ಹೈದರಾಬಾದ್: ಟಾಲಿವುಡ್‍ನ ಕ್ಯೂಟ್ ಕಪಲ್ ಎಂದೇ ಕರೆಸಿಕೊಳ್ಳುತ್ತಿದ್ದ ಸಮಂತಾ, ನಾಗಚೈತನ್ಯ ವಿಚ್ಛೇದನ ಪಡೆದುಕೊಂಡು ದೂರವಾಗಿರುವುದು ಗೊತ್ತಿರುವ ವಿಚಾರವಾಗಿದೆ. ಆದರೆ ಡಿವೋರ್ಸ್ ಆಗುತ್ತಿದ್ದಂತೆ ಈ ಜೋಡಿ ಕುರಿತಾಗಿ ಹಲವು ವಿಚಾರಗಳು ಹರಿದಾಡುತ್ತಿದ್ದವು. ಇದಕ್ಕೆ ಸಮಂತಾ ಖಾರವಾಗಿ ಪ್ರತಿಕ್ರಿಯೆ ನೀಡುವ ಮೂಲವಾಗಿ ತೆರೆ ಎಳೆದಿದ್ದಾರೆ.
ನನ್ನ ಬಗ್ಗೆ ಹಲವು ರೂಮರ್‌ಗಳು ಹಬ್ಬಿವೆ. ನನಗೆ ಅಕ್ರಮ ಸಂಬಂಧ ಇತ್ತಂತೆ, ಮಕ್ಕಳು ಬೇಡ ಅಂದಿದ್ನಂತೆ, ಅಬಾರ್ಷನ್ ಮಾಡಿಸಿಕೊಂಡಿದ್ನಂತೆ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ವಿಚ್ಛೇದನ ಎಂಬುದೇ ನೋವಿನ ವಿಷಯವಾಗಿದೆ. ಅದರಿಂದ ಹೊರ ಬರಲು ಸಮಯ ಬೇಕಿದೆ. ಆದರೆ ಅದರ ನಡುವೆ ಈ ರೀತಿಯ ರೂಮರ್‌ಗಳು ಹಬ್ಬಿದೆ. ಆದರೆ ಇವುಗಳಿಂದ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮೂಲಕ ಸಮಂತಾ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ
— Samantha (@Samanthaprabhu2) October 8, 2021
ಸಂಸಾರದ ಒಡೆಯಲು ಸಮಂತಾನೇ ಕಾರಣ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದರಿಂದ ಬೇಸರಗೊಂಡ ಸಮಂತಾ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ, ಮಹಿಳೆಯರು ಮಾತ್ರ ನಿರಂತರವಾಗಿ ನೈತಿಕವಾಗಿ ಪ್ರಶ್ನಾರ್ಹವಾಗಿದ್ದರೆ, ಅದೇ ಪುರುಷ ಮಾಡಿದಾಗ ನೈತಿಕವಾಗಿ ಅವರನ್ನು ಪ್ರಶ್ನಿಸುವುದಿಲ್ಲ. ಹಾಗಿದ್ದರೆ ನಾವು ಸಮಾಜದಲ್ಲಿ ಮೂಲಭೂತ ನೈತಿಕತೆಯನ್ನು ಹೊಂದಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ
ಅ.2 ರಂದು ಸಮಂತಾ ತಮ್ಮ ದಾಂಪತ್ಯದ ಬಗ್ಗೆ, ಹೆಚ್ಚು ಆಲೋಚನೆಯ ನಂತರ ಚಾಯ್ ಮತ್ತು ನಾನು ನಮ್ಮ ಸ್ವಂತ ದಾರಿಗಳನ್ನು ಅನುಸರಿಸಲಿದ್ದೇವೆ. ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಹೇಳುವ ಮೂಲಕವಾಗಿ ತಾವು ವಿಚ್ಛೇದನ ಪಡೆದುಕೊಳ್ಳುತ್ತಿರುವ ವಿಚಾರವನ್ನು ಅಭಿಮಾನಿಗಳಿಗೆ ಹೇಳಿದ್ದರು. ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ರೂಮರ್‌ಗಳಿಂದ ಬೇಸರಗೊಂಡ ಸಮಂತಾ ಇಂದು 2 ಪೋಸ್ಟ್ ಹಾಕುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದನ್ನೂ ಓದಿ : ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು: ಸಮಂತಾ
ಅಕ್ಕಿನೇನಿ ಕುಟುಂಬ ಸಮಂತಾಗೆ ಜೀವನಾಂಶವಾಗಿ 200 ಕೋಟಿ ರೂ.ವನ್ನು ನೀಡಲು ಮುಂದಾಗಿತ್ತು. ಆದರೆ ಸಮಂತಾ ನನಗೆ ಜೀವನಾಂಶ ಬೇಡ ಹಾಗೂ ನಾಗಚೈತನ್ಯ ಅಥವಾ ಅವರ ಕುಟುಂಬದವರಿಂದ ಒಂದು ಪೈಸೆ ಕೂಡಾ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ : ವಿಚ್ಛೇದನ ಪಡೆಯುತ್ತಿದ್ದಂತೆ ಹೆಸರು ಬದಲಿಸಿಕೊಂಡ ಸಮಂತಾ