ಸೌತ್ ಸಿನಿರಂಗದ ಆ್ಯಪಲ್ ಬ್ಯೂಟಿ ಸಮಂತಾ (Samantha) ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುತ್ತಾರೆ. ಆದರೆ ಇತ್ತೀಚೆಗೆ ಸ್ಯಾಮ್ ಸೈಲೆಂಟ್ ಆಗಿದ್ದಾರೆ. ನಟಿ ಸಮಂತಾಗೆ ಆರೋಗ್ಯ ಕೈಕೊಟ್ಟಿದೆ ಎಂಬ ಸುದ್ದಿ ಸಖತ್ ಸದ್ದು ಮಾಡುತ್ತಿದೆ.
ಸಮಂತಾ ಸದಾ ಹೊಸ ಹೊಸ ಫೋಟೋಶೂಟ್ ಮತ್ತು ಚಿತ್ರದ ಪೋಸ್ಟರ್, ಟೀಸರ್ ರಿಲೀಸ್ ಮಾಡುವ ಮೂಲಕ ಆಕ್ಟೀವ್ ಆಗಿದ್ದರು. ಕಳೆದ 10 ದಿನಗಳಿಂದ ಸೋಷಿಯಲ್ಲಿ ಮೀಡಿಯಾದಲ್ಲಿ ಸಮಂತಾ(Samantha) ಸೈಲೆಂಟ್ ಆಗಿರುವ ಬೆನ್ನಲ್ಲೇ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಹರಿದಾಡುತ್ತದೆ.
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇಲ್ಲ. ಸಾರ್ವಜನಿಕವಾಗಿಯೂ ಸಮಂತಾ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸಮಂತಾ ಬಗ್ಗೆ ಅನಾರೋಗ್ಯದ ಬಗ್ಗೆ ಸುದ್ದಿ ಹಬ್ಬುತ್ತಿದಂತೆ ಫ್ಯಾನ್ಸ್ ನೆಚ್ಚಿನ ನಟಿಯ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಒಂದಾದ ʻಪಂಚರಂಗಿ’ ದಿಗಂತ್- ನಿಧಿ ಸುಬ್ಬಯ್ಯ ಜೋಡಿ
ಅನಾರೋಗ್ಯದ ಹಿನ್ನೆಲೆ ವಿಜಯ್ ದೇವರಕೊಂಡ(Vijay Devarakonda) ಜೊತೆಗಿನ `ಖುಷಿ’ (Kushi) ಚಿತ್ರದ ಶೂಟಿಂಗ್ಗೆ ನಟಿ ಬ್ರೇಕ್ ಹಾಕಿದ್ದಾರೆ. ಅಷ್ಟಕ್ಕೂ ಅನಾರೋಗ್ಯದ ವಿಚಾರ ಅಧಿಕೃತವಾಗಿ ಹೊರ ಬೀಳುವವೆರೆಗೂ ಕಾದುನೋಡಬೇಕಿದೆ.