ಸಿನಿರಂಗದ ಓಡುವ ಕುದುರೆ ಸಮಂತಾ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ ಹೊಸ ಚಿತ್ರ ಅನೌನ್ಸ್ ಆಗಿತ್ತು. ಅದರ ಬೆನ್ನಲ್ಲೇ ವಿಜಯ್ ದೇವರಕೊಂಡ ಜೊತೆ ಸಮಂತಾ ಕಾಶ್ಮೀರಕ್ಕೆ ಹಾರಿದ್ದಾರೆ.
`ಮಹಾನಟಿ’ ಚಿತ್ರದ ಮೂಲಕ ಈಗಾಗಲೇ ಸಿನಿರಸಿಕರ ಗಮನಸೆಳೆದಿರೋ ಜೋಡಿ ವಿಜಯ್ ದೇವರಕೊಂಡ ಮತ್ತು ಸಮಂತಾ ಈಗ `ಮಜಲಿ’ ಖ್ಯಾತಿಯ ಶಿವ ನಿರ್ವಾಣ ನಿರ್ದೇಶನದ ಹೊಸ ಚಿತ್ರದಲ್ಲಿ ಇಬ್ಬರು ಮತ್ತೆ ಜತೆಯಾಗಿ ನಟಿಸುತ್ತಿದ್ದಾರೆ. ಚಿತ್ರೀಕರಣಕ್ಕಾಗಿ ಸಮಂತಾ ಮತ್ತು ದೇವರಕೊಂಡ ಕಾಶ್ಮೀರಕ್ಕೆ ಹೋಗಿದ್ದಾರೆ.
Doing poojas for Family films ????
❤️ @Samanthaprabhu2 – @ShivaNirvana – @HeshamAWMusic – @muraligdop & Your man in a film for the families, to get together and enjoy ???????? pic.twitter.com/ayyyOYUmuz
— Vijay Deverakonda (@TheDeverakonda) April 21, 2022
ಇನ್ನು ಸಮಂತಾ ಹೊಸ ಪ್ರಾಜೆಕ್ಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರಕ್ಕೆ ಹೋಗುತ್ತಿರೋ ಸಣ್ಣ ತುಣುಕನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ವಿಜಯ್ ಮತ್ತು ಸಮಂತಾ ಸಿನಿಮಾಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇದನ್ನೂ ಓದಿ: ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್



