ನವದೆಹಲಿ: ವಿಶ್ವದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪನಿ ಸ್ಯಾಮ್ ಸಂಗ್ ಡಿಎಸ್‍ಎಲ್‍ಆರ್ ಕ್ಯಾಮೆರಾದಲ್ಲಿ ತೆಗೆದ ಫೋಟೋವನ್ನು ತನ್ನ ನೂತನ ಫೋನಿನ ಪ್ರಚಾರಕ್ಕೆ ಬಳಸಿಕೊಂಡಿದೆ ಎನ್ನುವ ಗಂಭೀರ ಆರೋಪವೊಂದು ಕೇಳಿ ಬಂದಿದೆ.
ಗೆಲಾಕ್ಸಿ ಎ8 ಸ್ಟಾರ್ ಹೆಸರಿನಲ್ಲಿ ಫೋನ್ ಬಿಡುಗಡೆ ಮಾಡಿದ್ದು ಈ ಫೋನಿನ ಕ್ಯಾಮೆರಾದಲ್ಲಿ ಯುವತಿಯೊಬ್ಬಳ ಪೋಟ್ರೇಟ್ ಫೋಟೋವನ್ನು ಸ್ಯಾಮ್‍ಸಂಗ್ ತನ್ನ ಮಲೇಷ್ಯಾದ ವೆಬ್‍ಸೈಟಲ್ಲಿ ಪ್ರಕಟಸಿದೆ. ಸ್ಯಾಮ್ ಸಂಗ್ ಪ್ರಕಟಿಸಿದ ಫೋಟೋ ನಾನು ತೆಗೆದ ಫೋಟೋ ಎಂದು ಮಹಿಳಾ ಫೋಟೋಗ್ರಾಫರ್ ಡನ್ಜಾ ಡುಜುಜಿಕ್ ಹೇಳಿದ್ದಾರೆ.
Advertisement
Advertisement
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು EyeEm ಫೋಟೋ ಕಮ್ಯೂನಿಟಿಗೆ ಫೋಟೋವನ್ನು ಅಪ್ಲೋಡ್ ಮಾಡಿದ್ದೆ. ಈ EyeEm ಗೆಟ್ಟಿ ಇಮೇಜಿಗೆ ಮಾರಾಟ ಮಾಡಿದೆ. ಈ ವಿಚಾರ ಗೊತ್ತಾಗಿ ನಾನು ಯಾರು ಈ ಚಿತ್ರವನ್ನು ಖರೀದಿಸಿದ್ದಾರೆ ಎನ್ನುವುದನ್ನು ರಿವರ್ಸ್ ಇಮೇಜ್ ಚೆಕ್ ನಲ್ಲಿ ಪರಿಶೀಲಿಸಿದಾಗ ಸ್ಯಾಮ್‍ಸಂಗ್ ವೆಬ್‍ಸೈಟಿನಲ್ಲಿ ಇರುವುದನ್ನು ತಿಳಿದುಕೊಂಡೆ ಎಂದು ಹೇಳಿದ್ದಾರೆ.
Advertisement
ಡನ್ಜಾ ಆರೋಪ ಏನು?
ನನ್ನ ಫೋಟೋವನ್ನು ಕೆಟ್ಟದಾಗಿ ಬಳಕೆ ಮಾಡಲಾಗಿದೆ. ಎರಡು ಫೋಟೋದ ಬ್ಯಾಕ್ ಗ್ರೌಂಡ್ ಬದಲಾವಣೆಯಾಗಿದೆ. ಚೆನ್ನಾಗಿ ಪೋಟ್ರೋಟ್ ಫೋಟೋ ಕ್ಲಿಕ್ಕಿಸಲಾಗಿದೆ ಎನ್ನುವುದನ್ನು ತೋರಿಸಲು ಸ್ಯಾಮ್‍ಸಂಗ್ ಫೋಟೋಶಾಪ್ ಬಳಸಿ ಚಿತ್ರವನ್ನು ಎಡಿಟ್ ಮಾಡಿದೆ ಎಂದು ಆರೋಪಿಸಿದ್ದಾರೆ.
Advertisement
#Samsung advertises DSLR image as phone photo. Photographer exposes Samsung's unfair practice.
Is the company fooling users? #GalaxyA8 Star #Malaysia
WION's @krishnaksays spoke to photographer #DunjaDjudjic from Serbia. Listen in! pic.twitter.com/wGlFuADehX
— WION (@WIONews) December 5, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv