ಟ್ರೆಡಿಷನಲ್ ಲುಕ್‍ನಲ್ಲಿ ಕಿರಿಕ್ ಹುಡ್ಗಿ – ನೆಚ್ಚಿನ ನಟಿ ಹೊಸ ಅವತಾರ ನೋಡಿ ಫ್ಯಾನ್ಸ್ ಫಿದಾ

Public TV
2 Min Read
Samyuktha Hegde

ಬೆಂಗಳೂರು: ನವರಾತ್ರಿ ಹಬ್ಬದ ಕೊನೆಯ ದಿನವಾದ ಇಂದು ವಿಜಯದಶಮಿ ಹಬ್ಬವನ್ನು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಮಧ್ಯೆ ಸ್ಯಾಂಡಲ್‍ವುಡ್ ನಟಿ ಸಂಯುಕ್ತಾ ಹೆಗ್ಡೆ ಸೀರೆಯುಟ್ಟು ಸಂಪ್ರದಾಯಿಕ ಲುಕ್‍ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.

 Samyuktha Hegde

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟಿ ಸಂಯುಕ್ತಾ ಹೆಗ್ಡೆ, ಮೊದಲ ಸಿನಿಮಾದಲ್ಲಿಯೇ ಸೂಪರ್ ಹಿಟ್ ಪಡೆದುಕೊಂಡರು. ನಂತರ ಸ್ಯಾಂಡಲ್‍ವುಡ್ ಕಾಲೇಜ್ ಕುಮಾರ ಸಿನಿಮಾದ ಜೊತೆ, ಜೊತೆಗೆ ಟಾಲಿವುಡ್, ಕಾಲಿವುಡ್ ಸಿನಿಮಾಗಳತ್ತ ಮುಖ ಮಾಡಿದರೂ, ಈ ಎಲ್ಲದರ ಮಧ್ಯೆ ಹಿಂದಿ ಕಿರುತೆರೆಯ ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಹೀಗೆ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಸಂಯುಕ್ತ ಹೆಗ್ಡೆ ಇದೀಗ ಅಪ್ಪಟ ಸಂಪ್ರದಾಯಿಕ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ

 Samyuktha Hegde

ಹೌದು, ಯಾವಾಗಲೂ ತುಂಡು ಉಡುಗೆ ತೊಟ್ಟು ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದ ಸಂಯುಕ್ತಾ ಹೆಗ್ಡೆ ವಿಜಯ ದಶಮಿ ಹಬ್ಬದ ಪ್ರಯುಕ್ತ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳನ್ನು ಸಂಯುಕ್ತಾ  ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಸೀರೆಗೆ ಮ್ಯಾಚ್ ಆಗುವಂತಹ, ಬೈ ತಲೆ ಬೊಟ್ಟು, ಜುಮ್ಕಿ, ವಿಭಿನ್ನ ಶೈಲಿಯ ಶಾರ್ಟ್ ಹಾಗೂ ಲಾಂಗ್ ಚೈನ್, ಕೈಗೆ ಗೋಲ್ಡನ್ ಕಲರ್ ಬ್ಯಾಂಗಲ್ ತೊಟ್ಟು ಬಹಳ ಲಕ್ಷಣವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿಯೂ ಸಂಯುಕ್ತಾ ಹೆಗ್ಡೆ ಮುಂಗುರುಳನ್ನು ಮುಂದೆ ಸರಿಸಿಕೊಂಡು ನೀಡಿರುವ ಪೋಸ್ ಬಹಳ ಸುಂದರವಾಗಿದ್ದು, ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ:  ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

ವಿಶೇಷವೆಂದರೆ ಫೋಟೋ ಶೇರ್ ಮಾಡಿಕೊಳ್ಳುವುದರ ಜೊತೆಗೆ ಅಭಿಮಾನಿಗಳಿಗೆ ವಿಜಯ ದಶಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಒಟ್ಟಾರೆ ಹಾಟ್ ನಟಿಯ ಹೊಸ ಅವತಾರ ನೋಡಿ ಅಭಿಮಾನಿಗಳು ಶಾಕ್ ಆಗಿದ್ದು, ಸಂಯುಕ್ತಾ ಹೆಗ್ಡೆ ಚೆಲುವಿಗೆ ಮನಸೋತಿದ್ದಾರೆ ಎಂದೇ ಹೇಳಬಹುದು.

Share This Article
Leave a Comment

Leave a Reply

Your email address will not be published. Required fields are marked *