ಸ್ಯಾಂಡಲ್‌ವುಡ್ ಬ್ಯೂಟಿ ಪ್ರಣಿತಾ ಈಗಾಗಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೆಣ್ಣು ಮಗವಿಗೆ ಪ್ರಣಿತಾ ಜನ್ಮ ನೀಡಿದ್ದಾರೆ. ಶುಕ್ರವಾರದಂದು ಮನೆಗೆ ಪುಟ್ಟ ಮಹಾಲಕ್ಷ್ಮಿಯ ಆಗಮನವಾಗಿದೆ. ಈ ಬೆನ್ನಲ್ಲೇ ಪ್ರಣಿತಾ, ತಮ್ಮ ಹೆರಿಗೆಯ ವೀಡಿಯೋ ಜೊತೆ ಮಗುವಿನ ಫೇಸ್ ರಿವೀಲ್ ಮಾಡಿದ್ದಾರೆ.
`ಪೊರ್ಕಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ ಬಹುಭಾಷಾ ನಟಿಯಾಗಿ ಮಿಂಚ್ತಿರುವ ಪ್ರತಿಭಾವಂತ ನಟಿ ಪ್ರಣಿತಾ. ಬೇಡಿಕೆಯಿರುವಾಗಲೇ ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಉದ್ಯಮಿ ನಿತಿನ್ ಜೊತೆ ಹಸೆಮಣೆ ಏರಿದ್ದರು. ಈಗ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಶುಭ ಶುಕ್ರವಾರ (ಜೂ.10)ದಂದು ಮನೆಗೆ ಹೊಸ ಅತಿಥಿ ಮಹಾಲಕ್ಷ್ಮಿಯ ಆಗಮನವಾಗಿದೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಈ ಬೆನ್ನಲ್ಲೇ ತಮ್ಮ ಹೆರಿಗೆಯ ವೀಡಿಯೋ ಶೇರ್ ಮಾಡುವುದರ ಜೊತೆ ಮಗುವಿನ ಫೇಸ್ ಕೂಡ ರಿವೀಲ್ ಮಾಡಿದ್ದಾರೆ.
ನಟಿ ಪ್ರಣಿತಾ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಇದೇ ಖುಷಿಯಲ್ಲಿ ಮಗುವಿನ ಮುಖ ಕೂಡ ರಿವೀಲ್ ಮಾಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
View this post on Instagram
ಪ್ರಣಿತಾ ಕಡೆಯದಾಗಿ ನಟಿಸಿದ ಸಿನಿಮಾ ಬಾಲಿವುಡ್‌ನ ʻಹಂಗಾಮ 2ʼ, ಮತ್ತು ʻಭುಜ್ ದಿ ಪ್ರೈಡ್ʼ ಮೂಲಕ ಗಮನ ಸೆಳೆದಿದ್ದರು. ಕನ್ನಡದ `ರಾಮನ ಅವತಾರ’ ಸದ್ಯದಲ್ಲೇ ತೆರೆಗೆ ಬರಲಿದೆ. ಮುಂದಿನ ದಿನಗಳಲ್ಲಿ ಚಾಲೆಂಜಿಂಗ್ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಪ್ರಣಿತಾ ಮಿಂಚಲಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ಕಮ್‌ಬ್ಯಾಕ್ ಆಗಲಿದ್ದಾರೆ.