ಸೌತ್‌ನ ಆಪಲ್ ಬ್ಯೂಟಿ ಸಮಂತಾ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. `ಪುಷ್ಪ’ ಸಿನಿಮಾದ `ಹೂಂ ಅಂತೀಯಾ ಮಾವ’ ಅಂತಾ ಐಕಾನ್ ಸ್ಟಾರ್ ಜೊತೆ ಸ್ಟೆಪ್ ಹಾಕಿದ್ದೇ ಹಾಕಿದ್ದು. ಈ ಸಾಂಗ್ ಅವರನ್ನು ಮತ್ತೊಂದು ಲೆವೆಲ್‌ಗೆ ತಂದು ನಿಲ್ಲಿಸಿದೆ.
Advertisement
`ಪುಷ್ಪ’ ಬಿಗ್ ಬ್ರೇಕ್‌ನ ನಂತರ ಸಾಲು ಸಾಲು ಸಿನಿಮಾಗಳು ಸ್ಯಾಮ್‌ರನ್ನ ಅರಸಿ ಬರುತ್ತಿದೆ. ಇದರ ಮಧ್ಯೆ ಪುಷ್ಪ ಚಿತ್ರದಲ್ಲಿ ಕಾಣಿಸಿಕೊಂಡಿರೋ ಹಾಗೇ `ಪುಷ್ಪ’ ಪಾರ್ಟ್-2ನಲ್ಲೂ ಸಮಂತಾ ಕಾಣಿಸಿಕೊಳ್ತಾರಾ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಇದನ್ನು ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ
Advertisement
Advertisement
ಸುಕುಮಾರ್, ಅಲ್ಲು ಅರ್ಜುನ್ ಕಾಂಬಿನೇಷನ್‌ನ `ಪುಷ್ಪ’ ಪಾರ್ಟ್-2ನಲ್ಲಿ ಸಮಂತಾ ಕಾಣಿಸಿಕೊಳ್ತಿದ್ದಾರೆ. ಆದರೆ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕೋದರ ಬದಲು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ತಿದ್ದಾರೆ. ಅಲ್ಲು ಅರ್ಜುನ್ ಪಾತ್ರಕ್ಕೆ ಟರ್ನಿಂಗ್ ಪಾಯಿಂಟ್ ತರುವಂತಹ ಪ್ರಮುಖ ಪಾತ್ರಕ್ಕೆ ಸಮಂತಾ ಜೀವತುಂಬ್ತಿದ್ದಾರೆ. `ಪುಷ್ಪ’ ಚಿತ್ರದಲ್ಲಿ ಸಮಂತಾ ಜಬರ್‌ದಸ್ತ್ ಪರ್ಫಾಮೆನ್ಸ್ ನೋಡಿರೋ ನಿರ್ದೇಶಕ ಸುಕುಮಾರ್ ಪಾರ್ಟ್-2ನಲ್ಲಿ ಸಮಂತಾಗೆಂದೇ ಸ್ಪೆಷಲ್ ಪಾತ್ರವನ್ನು ಸೃಷ್ಟಿಸಿದ್ದಾರೆ.
Advertisement
`ಹೂಂ ಅಂತೀಯಾ ಮಾವ’ ಅಂತಾ ಸಿನಿರಸಿಕರ ಮನಗೆದ್ದ ಸಮಂತಾ, `ಪುಷ್ಪ’ ಪಾರ್ಟ್-2ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾಗೆ ಸಾಥ್ ಕೊಡ್ತಿದ್ದಾರೆ. ಪುಷ್ಪ ಚಿತ್ರ ನೋಡಿ ಫಿದಾ ಆಗಿರೋ ಅಭಿಮಾನಿಗಳು ಪಾರ್ಟ್-2ನಲ್ಲೂ ಆಪಲ್ ಬ್ಯೂಟಿ ಸಮಂತಾರ ನಟನೆ ನೋಡಿ ಕಣ್ತುಂಬಿಕೊಳ್ಳಬಹುದು.