Bengaluru City

ಲಂಕೆಯಲ್ಲಿ ‘ಪಿಪಿಪಿ’ ಸಾಂಗ್ ಗುಂಗು – ಭರ್ಜರಿ ಸ್ಟೆಪ್ಸ್ ಹಾಕಿದ ಯೋಗಿ, ಕೃಷಿ ತಾಪಂಡ

Published

on

Share this

ಸ್ಯಾಂಡಲ್ ವುಡ್ ಅಂಗಳದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿರುವ ‘ಲಂಕೆ’ ಸಿನಿಮಾ ಸೆಪ್ಟೆಂಬರ್ 10ಕ್ಕೆ ಬಿಡುಗಡೆಯಾಗುತ್ತಿದೆ. ಟೀಸರ್ ಹಾಗೂ ಪವರ್ ಫುಲ್ ಟ್ರೇಲರ್ ಮೂಲಕ ಸಖತ್ ಸೌಂಡ್ ಮಾಡುತ್ತಿರುವ ಈ ಚಿತ್ರದ ‘ಪಿಪಿಪಿ’ ವಿಡಿಯೋ ಸಾಂಗ್ ಬಿಡುಗಡೆಯಾಗಿ ಎಲ್ಲರನ್ನು ಕುಣಿಸುತ್ತಿದೆ.

ಕಾರ್ತಿಕ್ ಶರ್ಮಾ ಸಂಗೀತ ನಿರ್ದೇಶನ, ಅನಿರುದ್ಧ್ ಶಾಸ್ತ್ರಿ ಸಾಹಿತ್ಯದಲ್ಲಿ ಮೂಡಿ ಬಂದಿರುವ ಪಿಪಿಪಿ ಡಾನ್ಸಿಂಗ್ ನಂಬರ್ ಸಾಂಗ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆ ಕಂಡಿದೆ. ಕಲರ್ ಫುಲ್ ಹಾಗೂ ಅದ್ಧೂರಿಯಾಗಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದ್ದು, ಲೂಸ್ ಮಾದ ಯೋಗಿ ಹಾಗೂ ಕೃಷಿ ತಾಪಂಡ ಸಾಂಗ್ ಗೆ ಸಖತ್ ಸ್ಟೆಪ್ಸ್ ಹಾಕಿ ಧೂಳ್ ಎಬ್ಬಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ವೀಡಿಯೋ ಸಾಂಗ್ ಗಳು ಸೂಪರ್ ಹಿಟ್ ಆಗಿದ್ದು, ಪಿಪಿಪಿ ಸಾಂಗ್ ಕೂಡ ಹಿಟ್ ಲಿಸ್ಟ್ ಸೇರೋದು ಪಕ್ಕಾ. ಇದನ್ನೂ ಓದಿ: ಲಂಕೆ ಅಡ್ಡಾದಲ್ಲಿ ಕರಾವಳಿ ಬೆಡಗಿ ಕಾವ್ಯಾ ಶೆಟ್ಟಿ ಸಖತ್ ಬೋಲ್ಡ್

ರಾಮ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಲಂಕೆ’ ಚಿತ್ರಕ್ಕೆ ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಲ್ಲಿ ಪಟೇಲ್ ಶ್ರೀನಿವಾಸ್ ಹಾಗೂ ಸುರೇಖಾ ರಾಮ್ ಪ್ರಸಾದ್ ಬಂಡವಾಳ ಹಾಕಿ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಬಹುತಾರಾಗಣದ ಈ ಚಿತ್ರದಲ್ಲಿ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನಾ ನಾಯಕಿಯರಾಗಿ ಬಣ್ಣಹಚ್ಚಿದ್ದು, ಶರತ್ ಲೋಹಿತಾಶ್ವ, ಶೊಭರಾಜ್, ಸಂಚಾರಿ ವಿಜಯ್, ಗಾಯಿತ್ರಿ ಜೈರಾಮ್, ಸುಚೇಂದ್ರ ಪ್ರಸಾದ್ ಒಳಗೊಂಡಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ‘ಲಂಕೆ’ ಟ್ರೇಲರ್ ಕಂಡು ಪ್ರೇಕ್ಷಕರು ಥ್ರಿಲ್ – ಸಿನಿಮಾ ನೋಡೋದೊಂದೇ ಬಾಕಿ ಎಂದ ಯೋಗಿ ಫ್ಯಾನ್ಸ್

ಚಿತ್ರಕ್ಕೆ ರಮೇಶ್ ಬಾಬು ಕ್ಯಾಮೆರಾ ನಿರ್ದೇಶನ, ರವಿವರ್ಮ, ಪಳನಿರಾಜ್. ಅಶೋಕ್ ಸಾಹಸ ನಿರ್ದೇಶನವಿದೆ. ನೈಜ ಘಟನೆ ಆಧಾರಿತ ‘ಲಂಕೆ’ ಚಿತ್ರ ಪಕ್ಕಾ ಕಮರ್ಶಿಯಲ್ ಸಿನಿಮಾವಾಗಿದ್ದು, ಈ ಬಾರಿಯ ಗಣೇಶ ಹಬ್ಬದ ರಂಗು ಹೆಚ್ಚಿಸಲು ಸೆಪ್ಟೆಂಬರ್ 10ಕ್ಕೆ ತೆರೆಗೆ ಬರುತ್ತಿದೆ.

Click to comment

Leave a Reply

Your email address will not be published. Required fields are marked *

Advertisement
Advertisement