ಸ್ಯಾಂಡಲ್‌ವುಡ್‌ನ (Sandalwood) ಪೋಷಕ ನಟ ಹಾಗೂ ಖಳನಟ ಹರೀಶ್ ರಾಯ್ (Harish Rai) ನಿಧನರಾಗಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಅವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಅವರು ಇಬ್ಬರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ. ಇದನ್ನೂ ಓದಿ: ಹರೀಶ್ ರಾಯ್ ಗೆ ಹಣಕಾಸಿನ ಸಮಸ್ಯೆಯೇ ಕ್ಯಾನ್ಸರ್ ಆಗಿ ಬದಲಾಗಲು ಕಾರಣ ಆಯಿತಾ?
ಎರಡು ದಶಕಗಳಿಗಿಂತ ಹೆಚ್ಚು ಕಾಲ ನಟನೆಯಲ್ಲಿ ಅವರು ತೊಡಗಿಕೊಂಡಿದ್ದರು. ಕೆಜಿಎಫ್ ಸಿನಿಮಾದ ಬಳಿಕ ಅವರು ಕೆಜಿಎಫ್ ಚಾಚಾ ಎಂದೇ ಖ್ಯಾತಿ ಪಡೆದಿದ್ದರು. ಇದನ್ನೂ ಓದಿ: ಕೆಜಿಎಫ್ ಖ್ಯಾತಿಯ ಹರೀಶ್ ರಾಯ್ ಸಹಾಯಕ್ಕೆ ನಿಂತ ಧ್ರುವ ಸರ್ಜಾ


