ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಲು ಆಮ್ ಅದ್ಮಿ (AAP) ಪಕ್ಷ ಹಣ ಪಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗ ಸುದ್ದಿಗೋಷ್ಠಿ ನಡೆಸಿರುವ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ (Sambit Patra) ರಹಸ್ಯ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ವಿರೋಧಿ ಬಗ್ಗೆ ಮಾತನಾಡುತ್ತಿತ್ತು, ಆದರೆ ಇಂದು ಇಡೀ ಪಕ್ಷ ಸುಲಿಗೆಯಲ್ಲಿ ತೊಡಗಿದೆ, ಅದು ಜಗ್ಗಜಾಹೀರುಗೊಂಡಿದೆ. ಆಪ್ ಕೇವಲ ಕಾರ್ಪೊರೇಷನ್ (Corporation) ಟಿಕೆಟ್‍ಗಳನ್ನು ಮಾರಾಟ ಮಾಡಿಲ್ಲ, ಅವರು ವಿಧಾನಸಭೆ ಟಿಕೆಟ್‍ಗಳನ್ನು ಸಹ ಮಾರಾಟ ಮಾಡಿದ್ದಾರೆ ಎಂದು ವೀಡಿಯೋ ಮೂಲಕ ತಿಳಿಯುತ್ತದೆ ಎಂದು ಆರೋಪಿಸಿದರು.
Advertisement
AAP leader Bindu Shriram who was hoping for a ticket from ward no 54 Rohini-D was asked to pay almost Rs 80 lakhs for ticket by people concerned with MCD polls.She told them she'll pay Rs 21 lakhs then Rs 40 lakhs & again Rs 21 lakhs but was asked to pay all at once: Sambit Patra pic.twitter.com/SyHYsMMIAY
— ANI (@ANI) November 21, 2022
Advertisement
ಬಿಜೆಪಿ ಬಿಡುಗಡೆ ಮಾಡಿದ ರಹಸ್ಯ ವೀಡಿಯೋದಲ್ಲಿ ಏನೂ ಇಲ್ಲ, ಈ ಹಿಂದೆಯೂ ಬಿಜೆಪಿ ಹಲವು ಬಾರಿ ಇಂತಹ ಕುಟುಕು ವೀಡಿಯೋಗಳನ್ನು ತೋರಿಸಿದೆ, ಅದನ್ನು ತನಿಖೆ ಮಾಡಿದರೆ ಏನೂ ಸಿಗುವುದಿಲ್ಲ ಎಂದು ಸಿಎಂ ಅರವಿಂದ ಕೇಜ್ರಿವಾಲ್ (Aravind Kejriwal) ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಒಟ್ಟಿಗೆ ಕೂತು ಫಿಫಾ ವಿಶ್ವಕಪ್ ಪಂದ್ಯ ವೀಕ್ಷಿಸಲು 23 ಲಕ್ಷಕ್ಕೆ ಮನೆ ಖರೀದಿಸಿದ ಫುಟ್ಬಾಲ್ ಫ್ಯಾನ್ಸ್
Advertisement
ಈ ಹಿಂದೆ ಹೊಸ ಮಧ್ಯ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಬಿಜೆಪಿ (BJP) ಮನೀಶ್ ಸಿಸೋಡಿಯಾ (Manish Sisodia) ಇದ್ದ ವೀಡಿಯೋ ಬಿಡುಗಡೆ ಮಾಡಿತ್ತು, ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ತಿಹಾರ್ ಜೈಲಿನಲ್ಲಿ ಆಪ್ ನಾಯಕ ಸತ್ಯಂದ್ರ ಜೈನ್ (sathyender Jain) ಮಸಾಜ್ ಮಾಡಿಸಿಕೊಳ್ಳುತ್ತಿದ್ದ ವೀಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಈಗ ಪಾಲಿಕೆ ಚುನಾವಣೆಗೆ ಹಣ ಪಡೆಯುವ ಬಿಡುಗಡೆ ಮಾಡಿದೆ.
Entire money was supposed to go to Atishi, Gopal Rai, Durgesh Pathak, Saurabh Bharadwaj & Adil Khan. Eventually, Bindu recorded the entire incident where she was asked to pay the amount: Sambit Patra, BJP on purported sting video alleging AAP selling tickets pic.twitter.com/R0HQBc6YMX
— ANI (@ANI) November 21, 2022
ಡಿಸೆಂಬರ್ 4 ರಂದು ಎಂಸಿಡಿ ಚುನಾವಣೆ ನಡೆಯಲಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ, ರಾಜ್ಯದಲ್ಲಿರುವ ಆಡಳಿತರೂಢ ಪಕ್ಷ ಆಪ್ ತಳ ಮಟ್ಟವನ್ನು ಗಟ್ಟಿಗೊಳಿಕೊಳ್ಳಲು ತೀವ್ರ ಹಣಾಹಣಿ ನಡೆಸುತ್ತಿವೆ. ದೆಹಲಿಯ ಮಹಾನಗರ ಪಾಲಿಕೆಯ 250 ವಾರ್ಡ್‍ಗಳಿಗೆ 1,349 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.