡುತ್ತಿದ್ದರು. ಈಗ ಮತ್ತೆ ಜಿಮ್‍ನಲ್ಲಿ ಬೆವರು ಸುರಿಸಿ ಕಟ್ಟುಮಸ್ತಾದ ದೇಹ ಪಡೆಯಲು ಅಖಾಡಕ್ಕೆ ಇಳಿದಿದ್ದಾರೆ. ಮತ್ತೆ ಜಿಮ್‍ಗೆ ಎಂಟ್ರಿ ಕೊಟ್ಟಿದ್ದೀನಿ ಅಂತ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‍ವೊಂದನ್ನು ಹಾಕಿದ್ದರು. ಅಭಿಮಾನಿಗಳು ಕಿಚ್ಚನಿಗೆ ಮೆಚ್ಚುಗೆ ಸೂಚಿಸುವುದು ಸಹಜ ಆದರೆ ಮೋಹಕ ತಾರೆ ರಮ್ಯಾ ( ATTA BOY) ಎಂದು ಕಾಮೆಂಟ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ನಾಮಧಾರಿಯಾದ ಡಿಂಪಲ್ ಕ್ವೀನ್ ರಚಿತಾ ರಾಮ್
View this post on Instagram
ಕಿಚ್ಚಸುದೀಪ್ ಮತ್ತು ರಮ್ಯಾ ಬಹಳ ಒಳ್ಳೆ ಸ್ನೇಹಿತರು. ಇಬ್ಬರು ಜೊತೆಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುದೀಪ್ ಹುಟ್ಟುಹಬ್ಬಕ್ಕೆ ರಮ್ಯಾ ಬರ್ತಡೇ ದಿನ ಒಬ್ಬರಿಗೊಬ್ಬರು ಶುಭಾಷಯ ಕೋರ್ತಾರೆ. ಸುದೀಪ್ ಜಿಮ್‍ಗೆ ಎಂಟ್ರಿ ಕೊಟ್ಟಿರುವ ಫೋಟೋಗೆ ಮತ್ತೆ ರಮ್ಯಾ ಕಾಮೆಂಟ್ ಮಾಡಿರೋದು ಇವರ ಸ್ನೇಹಕ್ಕೆ ಸಾಕ್ಷಿಯಾಗಿದೆ.
ರಮ್ಯಾ ಕಾಮೆಂಟ್ ನೋಡಿ ಕಿಚ್ಚನ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೊತೆಗೆ ಮತ್ತೆ ಸಿನಿಮಾ ಮಾಡಿ ಅಂತ ಕೂಡ ರಮ್ಯಾಗೆ ಅಭಿಮಾನಿಗಳು ಮನವಿ ಇಟ್ಟಿದ್ದಾರೆ. ಕಿಚ್ಚ, ರಮ್ಯಾ ಈಗಾಲೇ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮತ್ತೆ ತೆರೆ ಮೇಲೆ ಈ ಜೋಡಿ ಮೊಡಿ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.