ಬೆಂಗಳೂರು: ಇಂದು ಬೆಳಗ್ಗೆ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿದ್ದು, ಇಡೀ ಕರುನಾಡು ಮೌನವಾಗಿದೆ. ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತಾದಿಗಳು ತುಮಕೂರು ನಗರದತ್ತ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಕನ್ನಡದ ನಟರಾದ ಜಗ್ಗೇಶ್, ಯಶ್, ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್ ಸೇರಿದಂತೆ ಚಂದನವನದ ಕಲಾವಿದರು ಶ್ರೀಗಳ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಜಗ್ಗೇಶ್: ನಿಮ್ಮ ಆತ್ಮ ಶಿವನಲ್ಲಿ ಲೀನವಾಗಲಿ. ನಿಮ್ಮ ಆಶೀರ್ವಾದ ಪಡೆದ ನಾವು ಧನ್ಯ. ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಪಾದುಕೆ ಪಡೆದ ನಾವೇ ಧನ್ಯರು. ಓಂ ನಮಃ ಶಿವಾಯಃ..
Advertisement
ಯಶ್: ಬೇಡುವ ಕೈಗಳಿಗಿಂತ, ದುಡಿಯುವ ಕೈಗಳು ಮೇಲು ಎಂಬುದನ್ನು ತೋರಿಸಿಕೊಟ್ಟು ಒಬ್ಬ ಮನುಷ್ಯ ಹೇಗೆ ಸಾರ್ಥಕವಾಗಿ ಬದುಕಬೇಕೆಂಬುದಕ್ಕೆ ಜೀವಂತ ನಿದರ್ಶನವಾದವರು ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳು. ನಡೆದಾಡುವ ದೇವರು ಕಾಣದ ದೇವರೊಂದಿಗೆ ಐಕ್ಯರಾಗಿದ್ದಾರೆ. ಹೋಗಿ ಬನ್ನಿ ಬುದ್ಧಿ..ಮತ್ತೆ ಬನ್ನಿ.
Advertisement
ಬೇಡುವ ಕೈಗಳಿಗಿಂತ, ದುಡಿಯುವ ಕೈಗಳು ಮೇಲು ಎಂಬುದನ್ನು ತೋರಿಸಿಕೊಟ್ಟು ಒಬ್ಬ ಮನುಷ್ಯ ಹೇಗೆ ಸಾರ್ಥಕ್ಯವಾಗಿ ಬದುಕಬೇಕೆಂಬುದಕ್ಕೆ ಜೀವಂತ ನಿದರ್ಶನವಾದವರು ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳು.
ನಡೆದಾಡುವ ದೇವರು ಕಾಣದ ದೇವರೊಂದಿಗೆ ಐಕ್ಯರಾಗಿದ್ದಾರೆ.
ಹೋಗಿ ಬನ್ನಿ ಬುದ್ಧಿ..ಮತ್ತೆ ಬನ್ನಿ???? pic.twitter.com/2QN8HPXazX
— Yash (@TheNameIsYash) January 21, 2019
Advertisement
ಪುನೀತ್ ರಾಜ್‍ಕುಮಾರ್: ಜಾತಿ ಧರ್ಮ ಭೇದವಿಲ್ಲದೆ ಲಕ್ಷಾಂತರ ಜನಕ್ಕೆ ವಿದ್ಯಾಭ್ಯಾಸ ಕೊಟ್ಟಿರುವಂತಹ ನಡೆದಾಡುವ ದೇವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಆಶೀರ್ವಾದ ಎಲ್ಲರ ಮೇಲೂ ಇರಲಿ.
Advertisement
ಸುದೀಪ್: ತ್ರಿವಿಧ ದಾಸೋಹಿ ಶತಮಾನದ ಯುಗಪುರುಷ ಶ್ರೀ ಶಿವಕುಮಾರ ಸ್ವಾಮೀಜಿಗಳು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತ ನಲ್ಲಿ ಪ್ರಾರ್ಥಿಸೋಣ.
ದರ್ಶನ್: ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಇಹಲೋಕ ತ್ಯಜಿಸಿರುವುದು ಬಹಳ ನೋವಿನ ಸಂಗತಿ. ಇಷ್ಟು ದಿನ ಭಕ್ತರ ದರ್ಶನಕ್ಕೆ ಅವರಿದ್ದರು, ಈಗ ದೈಹಿಕವಾಗಿ ನಮ್ಮನ್ನು ಅಗಲಿದರೂ ಎಲ್ಲರ ಮನೆ ಮನಗಳಲ್ಲಿ ಅವರು ಭದ್ರವಾಗಿ ನೆಲೆಸಿದ್ದಾರೆ.
ಜಾತಿ ಧರ್ಮ ಭೇದವಿಲ್ಲದೆ ಲಕ್ಷಾಂತರ ಜನಕ್ಕೆ ವಿದ್ಯಾಭ್ಯಾಸ ಕೊಟ್ಟಿರುವಂತಹ ನಡೆದಾಡುವ ದೇವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಆಶೀರ್ವಾದ ಎಲ್ಲರ ಮೇಲೂ ಇರಲಿ…. pic.twitter.com/3LbwtXzhuc
— Puneeth Rajkumar (@PuneethRajkumar) January 21, 2019
ನೀನಾಸಂ ಸತೀಶ್: ಬದುಕಿದರೇ ಹೀಗೆ ಸಾರ್ಥಕವೆನ್ನುವಂತೆ ಬದುಕಬೇಕು, ಬದುಕಿಗೊಂದು ಅರ್ಥ ಬರುವಂತೆ. ಲಕ್ಷಾಂತರ ಮಕ್ಕಳಿಗೆ ವಿದ್ಯೆ ಅನ್ನ ನೀಡಿದ ಮಹಾನ್ ವ್ಯಕ್ತಿ ನೀವು. ಹೋಗಿ ಬನ್ನಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv