ಚುನಾವಣೆ ಹೊಸ್ತಿಲಲ್ಲಿ ಆಪರೇಷನ್‌ ಕಾಂಗ್ರೆಸ್‌ – ಕೊತ್ತುರು ಬಾಂಬ್‌ಗೆ ಸಮೃದ್ಧಿ, ವೆಂಕಟಶಿವಾರೆಡ್ಡಿ ಸ್ಪಷ್ಟನೆ

Public TV
1 Min Read
Samruddhi Manjunath and Venkatashiva Reddy Deny Joining Congress

ಕೋಲಾರ: ಲೋಕಸಭಾ ಚುನಾವಣೆ (Lok Saba Election) ಹೊಸ್ತಿಲಲ್ಲಿ ಆಪರೇಷನ್ ಕಾಂಗ್ರೆಸ್ (Operation Congress) ಶುರುವಾಗಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಇಂಥಾದೊಂದು ಅನುಮಾನಕ್ಕೆ ಕಾರಣವಾಗಿದ್ದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಸಿಡಿಸಿದ ಬಾಂಬ್.

ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ (Samruddhi Manjunath) ಹಾಗೂ ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ (Venkatashiva Reddy) ಶೀಘ್ರ ಕಾಂಗ್ರೆಸ್ ಸೇರಲಿದ್ದಾರೆ ಎಂದು ಕೊತ್ತೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ.  ಇದನ್ನೂ ಓದಿ: ಜಿಮ್ಸ್ ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿದ 38 ವಿದ್ಯಾರ್ಥಿಗಳು ಅಮಾನತು

 

ಇಬ್ಬರು ಜೆಡಿಎಸ್ ಶಾಸಕರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್‌ ಸಮ್ಮುಖದಲ್ಲಿ ಮಾತುಕತೆ ನಡೆದಿದೆ. ಸಚಿವ ಕೆ.ಹೆಚ್ ಮುನಿಯಪ್ಪ ಸಮ್ಮುಖದಲ್ಲಿ ಆಪರೇಷನ್ ನಡೆಯುತ್ತಿದೆ ಎಂದು ಕೊತ್ತೂರು ಮಂಜುನಾಥ್ ಹೇಳಿದ್ದಾರೆ. ಈ ಬೆಳವಣಿಗೆ ಜಿಲ್ಲೆಯಲ್ಲಿ ಹಾಗೂ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಸಂಸತ್ತಿನಲ್ಲಿ ಇಂದು ರಾಮ ಮಂದಿರ ಗೊತ್ತುವಳಿ: ಬಿಜೆಪಿ ಸಂಸದರಿಗೆ ವಿಪ್‌ ಜಾರಿ

ಕೊತ್ತೂರು ಮಂಜುನಾಥ್ ಆಪರೇಷನ್ ಹಸ್ತ ಬಾಂಬ್‌ಗೆ ಜೆಡಿಎಸ್ ಶಾಸಕರು ಸ್ಪಷ್ಟನೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ದಿಗಾಗಿ ಸಿಎಂ, ಡಿಸಿಎಂ ಭೇಟಿಯಾಗಿ ಅನುದಾನ ಕೇಳಿದ್ದು ನಿಜ. ಈ ವೇಳೆ ಅವರು ಪಕ್ಷಕ್ಕೆ ಬರುವಂತೆ ಕರೆದಿದ್ದು ನಿಜ. ಆದರೆ ನಾವು ಯಾವತ್ತೂ ಪಕ್ಷಕ್ಕೆ ಬರುವುದಾಗಿ ಹೇಳಿಲ್ಲ ಎಂದು ಶಾಸಕ ಸಮೃದ್ದಿ ಮಂಜುನಾಥ್ ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ ಆಪರೇಷನ್ ವಿಚಾರವನ್ನು ತಳ್ಳಿಹಾಕಿದ್ದಾರೆ.

ಒಟ್ಟಿನಲ್ಲಿ ಲೋಕಸಭೆ ಚುನಾವಣೆಯ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರುಗಳ ರಾಜಕೀಯ ಪ್ರಹಸನಗಳು ಶುರುವಾಗಿದೆ. ಆಪರೇಷನ್ ಹಸ್ತ ನಿಜವೇ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

 

Share This Article