ಸೌತ್ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಸಮಂತಾ ಈಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ‘ಹನಿ ಬನಿ ಸಿಟಾಡೆಲ್’ ಸಿರೀಸ್ ಮೂಲಕ ನಟಿ ಸದ್ದು ಮಾಡುತ್ತಿದ್ದಾರೆ. ಇನ್ನೂ ‘ಪುಷ್ಪ’ (Pushpa) ಚಿತ್ರದಲ್ಲಿ ಹಿಟ್ ಸಾಂಗ್ ಕೊಟ್ಮೇಲೆ ಅವರ ಕೆರಿಯರ್‌ನಲ್ಲಿ ಹೇಳಿಕೊಳ್ಳುವಂತಹ ಸಿನಿಮಾ ಯಶಸ್ಸು ಸಿಗಲಿಲ್ಲ. ಈ ಕುರಿತು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಯಶ್ ಬೇಗ ಸಿನಿಮಾ ಮಾಡಿ: ‘ಟಾಕ್ಸಿಕ್’ ನೋಡುವ ನಿರೀಕ್ಷೆ ವ್ಯಕ್ತಪಡಿಸಿದ ಶಾರುಖ್ ಖಾನ್
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಸಂವಾದ ಮಾಡುವಾಗ ನಟಿ ಕೆರಿಯರ್ ಕುರಿತು ರಿಯಾಕ್ಟ್ ಮಾಡಿದ್ದಾರೆ. ಪ್ರತಿಯೊಂದು ಪಾತ್ರವನ್ನೂ ಚಾಲೆಂಜಿಂಗ್ ಆಗಿ ತೆಗೆದುಕೊಳ್ಳಬೇಕು ಎಂದು ನಾನು ನನಗೆ ಪ್ರಾಮಿಸ್ ಮಾಡಿಕೊಂಡಿದ್ದೇನೆ. ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಎಲ್ಲಾ ಸಮಯದಲ್ಲೂ ಗೆಲುವು ಸಿಕ್ಕಿಲ್ಲ. ನಾನು ನನ್ನ ವೈಫಲ್ಯಗಳನ್ನು ಒಪ್ಪಿಕೊಳ್ಳುತ್ತೇನೆ ಎಂದು ನಟಿ ಹೇಳಿದ್ದಾರೆ. ಇದರ ಜೊತೆಗೆ ಕೊನೆಯ ಕೆಲವು ಸಿನಿಮಾಗಳು ಅಂದುಕೊಂಡಂತೆ ಮೂಡಿ ಬಂದಿಲ್ಲ ಎಂದು ಸಿನಿಮಾ ಸೋಲಿನ ಬಗ್ಗೆ ಅವರು ಒಪ್ಪಿಕೊಂಡಿದ್ದಾರೆ.
ಅಂದಹಾಗೆ, ವರುಣ್ ಧವನ್ ನಟನೆಯ ‘ಹನಿ ಬನಿ ಸಿಟಾಡೆಲ್’ ವೆಬ್ ಸಿರೀಸ್‌ನಲ್ಲಿ ಸಮಂತಾ ಆ್ಯಕ್ಷನ್ ಅವತಾರ ತಾಳಿದ್ದಾರೆ. ಈ ಹಿಂದೆ ಎಂದೂ ನಟಿಸಿರದ ಪಾತ್ರದಲ್ಲಿ ಸ್ಯಾಮ್ ಕಾಣಿಸಿಕೊಂಡಿದ್ದಾರೆ. ಇದೇ ನವೆಂಬರ್ 7ರಂದು ಒಟಿಟಿಯಲ್ಲಿ ಈ ವೆಬ್ ಸರಣಿ ರಿಲೀಸ್ ಆಗಲಿದೆ.
ಇನ್ನೂ ನಾಗಚೈತನ್ಯ ಜೊತೆ ಸಮಂತಾ 2021ರಲ್ಲಿ ಡಿವೋರ್ಸ್ ಪಡೆದುಕೊಂಡರು. ಅಲ್ಲಿಂದ ಅವರು ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿಯೇ ಸುದ್ದಿಯಾಗುತ್ತಿದ್ದರು. ಅನಾರೋಗ್ಯದ ಬಳಲುತ್ತಿದ್ದ ನಟಿ ಈಗ ಚೇತರಿಸಿಕೊಂಡಿದ್ದಾರೆ. ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ.