Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಹುಟ್ಟುಹಬ್ಬದಂದು ಅಪ್ಪು ನೆನೆದ ಸ್ಯಾಂಡಲ್‍ವುಡ್ ತಾರೆಯರು

Public TV
Last updated: March 17, 2022 3:17 pm
Public TV
Share
6 Min Read
actors
SHARE

ಕರುನಾಡ ರಾಜರತ್ನ ನಟ ಪವರ್‍ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್‌ಗೆ ಇಂದು 47ನೇ ಹುಟ್ಟುಹಬ್ಬವಾಗಿದ್ದು, ನಟ ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್ ಹೀಗೆ ಚಂದನವನದ ಬಹುತೇಕ ತಾರೆಯರು ಪ್ರೀತಿಯ ಅಪ್ಪುವಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.

PUNEETH 7

ನಟನೆ, ಡ್ಯಾನ್ಸ್, ಫೈಟಿಂಗ್ ಅಷ್ಟೇ ಅಲ್ಲದೇ ತಮ್ಮ ಸಮಾಜಮುಖಿ ಕಾರ್ಯಗಳಿಂದ ಕರುನಾಡಿನ ಜನತೆಯ ಪ್ರೀತಿಯನ್ನು ಸಂಪಾದಿಸಿದ ಅಪ್ಪು, ಎಲ್ಲರನ್ನು ಅಗಲಿ ನಾಲ್ಕೂವರೆ ತಿಂಗಳಾದರೂ, ಅಭಿಮಾನಿಗಳ ಮನದಲ್ಲಿ ಸದಾ ಅಜರಾಮರರಾಗಿದ್ದಾರೆ ಎಂದರೆ ತಪ್ಪಾಗಲಾರದು. ಸದ್ಯ ಇಂದು ಪುನೀತ್ ಹುಟ್ಟುಹಬ್ಬವನ್ನು ಅಭಿಮಾನಿಗಳು ರಾಜ್ಯಾದ್ಯಂತ ಬಹಳ ಸಂತಸದಿಂದ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅಲ್ಲದೇ ಈ ವಿಶೇಷ ದಿನದಂದು ಸ್ಯಾಂಡಲ್‍ವುಡ್‍ನ ಬಹುತೇಕ ಎಲ್ಲ ನಟ, ನಟಿಯರು ಅಪ್ಪು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

Puneeth 5

ಗಣೇಶ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಪುನೀತ್ ವಿಶೇಷವಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ನಿಷ್ಕಲ್ಮಶ ನಗು, ಅಪರಿಮಿತ ವಿನಯವಂತಿಕೆ, ಸದಾ ಸ್ನೇಹಮಯಿ, ಕಲೆ ಇರುವವರೆಗೂ ನೀವು ಅಮರ ಅಪ್ಪು ಸರ್, ಹುಟ್ಟು ಹಬ್ಬದ ಸವಿ ನೆನಪುಗಳು ಎಂದು ಬರೆದುಕೊಂಡಿದ್ದಾರೆ.

ನಿಷ್ಕಲ್ಮಶ ನಗು
ಅಪರಿಮಿತ ವಿನಯವಂತಿಕೆ
ಸದಾ ಸ್ನೇಹಮಯಿ
ಕಲೆ ಇರುವವರೆಗೂ ನೀವು ಅಮರ ಅಪ್ಪು ಸರ್,
ಹುಟ್ಟು ಹಬ್ಬದ
ಸವಿ ನೆನಪುಗಳು.#Appu #PowerStar #DrPuneethRajkumar #AppuLivesOn pic.twitter.com/pafCVrz9fW

— Ganesh (@Official_Ganesh) March 17, 2022

ರಕ್ಷಿತ್ ಶೆಟ್ಟಿ: ಪುನೀತ್ ಅವರ ವ್ಯಕ್ತಿತ್ವವು ಅವರ ಹೆಸರನ್ನು ಪ್ರತಿಬಿಂಬಿಸುತ್ತದೆ. ಡಾ. ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ನಮ್ಮ ಪ್ರೀತಿಯ ಅಪ್ಪು ಸರ್ ಅವರನ್ನು ಸ್ಮರಿಸುತ್ತಿದ್ದೇವೆ. ಅವರಂತೆಯೇ ಜೇಮ್ಸ್ ಸಿನಿಮಾ ಎಲ್ಲ ಪ್ರೀತಿಗಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಜೇಮ್ಸ್ ಚಿತ್ರತಂಡಕ್ಕೆ ನನ್ನ ಶುಭಾಶಯಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

His persona mirrored his name. Remembering Dr. #PuneethRajkumar, our beloved Appu sir on his birth anniversary. I hope #James is as loved as he is. My best wishes to the team ???? pic.twitter.com/KnALp3wQ9l

— Rakshit Shetty (@rakshitshetty) March 17, 2022

ದುನಿಯಾ ವಿಜಯ್: ನಿಮ್ಮ ಜನ್ಮ ವಾರ್ಷಿಕೋತ್ಸವದಂದು ನಿಮ್ಮ ಅಧ್ಬುತ ನಟನೆ ಹಾಗೂ ನೀವು ಮಾಡಿರುವ ಅನೇಕ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಸ್ಮರಿಸುತ್ತ, ನಿಮ್ಮ ಮರೆಯಲಾರದ ನೆನಪುಗಳನ್ನು ಮೆಲುಕು ಹಾಕುತ್ತಿದ್ದೇನೆ. ನಿಮ್ಮ ಅಗಲಿಕೆ ಕನ್ನಡ ಚಿತ್ರಂಗಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ತುಂಬಾ ನೋವುಂಟು ಮಾಡಿದೆ. ಜೇಮ್ಸ್ ಚಿತ್ರ ನಿಮ್ಮ ಕ್ರಿಯಾಶೀಲತೆ ಹಾಗೂ ನಿಮ್ಮ ಇಡೀ ಚಿತ್ರತಂಡ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿ. ನಮ್ಮೆಲ್ಲರ ಮನಸುಗಳಲ್ಲಿ ವಿಜಯಭೇರಿ ಬಾರಿಸಿ ನೂತನ ದಾಖಲೆ ಸೃಷ್ಟಿಸುವತ್ತ ಹೊರಟಿರುವ ಜೇಮ್ಸ್ ಚಿತ್ರವನ್ನು ಬರಮಾಡಿಕೊಳ್ಳಲು ಕಾಯುತ್ತಿರುವ ನಿಮ್ಮ ಕೋಟ್ಯಾಂತರ ಅಭಿಮಾನಿಗಳಲ್ಲಿ ನಾನು ಒಬ್ಬ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

???????? @PuneethRajkumar @NimmaShivanna @BahaddurChethan #PuneethRajkumarLivesOn #James # pic.twitter.com/JUhGl5tDDF

— Duniya Vijay (@OfficialViji) March 17, 2022

ಶರಣ್: ಅಪ್ಪು ಸರ್ ನಿಮ್ಮ ದರ್ಶನ ಸಿಕ್ಕರೆ ಸಾಕು ಎಂದು ಹಲವಾರು ರಾಜ್ಯಗಳಿಂದ ಅಭಿಮಾನಿಗಳು ಬರೋದರ ಮಧ್ಯೆ, ನನಗೆ ನಿಮ್ಮೊಂದಿಗೆ ಬೆಳ್ಳಿತೆರೆ ಹಂಚಿಕೊಳ್ಳಲು ಸಿಕ್ಕ ಅವಕಾಶವನ್ನು ನನ್ನ ಅತಿ ದೊಡ್ಡ ಅದೃಷ್ಟ ಎಂದರೆ ತಪ್ಪಾಗಲಾರದು. ನೀವು ನಮ್ಮ ನೆನಪುಗಳು ಸದಾ ಚಿರಂಜೀವಿ ಎಂದು ಬಣ್ಣಿಸಿದ್ದಾರೆ.

ಅಪ್ಪು ಸರ್ ❤️ ನಿಮ್ಮ ದರ್ಶನ ಸಿಕ್ಕರೆ ಸಾಕು ಎಂದು ಹಲವಾರು ರಾಜ್ಯಗಳಿಂದ ಅಭಿಮಾನಿಗಳು ಬರೋದರ ಮಧ್ಯೆ, ನನಗೆ ನಿಮ್ಮೊಂದಿಗೆ ಬೆಳ್ಳಿತೆರೆ ಹಂಚಿಕೊಳ್ಳಲು ಸಿಕ್ಕ ಅವಕಾಶವನ್ನು ನನ್ನ ಅತಿ ದೊಡ್ಡ ಅದೃಷ್ಟ ಎಂದರೆ ತಪ್ಪಾಗಲಾರದು ????
ನೀವು ನಿಮ್ಮ ನೆನಪುಗಳು ಸದಾ ಚಿರಂಜೀವಿ ✨

Remembering Dr. Puneeth Rajkumar sir ✨ pic.twitter.com/uSE8Q6vttI

— Sharaan (@realSharaan) March 17, 2022

ಪ್ರೇಮ್: ಒಬ್ಬ ರಾಜಕುಮಾರ ಇದ್ದ. ಯಾವುದೇ ಯುದ್ದವನ್ನು ಮಾಡದೆ ಇಡೀ ರಾಜ್ಯವನ್ನೇ ಗೆದ್ದಿದ್ದ ಹೆಸರು ಪುನೀತ್ ರಾಜಕುಮಾರ್ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

ಒಬ್ಬ ರಾಜಕುಮಾರ ಇದ್ದ .
ಯಾವುದೇ ಯುದ್ದವನ್ನು ಮಾಡದೆ ಇಡೀ ರಾಜ್ಯವನ್ನೇ ಗೆದ್ದಿದ್ದ .
ಹೆಸರು ಪುನೀತ್ ರಾಜಕುಮಾರ .
HAPPY BIRTHDAY SIR .
LOVE YOU FOREVER .
MISS YOU . pic.twitter.com/LSc7j19NKp

— Prem Nenapirali (@StylishstarPrem) March 17, 2022

ರಮೇಶ್ ಅರವಿಂದ್: ಪ್ರೀತಿಯ ಅಪ್ಪು ಅವರ ಸಿಹಿ ನೆನಪುಗಳಿಗೆ ನನ್ನ ನಮನಗಳು. ಅವರ ಜನ್ಮದಿನದಂದು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳಿ. ಖಂಡಿತವಾಗಿ ಜೇಮ್ಸ್ ಐತಿಹಾಸಿಕ ಯಶಸ್ಸು ಸಾಧಿಸುತ್ತದೆ ಎಂದು ಶುಭಾಹಾರೈಸಿದ್ದಾರೆ.

ಪ್ರೀತಿಯ ‘ಅಪ್ಪು’ ಅವರ ಸಿಹಿ ನೆನಪುಗಳಿಗೆ ನನ್ನ ನಮನಗಳು.????????Fondly remember him on his birthday. Surely James will be a historic success. pic.twitter.com/E8JN1rx5Kf

— Ramesh Aravind (@Ramesh_aravind) March 17, 2022

ಸಂತೋಷ್ ಆನಂದ್ ರಾಮ್: ನೀವು ಇಂದಿಗೂ ಎಂದಿಗೂ ನಾನಿರುವವರೆಗೂ ನನ್ನಲ್ಲಿ ಜೀವಂತ. ನಿಮ್ಮ ನೆನಪಲ್ಲಿ, ನಿಮ್ಮ ದಾರಿಯಲ್ಲಿ ನಾವು. ಲವ್ ಯೂ ಅಣ್ಣ ಎಂದು ಶುಭ ಕೋರುವ ಮೂಲಕ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್

Nagu Nagutha Ninu – Remembering Puneeth Rajkumar | Santhosh Ananddram,Vi… https://t.co/4DhXeEhUYw via @YouTube ನಿಮ್ಮ ಬದುಕು ನಮಗೆ ಕಲಿಕೆ ಅಪ್ಪು ಅಮರ ಅಜರಾಮರ❤️ಎಂದು ನಿಮ್ಮ ಅಭಿಮಾನಿಯಾಗಿ ನಿಮ್ಮ ಸಂತೋಷ್ ಆನಂದ್ ರಾಮ್???????????? @PuneethRajkumar @hombalefilms @VKiragandur @MusicThaman @rvijayprakash pic.twitter.com/mOD2w4quKb

— Santhosh Ananddram (@SanthoshAnand15) March 17, 2022

ದಿನಾಕರ್ ತೂಗುದೀಪ: ಕರುನಾಡಿನ ಪ್ರೀತಿಯ ಅಪ್ಪು ಡಾ.ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಇಂದು ಅವರ ಜೇಮ್ಸ್ ಸಿನಿಮಾ ಬಿಡುಗಡೆಯಾಗಿದ್ದು, ಇಡೀ ಜೇಮ್ಸ್ ಚಿತ್ರ ತಂಡಕ್ಕೆ ದೊಡ್ಡ ಯಶಸ್ಸು ಕೀರ್ತಿ ಸಿಗಲೆಂದು ಹಾರೈಸೋಣ ಎಂದು ಶುಭಕೋರಿದ್ದಾರೆ.

ಕರುನಾಡಿನ ಪ್ರೀತಿಯ ಅಪ್ಪು ಡಾ |ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಇಂದು ಅವರ ಜೇಮ್ಸ್ ಸಿನಿಮಾ ಬಿಡುಗಡೆಯಾಗಿದ್ದು , ಇಡೀ ಜೇಮ್ಸ್ ಚಿತ್ರ ತಂಡಕ್ಕೆ ದೊಡ್ಡ ಯಶಸ್ಸು ಕೀರ್ತಿ ಸಿಗಲೆಂದು ಹಾರೈಸೋಣ @PuneethRajkumar pic.twitter.com/azdDDRyEYR

— Dinakar Thoogudeepa (@dinakar219) March 17, 2022

ಅದಿತಿ ಪ್ರಭುದೇವ್: ಕರುನಾಡ ರತ್ನ ನಮ್ಮ ಪ್ರೀತಿಯ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅಣ್ಣನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಕರುನಾಡ ರತ್ನ ನಮ್ಮ ಪ್ರೀತಿಯ ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅಣ್ಣನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು @PuneethRajkumar ♥️#AppuLivesOn #PuneethRajkumar #HBDPuneethRajkumar #KarunadaRathna pic.twitter.com/sCjB8Hiprk

— Aditi Prabhudeva (@AditiPrabhudeva) March 17, 2022

ರವಿಶಂಕರ ಗೌಡ: ಗಾಂಧಿ ನಗಿಸುವ ಕಾಯಕ ಮಾಡುವವನಿಗೆ ನಿಷ್ಕಲ್ಮಶ ಹೃದಯದಿಂದ ಎಲ್ಲರೂ ಆತ್ಮೀಯರೆಂಬ ಭಾವನೆಯೆ ಹೆಚ್ಚು. ಈ ಚಿತ್ರಕ್ಕೆ ವಿವರಣೆ ಬೇಕಿಲ್ಲ. ಕರುನಾಡ ತಾಯಿ ಭುವನೇಶ್ವರಿಯ ಮಕ್ಕಳಿಬ್ಬರಿಗೂ ಜನುಮ ದಿನದ ಶುಭಾಶಯಗಳು ಅಣ್ಣ ಎಂದು ಟ್ವೀಟ್ ಮಾಡಿದ್ದಾರೆ.

ನಗಿಸುವ ಕಾಯಕ ಮಾಡುವವನಿಗೆ
ನಿಷ್ಕಲ್ಮಶ ಹೃದಯದಿಂದ ಎಲ್ಲರೂ ಆತ್ಮೀಯರೆಂಬ ಭಾವನೆಯೆ ಹೆಚ್ಚು..
ಈ ಚಿತ್ರಕ್ಕೆ ವಿವರಣೆ ಬೇಕಿಲ್ಲ..
ಕರುನಾಡ ತಾಯಿ
ಭುವನೇಶ್ವರಿಯ ಮಕ್ಕಳಿಬ್ಬರಿಗೂ
ಜನುಮ ದಿನದ ಶುಭಾಶಯಗಳು
ಅಣ್ಣ @Jaggesh2 @PuneethRajkumar #gandhiji #CharlieChaplin pic.twitter.com/2t6FS004M1

— ರವಿಶಂಕರ ಗೌಡ (@RavishankarGow5) March 17, 2022

ರಘು ಮುಖರ್ಜಿ: ನಾವು ಒಮ್ಮೆ ಆನಂದಿಸಿದ್ದನ್ನು ನಾವು ಎಂದಿಗೂ ಕಳೆದುಕೊಳ್ಳುವುದಿಲ್ಲ, ನಾವು ಆಳವಾಗಿ ಪ್ರೀತಿಸುವ ಎಲ್ಲವೂ ನಮ್ಮ ಭಾಗವಾಗುತ್ತದೆ, ನೀವು ಯಾವಾಗಲೂ ಇರುತ್ತೀರಿ ಎಂದಿದ್ದಾರೆ.

What we have once enjoyed we can never lose, all that we deeply love becomes a part of us , u will always be…. #appu #powerstarpuneethrajkumar #happybirthday #appuisaemotion pic.twitter.com/RZt4oLMOWJ

— Raghu mukherjee (@RaghuMukherjee) March 17, 2022

ಪ್ರಣಿತ: ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ಸರ್. ನೀವು ಎಲ್ಲಿದ್ದರೂ ನಿಮಗೆ ವಿಶ್ವದ ಎಲ್ಲ ಸಂತೋಷ ಸಿಗಲಿ ಎಂದು ಶುಭಾಶಯ ತಿಳಿಸಿದ್ದಾರೆ. ಹೀಗೆ ನಟ ಸತೀಶ್ ನೀನಾಸಂ ಅವರು ವಿಶೇಷವಾದ ಪುನೀತ್ ವೀಡಿಯೋ ಶೇರ್ ಮಾಡಿಕೊಂಡಿದ್ದರೆ, ನಟ ಡಾಲಿ ಧನಂಜಯ್, ನಟಿ ಶಾನ್ವಿ ಶ್ರೀವತ್ಸವ್, ನಟ ಸಾಯಿ ಕುಮಾರ್ ಪುನೀತ್ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ.

Happy birthday appu sir. Wherever you are , may you be blessed with all the happiness in the universe.. ????????#PuneethRajkumarLivesOn #HappyBirthdayPuneethRajkumar
#PowerStar pic.twitter.com/4iYSmLUX53

— Pranitha Subhash (@pranitasubhash) March 17, 2022

TAGGED:ನಟರುಪುನೀತ್ ರಾಜ್‍ಕುಮಾರ್ಬರ್ತ್‍ಡೇಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Dvitva Web Series Pawan Kumar
ಅಪ್ಪುಗೆ ಮಾಡಿದ ದ್ವಿತ್ವ ಕಥೆ ವೆಬ್ ಸಿರೀಸ್ ಆಗಲಿದೆ: ಪವನ್‌ಕುಮಾರ್
Cinema Latest Top Stories
Vishnuvardhan Memorial 1
ವಿಷ್ಣು ಸಮಾಧಿ ತೆರವು; ಹೈಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಕೆ
Cinema Court Latest Sandalwood Top Stories
Gulshan Devaiah kantara chapter 1
ಹೊಂಬಾಳೆ ಫಿಲಮ್ಸ್‌ನ ‘ಕಾಂತಾರ ಚಾಪ್ಟರ್ 1’ ನಲ್ಲಿ ಕುಲಶೇಖರನ ಪಾತ್ರದಲ್ಲಿ ಗುಲ್ಶನ್ ದೇವಯ್ಯ
Cinema Latest Top Stories
Darshan 8
ಸೆಲ್‌ನಲ್ಲೇ ವಾಕಿಂಗ್, ತೆಳುವಾದ ಬೆಡ್ ಮೇಲೆ ಸ್ಲೀಪಿಂಗ್ – ರಾಜಾತಿಥ್ಯ ಇಲ್ದೇ `ಡಿ’ ಗ್ಯಾಂಗ್ ಫುಲ್ ಸೈಲೆಂಟ್
Bengaluru City Cinema Karnataka Latest Top Stories
Rashmika Mandanna Thama Movie
ಹಾರರ್ ಅವತಾರದಲ್ಲಿ ಜನರನ್ನ ಬೆಚ್ಚಿಸಿದ ಶ್ರೀವಲ್ಲಿ
Bollywood Cinema Latest Top Stories

You Might Also Like

Sujatha Bhat
Bengaluru City

ಫೋಟೋದಲ್ಲಿರುವವಳೇ ನನ್ನ ಮಗಳು: ಸುಜಾತ ಭಟ್ ಪ್ರತಿಕ್ರಿಯೆ

Public TV
By Public TV
30 minutes ago
Jog Falls 1
Districts

ನಿರಂತರ ಮಳೆಯಿಂದ ಜೋಗ ಜಲಪಾತಕ್ಕೆ ಜೀವಕಳೆ – ಫಾಲ್ಸ್ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ

Public TV
By Public TV
1 hour ago
sujatha bhat dharmasthala case
Latest

ಸುಜಾತಾ ಭಟ್‌ಗೆ ಮಗಳೇ ಇರಲಿಲ್ಲ ಎಂದ ನೆರೆಹೊರೆಯವರು

Public TV
By Public TV
1 hour ago
bagalkot man dies of heart attack while coming by train from tirupati
Districts

ತಿರುಪತಿಯಿಂದ ರೈಲಿನಲ್ಲಿ ಬರುತ್ತಿದ್ದಾಗ ಹೃದಯಾಘಾತ – ಬಾಗಲಕೋಟೆ ವ್ಯಕ್ತಿ ಸಾವು

Public TV
By Public TV
2 hours ago
Dharmasthala mass burial case Sujatha Bhat lied about being her daughter by showing someones photo
Dakshina Kannada

ಧರ್ಮಸ್ಥಳ ಬುರುಡೆ ಕೇಸ್‌| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್‌!

Public TV
By Public TV
2 hours ago
apple
Bengaluru City

ಬೆಂಗಳೂರಿನಲ್ಲಿ ಹೊಸ ಆ್ಯಪಲ್ ಕಚೇರಿ – ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?