ಹೈದರಾಬಾದ್: ಟಾಲಿವುಡ್ ಹಾಟ್ ಬೆಡಗಿ ಸಮಂತಾ ಅಕ್ಕಿನೇನಿ ಅವರು ತಮ್ಮ ಪತಿ, ನಟ ನಾಗಚೈತನ್ಯ ಅಕ್ಕಿನೇನಿ ಅವರ ಹುಟ್ಟುಹಬ್ಬಕ್ಕೆ ರೊಮ್ಯಾಂಟಿಕ್ ಪೋಸ್ಟ್ ಹಾಕಿ ಶುಭಾಶಯ ತಿಳಿಸಿದ್ದಾರೆ.
ನಾಗಚೈತನ್ಯ ಶುಕ್ರವಾರ ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಸಮಂತಾ ತಮ್ಮ ಪತಿ ಜೊತೆಗಿರುವ ಬ್ಲರ್ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ನಾಗಚೈತನ್ಯ ಅವರಿಗೆ ಶುಭಾಶಯ ತಿಳಿಸಿದ್ದಾರೆ. “ಬ್ಲರ್ ಆಗಿರುವ ಮ್ಯಾಜಿಕ್ ಇದು. ನನ್ನ ಸ್ನೇಹಿತ, ನನ್ನ ಶಿಕ್ಷಕ, ನನಗಾಗಿ ಹುಟ್ಟಿದ ನಾಗಚೈತನ್ಯನಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಸಮಂತಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಈ ಫೋಟೋವನ್ನು ನಾಗಚೈತನ್ಯ ಬರ್ತ್ ಡೇ ಪಾರ್ಟಿಯಲ್ಲಿ ಕ್ಲಿಕ್ಕಿಸಲಾಗಿದೆ. ಅಲ್ಲದೇ ಇದೇ ಪಾರ್ಟಿಯಲ್ಲಿ ತೆಗೆದ ಮತ್ತೊಂದು ಫೋಟೋವನ್ನು ಸಮಂತಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿ ತಮ್ಮ ಪತಿ ನಾಗಚೈತನ್ಯ ಅವರಿಗೆ ಶುಭಾಶಯ ತಿಳಿಸಿದ್ದಾರೆ.
Advertisement
ನಾಗಚೈತನ್ಯ ಹಾಗೂ ಸಮಂತ ಅವರು 2017, ಅಕ್ಟೋಬರ್ ತಿಂಗಳಲ್ಲಿ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಿದ್ದರು. ಮೊದಲು ಇಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ನಂತರ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv