ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ ನವೆಂಬರ್ 29ರಂದು ಸಂಸತ್ತಿಗೆ ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್ ರ್‍ಯಾಲಿಯನ್ನು ರದ್ದುಗೊಳಿಸಿದೆ. ಮುಂದಿನ ಹೋರಾಟದ ಬಗ್ಗೆ ಮುಂದಿನ ತಿಂಗಳು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಮೂರು ಕೃಷಿ ಕಾಯ್ದೆಯನ್ನು ಸಂಸತ್ತಿನಲ್ಲಿ ವಾಪಸ್ ಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು. ಆದರೆ ಕೇಂದ್ರ ಕೃಷಿ ಸಚಿವರ ಮನವಿ ಮೇರೆಗೆ ಮೆರವಣಿಗೆಯನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ ಎಂದರು.
Advertisement
That (SKM’s scheduled march to the Parliament on 29th Nov) has been postponed, we have given time to the Govt until 4th Dec, to think. Committee will take its further decision on 4th: Bharatiya Kisan Union (BKU) leader Rakesh Tikait in Amritsar (Punjab) pic.twitter.com/MPr3LAebQX
— ANI (@ANI) November 27, 2021
Advertisement
ರೈತರು ಹುಲ್ಲಿಗೆ ಬೆಂಕಿ ಹಾಕುವುದು ಅಪರಾಧವಲ್ಲ ಎಂಬ ಮಸೂದೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಇದನ್ನೂ ಓದಿ: ಅಸಹ್ಯವಾಗಿ ನೋಡಿ ಹಿಂಭಾಗದಿಂದ ಅಪ್ಪಿಕೊಂಡ್ರು- ಶೃತಿ ದೂರಿನಲ್ಲಿ ಬೆಚ್ಚಿ ಬೀಳೋ ಆರೋಪ
Advertisement
ಚಳಿಗಾಲ ಅಧಿವೇಶನದಲ್ಲಿ ವಿವಾದಿತ ಮೂರು ಕೃಷಿ ಕಾಯಿದೆಗಳನ್ನು ರದ್ದುಗೊಳಿಸುವ ಮಸೂದೆಯನ್ನು ಜಾರಿಗೊಳಿಸಲಾಗುವುದು. ಹಾಗೆಯೇ ಅಂದೇ ಈ ಎಲ್ಲ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ತಿಳಿಸಿದ್ದರು.
Advertisement
After a meeting, Samyukt Kisan Morcha has decided to postpone the proposed tractor rally to Parliament on November 29: Farmer leader Darshan Pal Singh in Delhi pic.twitter.com/sRskbis3MI
— ANI (@ANI) November 27, 2021
ಕೃಷಿ ಕಾಯ್ದೆ ವಿರುದ್ಧ ಕಳೆದ ಒಂದು ವರ್ಷದಿಂದ ಸಂಯುಕ್ತ ಕಿಸಾನ್ ಮೊರ್ಚಾ ಹಾಗೂ ಇನ್ನಿತರೆ ರೈತ ಸಂಘಟನೆಗಳು ಪ್ರತಿಭಟನೆಯನ್ನು ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೃಷಿ ಕಾಯ್ದೆಯನ್ನು ವಾಪಸ್ ಪಡೆದು ಸಂಸತ್ತಿನಲ್ಲಿ ಮಸೂದೆಯನ್ನು ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಇದನ್ನೂ ಓದಿ: #MeToo ಪ್ರಕರಣ – ನಟಿ ಶೃತಿ ಹರಿಹರನ್‌ಗೆ ನೋಟಿಸ್
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಕೆಎಂ ಮುಖಂಡ ದರ್ಶನ್‍ಪಾಲ್ ಅವರು, ನಾಳೆ ಮೆರವಣಿಗೆಯನ್ನು ರದ್ದುಗೊಳಿಸಿದ್ದೇವೆ. ರೈತರ ಮೇಲೆ ದಾಖಲಾಗಿದ್ದ ಎಲ್ಲಾ ದೂರುಗಳನ್ನು ಹಿಂಪಡೆಯಲು ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇವೆ, ಸಚಿವ ಅಜಯ್ ಮಿಶ್ರಾ ಅವರನ್ನು ಅಮಾನತುಗೊಳಿಸವುದು ಸೇರಿದಂತೆ ಇನ್ನಿತರೆ ಬೇಡಿಕೆಯನ್ನು ಈಡೇರಿಸುವ ನಿರೀಕ್ಷೆಯಿದೆ. ಈ ಬಗ್ಗೆ ಡಿ.4ರಂದು ಎಸ್‍ಕೆಎಂ ಮತ್ತೊಮ್ಮೆ ಸಭೆ ನಡೆಸಲಿದೆ ಎಂದು ಮಾಹಿತಿ ನೀಡಿದರು.
“PM Narendra Modi should direct state governments and Railways to withdraw the cases registered against farmers during the protest,” says a leader of Samyukt Kisan Morcha pic.twitter.com/Bx1yLGfUp2
— ANI (@ANI) November 27, 2021
ಸರ್ಕಾರವೂ ರೈತರೊಂದಿಗೆ ಸಂವಾದವನ್ನು ಪ್ರಾರಂಭಿಸಬೇಕು ಎಂದು ಎಸ್‍ಕೆಎಂ ಒತ್ತಾಯಿಸಿದೆ. ಇತ್ತೀಚೆಗಷ್ಟೇ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದರು.
ಸರ್ಕಾರದ ಕ್ರಮವನ್ನು ರೈತ ಸಂಘಗಳು ಸ್ವಾಗತಿಸಿದ್ದವು. ಆದರೆ ಆ ಕಾಯ್ದೆಗಳನ್ನು ಕಾನೂನು ರೀತಿಯಲ್ಲಿ ಹಿಂಪಡೆಯುವವರೆಗೆ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ವಿವಿಧ ರೈತ ಸಂಘಗಳು ತಿಳಿಸಿದ್ದವು.