ಬೆಂಗಳೂರು: ಸ್ಯಾಂಡಲ್ವುಡ್ನ ಮೋಹಕತಾರೆ ರಮ್ಯಾ ಅವರು ಸುದೀಪ್ಗೆ ಇತ್ತೀಚೆಗೆ ನೇರವಾಗಿ ಒಂದು ಪ್ರಶ್ನೆಯನ್ನು ಕೇಳಿದ್ದರು. ರಮ್ಯಾ ಹೇಳಿಕೆಗ ಕಿಚ್ಚ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮ್ಯಾ ಅವರು ನಿಮಗೆ ವಯಸ್ಸು ಆಗದೆ ಇಲ್ವಾ ಎಂದು ಹೇಳಿರುವುದರ ಕುರಿತಾಗಿ ಸುದೀಪ್ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ರಮ್ಯಾ ಟ್ವೀಟ್ ಮಾಡಿದ್ದು, ಖುಷಿಯಾಗಿದೆ. ರಾಜಕೀಯ ನಡುವೆ, ಸಾಕಷ್ಟು ವರ್ಷಗಳ ನಂತರ ನನ್ನ ಬಗ್ಗೆ ಟ್ವೀಟ್ ಮಾಡಿರುವುದು ಸಂತಸ ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ತಾಯಿ ಆಗಲು ಸಮಂತಾ ಬಯಸಿದ್ರು-ನಿರ್ದೇಶಕರ ಪುತ್ರಿ ಬಿಚ್ಚಿಟ್ಟರು ವಿಚ್ಛೇದನದ ಗುಟ್ಟು
ಯಾವತ್ತಿದ್ರು ಬಾಸ್ ಬಾಸೇ. ವಿಷ್ಣುವರ್ಧನ್ ಹಾಗೂ ನನ್ನ ತಂದೆ ಇಬ್ಬರು ಆಲದ ಮರ. ಅವರ ನೆರಳಿನಲ್ಲಿಯೇ ನಾವು ಇದ್ದೀವಿ ಎಂದು ಹೇಳುವ ಮೂಲಕ ವಿಷ್ಣು ದಾದಾರನ್ನು ಸುದೀಪ್ ನೆನಪಿಸಿಕೊಂಡರು. ಇದನ್ನೂ ಓದಿ: ಸುದೀಪ್ ನಿಮಗೆ ವಯಸ್ಸು ಆಗೋದೇ ಇಲ್ವಾ: ರಮ್ಯಾ
ಅ.14ರಂದು ಅದ್ದೂರಿಯಾಗಿ ಕೋಟಿಗೊಬ್ಬ 3 ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಕ್ರೇಜ್ ಇದೆ. ಅ.7ರಂದು ಟ್ರೇಲರ್ ರಿಲೀಸ್ ಆಗಿದ್ದು, ಅದನ್ನು ನೋಡಿ ರಮ್ಯಾ ಕೂಡ ಮೆಚ್ಚಿಕೊಂಡಿದ್ದಾರೆ. ರಮ್ಯಾ ಮೆಚ್ಚಿಕೊಂಡಿದ್ದು ಮಾತ್ರವಲ್ಲದೆ ಸುದೀಪ್ ಅವರನ್ನು ಹಾಡಿಹೊಗಳಿದ್ದರು. ಇದನ್ನೂ ಓದಿ: ನನ್ನ ಅಭಿಮಾನಿಗಳಿಂದಲೇ ನಾನು ಇಲ್ಲಿ ಇರೋದು: ಕಿಚ್ಚ
ಟ್ರೇಲರ್ ಅದ್ಭುತವಾಗಿದೆ. ಕಿಚ್ಚ ಸುದೀಪ್ ಅವರೇ, ನಿಮಗೆ ವಯಸ್ಸು ಆಗುವುದೇ ಇಲ್ಲವಾ? ಎಂದು ರಮ್ಯಾ ಬರೆದುಕೊಂಡಿದ್ದಾರೆ. ದಿನದಿಂದ ದಿನಕ್ಕೆ ಸುದೀಪ್ ವಯಸ್ಸು ಕಮ್ಮಿ ಆಗುತ್ತಿದೆ ಎಂಬರ್ಥದಲ್ಲಿ ಅವರು ಪ್ರಶಂಸೆ ವ್ಯಕ್ತಪಡಿಸಿ ಇನ್ಸ್ಟಾಗ್ರಾಮ್ನ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು. ಈ ವಿಚಾರವಾಗಿ ಸುದೀಪ್ ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ರಮ್ಯಾ ಸುದೀಪ್ ಅವರ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ರಂಗ ಎಸ್ಎಸ್ಎಲ್ಸಿ, ಜಸ್ಟ್ ಮಾತ್ ಮಾತಲ್ಲಿ, ಮುಸ್ಸಂಜೆ ಮಾತು ಸಿನಿಮಾಗಳಲ್ಲಿ ರಮ್ಯಾ ಮತ್ತು ಸುದೀಪ್ ನಟಿಸಿದ್ದರು. ಮತ್ತೆ ಅವರು ತೆರೆಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.