ಸೌತ್‌ನ ಸ್ಟಾರ್ ನಟಿ ಸಮಂತಾ (Samantha) ಅವರು 2021ರಲ್ಲಿ ನಾಗಚೈತನ್ಯ (Naga Chaitanya) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ತಾವು ಎದುರಿಸಿದ ಟೀಕೆಗಳ ಬಗ್ಗೆ ಮೌನ ಮುರಿದ್ದಾರೆ. ಡಿವೋರ್ಸ್ (Divorce) ಬಳಿಕ ನನ್ನನ್ನು ಸೆಕೆಂಡ್ ಹ್ಯಾಂಡ್ ಎಂದು ಟೀಕಿಸಿದರು ಎಂದು ಸ್ಯಾಮ್ ದುಃಖದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಓದುವುದರಲ್ಲಿ ನಶೆ ಕಂಡುಕೊಳ್ಳಿ, ಮಾದಕ ವಸ್ತುವಿನ ನಶೆ ಬೇಡ: ವಿದ್ಯಾರ್ಥಿಗಳಿಗೆ ಶಿವಣ್ಣ ಸಲಹೆ
ಸಂದರ್ಶನವೊಂದರಲ್ಲಿ ಸಮಂತಾ ಮಾತನಾಡಿ, ಮಹಿಳೆಯರು ಡಿವೋರ್ಸ್ ಪಡೆದರೆ ಸಾಕಷ್ಟು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಡಿವೋರ್ಸ್ ಬಳಿಕ ನನ್ನನ್ನು ಸೆಕೆಂಡ್ ಹ್ಯಾಂಡ್, ಜೀವನ ಹಾಳು ಮಾಡಿಕೊಂಡವಳು ಎಂದು ನಾನಾ ರೀತಿಯಲ್ಲಿ ನಿಂದಿಸಿದರು. ಇಂತಹ ಸಂದರ್ಭದಲ್ಲಿ ನಮ್ಮ ಕುಟುಂಬ ಕೂಡ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಆರಂಭದಲ್ಲಿ ಈ ವಿಚಾರದಿಂದ ನನಗೆ ತುಂಬಾ ನೋವಾಗಿತ್ತು. ಆದರೆ ನಾನು ಡಿವೋರ್ಸ್ ಪಡೆದಿದ್ದೇನೆ ಎಂದು ಒಪ್ಪಿಕೊಂಡೆ. ಹೌದು.. ಡಿವೋರ್ಸ್ ಆಗಿದೆ. ಅದನ್ನು ನಾನು ಎಲ್ಲೂ ಮರೆಮಾಚಿಲ್ಲ. ಹಾಗಂತ ನಾನು ಮೂಲೆಯಲ್ಲಿ ಕುಳಿತು ಅಳುತ್ತಾ ಇರುತ್ತೇನೆ ಎಂದರ್ಥವಲ್ಲ. ಎಲ್ಲಿ ಕೊನೆ ಇದೆಯೋ ಅಲ್ಲಿಂದಲೇ ಆರಂಭ ಆಗುತ್ತದೆ. ನಾನು ಈಗ ತುಂಬಾ ಖುಷಿಯಾಗಿದ್ದೇನೆ. ನಾನು ಬೆಳೆಯುತ್ತಿದ್ದೇನೆ. ಒಳ್ಳೆಯ ಕೆಲಸ ಸಿಗುತ್ತಿದೆ. ಒಳ್ಳೆಯ ವ್ಯಕ್ತಿಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ. ನನ್ನ ಜೀವನವನ್ನು ಮುಂದಿನ ಹಂತದತ್ತ ನೋಡುತ್ತಿದ್ದೇನೆ ಎಂದು ಸಮಂತಾ ಮಾತನಾಡಿದ್ದಾರೆ.
ಅಂದಹಾಗೆ, ಸಮಂತಾ ಮತ್ತು ನಾಗಚೈತನ್ಯ 2017ರಲ್ಲಿ ಮದುವೆಯಾದರು. 2021ರಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಪಡೆದರು. ಇದೀಗ ಸಮಂತಾ ಮಾಜಿ ಪತಿ ನಾಗಚೈತನ್ಯ ಅವರು ಶೋಭಿತಾ (Sobhita) ಜೊತೆ ಡಿ.4ರಂದು ಮದುವೆಗೆ ರೆಡಿಯಾಗಿದ್ದಾರೆ.