ಬೆಂಗಳೂರು: ನಟಿ ಹರಿಪ್ರಿಯಾ ತಾವು ಅಭಿನಯಿಸಿದ ಸಿನಿಮಾ ನೋಡಲು ವೇಷ ಮರೆಸಿಕೊಂಡು ಸಿನಿಮಾ ಥಿಯೇಟರ್ ಗೆ ಹೋಗಿದ್ದಾರೆ.
ಸ್ಟಾರ್ ಗಳು ಸಾಮಾನ್ಯರಂತೆ ಎಂದಿಗೂ ಜೀವನ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವುದು, ತಾವು ಅಭಿನಯಿಸಿದ ಸಿನಿಮಾ ನೋಡುವುದು ಮತ್ತು ಸಾಮಾನ್ಯರಂತೆ ಶಾಪಿಂಗ್ ಮಾಡಲು ಸಾಧ್ಯವಿರುವುದಿಲ್ಲ. ಎಲ್ಲಿ ಹೋದರು ಅವರ ಅಭಿಮಾನಿಗಳು ಬರುತ್ತಾರೆ. ಹೀಗಾಗಿ ತಾವು ಅಭಿನಯಿಸಿದ ಸಿನಿಮಾದ ಬಗ್ಗೆ ಜನರಿಂದ ಸತ್ಯವಾದ ವಿಮರ್ಶೆ ಪಡೆಯಲು ನೀರ್ ದೋಸೆ ಬೆಡಗಿ ಹರಿಪ್ರಿಯಾ ಮಾರುವೇಷ ಧರಿಸಿ ಸಿನಿಮಾ ನೋಡಲು ಥಿಯೇಟರ್ ಗೆ ಹೋಗಿದ್ದಾರೆ.
ಹರಿಪ್ರಿಯಾ ಅಭಿನಯಿಸಿರುವ `ಜೈಸಿಂಹ’ ಸಿನಿಮಾ ಬಿಡುಗಡೆಯಾಗಿ ಆಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಹಲವಾರು ಚಿತ್ರಮಂದಿರದಲ್ಲಿ ಚಿತ್ರ ರಿಲೀಸ್ ಆಗಿದ್ದು, ಜೈಸಿಂಹ ಸಿನಿಮಾದಲ್ಲಿ ಹರಿಪ್ರಿಯಾ ಕೂಡ ಅಭಿನಯಿಸಿದ್ದಾರೆ. ಆದ್ದರಿಂದ ತಮ್ಮ ಪಾತ್ರಕ್ಕೆ ಹಾಗೂ ಸಿನಿಮಾ ಬಗ್ಗೆ ಅಭಿಮಾನಿಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ತಿಳಿಯಲು ಮಾರುವೇಷದಲ್ಲಿ ಹರಿಪ್ರಿಯಾ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ.
ಈ ಬಗ್ಗೆ ಹರಿಪ್ರಿಯಾ, “ಜೈಸಿಂಹ ಸಿನಿಮಾದ ಬಗ್ಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ ಎಂಬುದನ್ನು ತಿಳಿಯಲು ನಾನು ಮಾರುವೇಷ ಹಾಕಿಕೊಂಡು ಸ್ಥಳಿಯ ಥಿಯೇಟರ್ ಗೆ ಬಂದಿದ್ದೇನೆ. ಈ ಹಿಂದೆ ಈ ರೀತಿಯ ಪ್ರಯತ್ನ ಮಾಡಿಲ್ಲ. ಆದರೆ ಖುಷಿ ಎನ್ನಿಸುತ್ತಿದೆ. ಇನ್ನೂ ಮುಂದೆ ಇದೇ ರೀತಿಯಲ್ಲಿ ಬಂದು ಸಿನಿಮಾ ನೋಡಬೇಕೆಂದು ಆಸೆ ಆಗುತ್ತಿದೆ” ಎಂದು ಟ್ವಿಟ್ಟರ್ ಮತ್ತು ಫೇಸ್‍ಬುಕ್‍ನಲ್ಲಿ ಬರೆದು ತಾವು ವೇಷ ಹಾಕಿಕೊಂಡು ಬಂದಿದ್ದ ಫೋಟೋ ಜೊತೆಗೆ ಫೋಸ್ಟ್ ಮಾಡಿದ್ದಾರೆ.
Wrapped in a shawl, i went to watch #JaiSimha at a local theater in Bengaluru ???? just to see the viewers honest reaction????Glad to see it with my eyes that people love the film????Never done something like this before.. would love to do it again ???? pic.twitter.com/gIGNKv3DQW
— HariPrriya (@HariPrriya6) February 2, 2018