ಬೆಂಗಳೂರು: ಚೆಲುವಿನ ಚಿತ್ತಾರದಲ್ಲಿ ಬುಲ್ಲಿ ಆಗಿ ಕಾಣಿಸಿಕೊಂಡಿದ್ದ ಹಿರಿಯ ನಟಿ ಆಶಾರಾಣಿ ಪುತ್ರ ರಾಕೇಶ್ ಮೃತಪಟ್ಟಿದ್ದಾರೆ. ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಾಕೇಶ್ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾಗಿದ್ದಾರೆ.
ಎರಡು ತಿಂಗಳ ಹಿಂದೆ ರಾಕೇಶ್ ಅವರಿಗೆ ಆಪರೇಷನ್ ಮಾಡಲಾಗಿತ್ತು. ತದನಂತರ ಕೋರಮಂಗಲದ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾಕೇಶ್ ಚಿಕಿತ್ಸೆ ಫಲಕಾರಿಯಾಗದೇ 7.30ರ ವೇಳೆಗೆ ಮೃತಪಟ್ಟಿದ್ದಾರೆ.
ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಸಿನಿಮಾ ಬುಲ್ಲಿ – ಪಪ್ಪುಸಿ ಎನ್ನುವ ಹೆಸರಿನಿಂದ ರಾಕೇಶ್ ಫೇಮಸ್ ಆಗಿದ್ದರು. ಸದ್ಯ ಧೂಮಪಾನ ಸಿನಿಮಾದಲ್ಲಿ ನಾಯಕ ನಟನಾಗಿ ರಾಕೇಶ್ ನಟಿಸುತ್ತಿದ್ದರು.




