ಚೆನ್ನೈ: ಟಾಲಿವುಡ್ ಖ್ಯಾತ ನಟಿ ಸಮಂತಾ ರುತ್ ಪ್ರಭು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.
ಸಮಂತಾ ಮತ್ತು ನಾಗಚೈತನ್ಯ ಅ.2ರಂದು ತಾವು ಬೇರೆಯಾಗುತ್ತಿದ್ದೇವೆ ಎಂದು ಸಾರ್ವಜನಿಕವಾಗಿ ತಿಳಿಸಿದ್ದರು. ನಮ್ಮ ವೈಯಕ್ತಿಕ ವಿಚಾರಕ್ಕೆ ಮತ್ತು ನಮ್ಮ ಏಕಾಂತವನ್ನು ಎಲ್ಲರೂ ಗೌರವಿಸಿ ಎಂದು ಬರೆದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆ ಇವರಿಬ್ಬರು ಬೇರೆಯಾದ ಕೆಲವೇ ದಿನಗಳಲ್ಲಿ ಸಮಂತಾ ನಾಗಚೈತನ್ಯ ಅವರೊಂದಿಗೆ ತೆಗೆಸಿಕೊಂಡಿದ್ದ, ಫೋಟೋಗಳನ್ನು ಮಧುರವಾದ ಕ್ಷಣಗಳನ್ನು ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ: ಗೌಪ್ಯವಾಗಿ ಬೂಸ್ಟರ್ ಶಾರ್ಟ್ ಪಡೆಯುತ್ತಿರುವ ಆರೋಗ್ಯ ಸಿಬ್ಬಂದಿ
View this post on Instagram
ಈ ಮೂಲಕ ಅಭಿಮಾನಿಗಳಿಗೆ ತಾವು ಎಲ್ಲದನ್ನು ಮರೆಯಲು ಪ್ರಯತ್ನಿಸುತ್ತಿರುವುದಾಗಿ ಸೂಚನೆಯನ್ನು ನೀಡಿದ್ದಾರೆ. ಆದರೆ ಸಮಂತಾ ಅವರು ನಾಗಚೈತನ್ಯ ಅವರೊಂದಿಗಿನ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ್ದು, ಸ್ನೇಹಿತರು, ಕುಟುಂಬದವರ ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿಲ್ಲ. ಆದರೆ ಸುಮಾರು 100 ಕ್ಕೂ ಹೆಚ್ಚು ಫೋಟೋಗಳನ್ನು ಸಮಂತಾ ಇನ್ಸ್ಟಾದಿಂದ ಡಿಲೀಟ್ ಮಾಡಿದ್ದಾರೆ.
View this post on Instagram
ಈಗ ಅವರ ಇನ್ಸ್ಟಾದಲ್ಲಿ ಅವರ ಕೆಲಸ, ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಬಗ್ಗೆ ತುಂಬಿಕೊಂಡಿದೆ. ಸಮಂತಾ ಅವರು ಋಷಿಕೇಶಕ್ಕೆ ಭೇಟಿ ನೀಡಿದ ಬಳಿಕ ಪ್ರಸ್ತುತ ದುಬೈಗೆ ಪ್ರವಾಸಕ್ಕೆಂದು ಹೋಗಿದ್ದಾರೆ. ಇದನ್ನೂ ಓದಿ: ನಮ್ಮನ್ನ ಎಂದೂ ಅವ್ರು ಕೆಲ್ಸದವರಂತೆ ನೋಡಿಲ್ಲ: ಕೇಶ ವಿನ್ಯಾಸಕಾರ ಕಾರ್ತಿಕ್ ಭಾವುಕ