ಇಂದು ಸಂಚಾರಿ ವಿಜಯ್ ಹುಟ್ಟುಹಬ್ಬ: ಗೆಳೆಯರಿಂದ ರಕ್ತದಾನ ಶಿಬಿರ

Public TV
1 Min Read
Sanchari Vijay 4

ಇಂದು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ (Sanchari Vijay) ಅವರ ಹುಟ್ಟುಹಬ್ಬ. ವಿಜಯ್ ಹುಟ್ಟು ಹಬ್ಬದ (Birthday) ನೆಪದಲ್ಲಿ ನಾಟಕ ಪ್ರದರ್ಶನ, ನೆನಪಿನ ಕಾರ್ಯಕ್ರಮಗಳು ಮತ್ತು ರಕ್ತದಾನ ಶಿಬಿರದಂತೆ ಅನೇಕ ಸಮಾಜಮುಖಿ ಕೆಲಸಗಳನ್ನು ಅವರ ಆಪ್ತರು ಮಾಡುತ್ತಿದ್ದಾರೆ.

Sanchari Vijay 2

ಬೆಂಗಳೂರಿನಲ್ಲಿ ಸಂಚಾರಿ ವಿಜಯ್ ಅವರಿಗೆ ಅನೇಕ ಗೆಳೆಯರಿದ್ದರೂ, ಅವರ ಆಪ್ತ ಬಳಗದಲ್ಲಿ ಇದ್ದವರು ಕೆಲವೇ ಕೆಲವರು. ಅವರಲ್ಲಿ ಅನಿಲ್ ಗೌಡ ಕೂಡ ಒಬ್ಬರು. ವಿಜಯ್ ಅವರ ಹುಟ್ಟು ಹಬ್ಬದಂದು ಅನಿಲ್ ಗೌಡ ಕಳೆದ ಎರಡು ವರ್ಷಗಳಿಂದ ರಕ್ತದಾನ ಶಿಬಿರ (Blood Donation Camp) ಹಮ್ಮಿಕೊಳ್ಳುತ್ತಲೇ ಇದ್ದಾರೆ. ಈ ಬಾರಿಯೂ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು.

Sanchari Vijay 3

ಸಂಚಾರಿ ವಿಜಯ್ ಅವರ ಗೆಳೆಯರ ಬಳಗ ಇಂದು ಬೆಂಗಳೂರಿನ (Bangalore) ನಾಗರಭಾವಿ ಬಿ.ಡಿಎ ಕಾಂಪ್ಲೆಕ್ಸ್ ಬಳಿ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದರು. ವಿಜಯ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಜಯ್‌ ಸ್ನೇಹಿತರು ವಿಶೇಷ ಕಾರ್ಯಕ್ಕೆ ಕೈ ಜೋಡಿಸಿದ್ದರು, ಅನೇಕರು ಅಲ್ಲಿಗೆ ಬಂದು ರಕ್ತದಾನ ಮಾಡಿದ್ದಾರೆ. ಇದನ್ನೂ ಓದಿ:ನ್ಯಾಯಕ್ಕಾಗಿ ಇಂದು ಫಿಲ್ಮ್ ಚೇಂಬರ್ ಮುಂದೆ ನಿರ್ಮಾಪಕ ಎನ್.ಕುಮಾರ್ ಪ್ರತಿಭಟನೆ

Sanchari Vijay 1

ವಿಜಯ್ ಹುಟ್ಟುಹಬ್ಬಕ್ಕಾಗಿ ಆಯೋಜನೆಗೊಂಡಿದ್ದ ರಕ್ತದಾನ ಶಿಬಿರದಲ್ಲಿ ಆಪ್ತರಾದ ಅನಿಲ್ ಗೌಡ, ಅರುಣ್, ವಿವೇಕ್, ಮನು, ಕಾರ್ತಿಕ್, ಸಾಗರ್, ಪೂರ್ಣಾ, ಗೌತಮ್ ಸೇರಿದಂತೆ ಅನೇಕರು ಹಾಜರಿದ್ದರು. ಗೆಳೆಯನ ನೆನಪಿನಲ್ಲಿ ಎಲ್ಲರೂ ರಕ್ತದಾನ ಮಾಡಿದರು. ಸಂಚಾರಿ ವಿಜಯ್ ಅವರನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ವಿಜಯ್ ಬದುಕಿದ್ದಾಗ ಇಂತಹ ಹತ್ತಾರು ಕೆಲಸಗಳನ್ನು ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಆಹಾರ ಕಿಟ್ ವಿತರಣೆ, ಅಸಕ್ತ ಕಲಾವಿದರಿಗೆ ಸಹಾಯ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಹಾಯ ಸಹಕಾರವನ್ನು ವಿಜಯ್ ಮಾಡುತ್ತಿದ್ದರು. ಹಾಗಾಗಿ ಅವರ ಹುಟ್ಟು ಹಬ್ಬದ ದಿನಕ್ಕೆ ಇಂತಹ ಕೆಲಸಕ್ಕೆ ಮುಂದಾಗಿದ್ದೇವೆ ಅಂತಾರೆ ವಿಜಯ್ ಸ್ನೇಹಿತ ಅನಿಲ್ ಗೌಡ.

 

Share This Article