ಸೆಲ್ಫ್ ಕ್ವಾರಂಟೈನ್ ಟೈಮ್ – ಮುದ್ದು ಮಕ್ಕಳ ಜೊತೆ ಸಮೀರಾ ರೆಡ್ಡಿ ಮಸ್ತಿ

Public TV
1 Min Read
sameera reddy

ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಸದ್ಯ ಲಾಕ್‍ಡೌನ್ ಸಮಯವನ್ನು ತಮ್ಮ ಮುದ್ದು ಮಕ್ಕಳೊಂದಿಗೆ ಕಳೆಯುತ್ತಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಸಮೀರಾ ಹಂಚಿಕೊಂಡ ವಿಡಿಯೋ ಹಾಗೂ ಫೋಟೋಗಳು ಅಭಿಮಾನಿಗಳ ಮನ ಗೆದ್ದಿದೆ.

sameera reddy 1

ಲಾಕ್‍ಡೌನ್ ಸಮಯವನ್ನು ತಮ್ಮ ಮಕ್ಕಳ ಲಾಲನೆ, ಪಾಲನೆಯಲ್ಲಿ ಸಮೀರಾ ಕಳೆಯುತ್ತಿದ್ದಾರೆ. ಈ ಸೆಲ್ಫ್ ಕ್ವಾರೆಂಟೈನ್ ಸಮಯದಲ್ಲಿ ಮಕ್ಕಳು ಹಾಗೂ ಪತ್ನಿ ಜೊತೆ ಕಳೆದಿರುವ ಕ್ಷಣಗಳ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡಿ ಮನೆಯಲ್ಲಿಯೇ ಇರಿ, ಆರೋಗ್ಯವಾಗಿರಿ ಎಂದು ಸಮೀರಾ ಖುಷಿ ಹಂಚಿಕೊಳ್ಳುತ್ತಿದ್ದಾರೆ.

https://www.instagram.com/p/B-L4lJdnPXG/

ಮುದ್ದು ಮಕ್ಕಳೊಂದಿಗೆ ತಾವು ಆಟವಾಡುತ್ತಿರುವುದು, ಮಕ್ಕಳ ತುಂಟಾಟ, ಪತಿ ಮಕ್ಕಳ ಜೊತೆಗೆ ಕಳೆಯುತ್ತಿರುವ ಕ್ಷಣಗಳ ವಿಡಿಯೋ, ಫೋಟೋಗಳನ್ನು ಸಮೀರಾ ಒಂದರ ಮೇಲೊಂದು ಹಂಚಿಕೊಳ್ಳುತ್ತಿದ್ದಾರೆ. ಈ ಮುದ್ದಾದ ಕುಟುಂಬ ಫೋಟೋ, ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

https://www.instagram.com/p/B-EKo5MnXk1/

ಕೆಲ ತಿಂಗಳ ಹಿಂದೆ ಸಮೀರಾ ತಮ್ಮ ಮಗುವಿನೊಂದಿಗೆ ಮುಳ್ಳಯ್ಯನಗಿರಿ ಬೆಟ್ಟದ ಮೇಲಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಮುಳ್ಳಯ್ಯಗಿರಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಬೆಟ್ಟದ ಕೆಲ ಮೆಟ್ಟಿಲುಗಳನ್ನು ಏರಲು ಪ್ರಯತ್ನ ಮಾಡಿದೆ. ಆದರೆ ಮುಂದೆ 500ಕ್ಕೂ ಹೆಚ್ಚು ಮೆಟ್ಟಿಲು ಇದ್ದು, ಮಗುವಿನೊಂದಿಗೆ ಬೆಟ್ಟ ಏರಲು ಆಗುತ್ತಿಲ್ಲ. ಇಲ್ಲಿಗೆ ನಿಲ್ಲಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು.

https://www.instagram.com/p/B-bwyUgnFdD/

6,300 ಅಡಿ ಎತ್ತರವಿರುವ ಮುಳ್ಳಯ್ಯನಗಿರಿ ಬೆಟ್ಟ ಕರ್ನಾಟಕದ ಎತ್ತರ ಬೆಟ್ಟದವಾಗಿದೆ. ತಾಯಿಯಾಗುವ ಮಹಿಳೆಯರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಸಮೀರಾ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾಗಿ ಹೇಳಿದ್ದರು. ಅಲ್ಲದೇ ಅವರ ಪೋಸ್ಟ್ ಗಳಿಗೆ ಅಭಿಮಾನಿಗಳು ನೀಡುತ್ತಿರುವ ಪ್ರತಿಕ್ರಿಯೆಗಳು ಸಕಾರಾತ್ಮಕ ಭಾವನೆಯನ್ನು ಮೂಡಿಸುತ್ತಿದ್ದು, ಇದರಿಂದ ರೋಮಾಂಚನಗೊಂಡಿದ್ದೇನೆ ಎಂದಿದ್ದರು.

Share This Article