ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ದಕ್ಷಿಣ ಸಿನಿರಂಗದಲ್ಲಿಯೇ ಕ್ಯೂಟ್ ಕಪಲ್ ಆಗಿದ್ದರು. ಆದರೆ ಕೆಲವು ಕಾರಣಗಳಿಂದ ಈ ಜೋಡಿಗಳು ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವಾಡಿದ್ದರು. ಆದರೂ ನಾವಿಬ್ಬರು ಗುಡ್ ಫ್ರೆಂಡ್ಸ್ ಆಗಿರುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ ಇದಕ್ಕಿದ್ದ ಹಾಗೇ ಸಮಂತಾ ತಮ್ಮ Instagramನಲ್ಲಿ ನಾಗ ಚೈತನ್ಯ ಅವರನ್ನು ಅನ್ಫಾಲೋ ಮಾಡುವ ಮೂಲಕ ತಮ್ಮ ಸಂಬಂಧಕ್ಕೆ ಪೂರ್ಣ ಅಂತ್ಯವಾಡಿದ್ದಾರೆ ಎಂಬುದನ್ನು ಪರೋಕ್ಷವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ನಾಗಚೈತ್ಯನ್ಯ ಜೊತೆ ವಿಚ್ಛೇದನ ಪಡೆದ ನಂತರವೂ ಸಮಂತಾ ಅವರನ್ನು ಇನ್ಸ್ಟಾದಲ್ಲಿ ಫಾಲೋ ಮಾಡುತ್ತಿದ್ದರು. ಆದರೆ ಇಂದು ಅವರ ಪ್ರೊಫೈಲ್ ಚೆಕ್ ಮಾಡಿದಾಗ 400ಕ್ಕೂ ಹೆಚ್ಚು ಜನರನ್ನು ಸಮಂತಾ ಫಾಲೋ ಮಾಡಿದ್ದಾರೆ. ಈ ಮಧ್ಯೆ ನಾಗಚೈತನ್ಯ ಅವರನ್ನು ಫಾಲೋ ಮಾಡುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ನಟಿ ಈ ಹಿಂದೆಯೂ ಸಹ ತಮ್ಮ ಪ್ರೊಫೈಲ್ ನಲ್ಲಿ ನಾಗಚೈತನ್ಯ ಜೊತೆ ಕಾಣಿಸಿಕೊಂಡಿದ್ದ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದನ್ನೂ ಓದಿ: ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!
ಮನಂ, ಮಜಿಲಿಯೇ ಮಾಯ ಚೇಸಾವೆ ಮುಂತಾದ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ 2017 ರಲ್ಲಿ ಸಪ್ತಪದಿ ತುಳಿದಿತ್ತು. ಆದರೆ ಕಳೆದ ವರ್ಷವಷ್ಟೇ ಈ ತಾರಾ ಜೋಡಿ ಪ್ರತ್ಯೇಕವಾಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಅದರಂತೆ ಸಮಂತಾ ಪ್ರಭು ರುತ್ ಸೋಶಿಯಲ್ ಮೀಡಿಯಾದಿಂದ ‘ಅಕ್ಕಿನೇನಿ’ ಎಂಬ ನಾಗ ಚೈತನ್ಯ ಸರ್ ನೇಮ್ ತೆಗೆದುಹಾಕಿದ್ದರು. ನಂತರ ಈ ನಟಿ ‘ಎಸ್’ ಎಂದು ತಮ್ಮ ಸೋಶಿಯಲ್ ಮೀಡಿಯಾ ಪ್ರೊಫೈಲ್ ಬದಲಾಯಿಸಿಕೊಂಡಿದ್ದಾರೆ.