ಸೌತ್ ಬ್ಯೂಟಿ ಸಮಂತಾ ನಟನೆಯ ‘ಸಿಟಾಡೆಲ್’ (Citadel) ವೆಬ್ ಸಿರೀಸ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ, ಸಂದರ್ಶನವೊಂದರಲ್ಲಿ ತಾಯಿಯಾಗೋ ಕುರಿತು ನಟಿ ಮಾತನಾಡಿದ್ದಾರೆ. ಈ ಬೆನ್ನಲ್ಲೇ, ನಟಿಯ 2ನೇ ಮದುವೆ (Wedding) ಬಗ್ಗೆ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ರೆಬೆಲ್ ಸ್ಟಾರ್ ಮನೆಯಲ್ಲಿ ಸಂಭ್ರಮ – ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟ ಅವಿವಾ
‘ಸಿಟಾಡೆಲ್’ ಸೀರಿಸ್‌ನಲ್ಲಿ ತಾಯಿ ಪಾತ್ರ ನಿಭಾಯಿಸಿದ್ದೇನೆ. ಆ ಹುಡುಗಿ ಜೊತೆ ಸೆಟ್‌ನಲ್ಲಿ ಇದ್ದಷ್ಟು ದಿನ ನನ್ನ ಸ್ವಂತ ಮಗಳ ರೀತಿ ಇದ್ದಂತೆ ಅನ್ನಿಸುತ್ತಿತ್ತು ಎಂದು ಸಮಂತಾ (Samantha) ಮಾತನಾಡಿದ್ದಾರೆ. ಈಗ ತಾಯಿ ಆಗಬೇಕು ಎಂದುಕೊಳ್ಳುವುದು ಬಹಳ ತಡವಾಯಿತು ಎಂದು ನನಗೆ ಅನ್ನಿಸುತ್ತಿಲ್ಲ. ತಾಯಿಯಾಗಲು ನಾನು ಇಷ್ಟಪಡುತ್ತೇನೆ ಎಲ್ಲರೂ ನನ್ನ ವಯಸ್ಸಿನ ಬಗ್ಗೆ ಮಾತನಾಡುತ್ತಾರೆ. ಆದರೆ ಅದೇನು ಭಾರೀ ಅಡ್ಡಿ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ:ಟಾಕ್ಸಿಕ್ ಸಿನಿಮಾ ಸೆಟ್‍ಗೆ ಮರಗಳ ಮಾರಣಹೋಮ ಆರೋಪ – ಎಫ್‍ಐಆರ್ ದಾಖಲು
ಇನ್ನೂ ತಾಯಿಯಾಗೋ ಹಂಬಲವನ್ನು ವ್ಯಕ್ತಪಡಿಸಿದ ಬೆನ್ನಲ್ಲೇ 2ನೇ ಮದುವೆ ಬಗ್ಗೆ ನಟಿ ಪ್ಲ್ಯಾನ್ ಮಾಡಿದ್ದಾರಾ? ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಂದಹಾಗೆ, ‘ಸಿಟಾಡೆಲ್’ ವೆಬ್ ಸಿರೀಸ್‌ನಲ್ಲಿ ಒಂದು ಮಗುವಿನ ತಾಯಿ ಪಾತ್ರದಲ್ಲಿ ಮತ್ತು ಸ್ಟೈ ಏಜೆಂಟ್ ಆಗಿ ನಟಿಸಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್‌ನಲ್ಲಿ ಅವರು ಮಿಂಚಿದ್ದಾರೆ.