ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಇತ್ತೀಚಿಗೆ ಸಾಮಾಜಿಕ ಜಾಲತಾಣವೊಂದರಲ್ಲಿ ತಪ್ಪಾದ ಇಂಗ್ಲೀಷ್ ಪದವನ್ನು ಬಳಸಿ ಟ್ರೋಲ್ ಆಗಿದ್ದರು. ಈ ವೇಳೆ ಅನುಚಿತ ಪ್ರಶ್ನೆಯನ್ನು ಕೇಳಿದ್ದ ಟ್ರೋಲಿಗನಿಗೆ ಸಮಂತಾ ಅವರು ಪ್ರತಿಕ್ರಿಯಿಸಿ ನೆಟ್ಟಿಗನ ಬಾಯಿ ಮುಚ್ಚಿಸಿದ್ದಾರೆ.
ಈ ಹಿಂದೆ ಸಮಂತಾ ಅವರು ಇನ್ಸ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಗಳಿಗಾಗಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ಅನ್ನು ಆಯೋಜಿಸಿದ್ದರು. ಇದರಲ್ಲಿ ಅವರು ತಮ್ಮ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಕೆಲವರು ನಟಿಗೆ ಉತ್ತಮ ಪ್ರಶ್ನೆಗಳನ್ನು ಕೇಳಿದರೆ, ಅದರಲ್ಲಿ ಒಬ್ಬರು, ನಾನು ನಿಮ್ಮನ್ನು ಪುನರಾವರ್ತಿಸಲು ಬಯಸುತ್ತೇನೆ ಅಂತ ಕೇಳಿದ್ದಾರೆ. ಇದನ್ನೂ ಓದಿ: ಶಾಕುಂತಲಂ ಫಸ್ಟ್ ಪೋಸ್ಟರ್ ಔಟ್ – ಶಕುಂತಲೆ ರೂಪದಲ್ಲಿ ಸಮಂತಾ ಫುಲ್ ಮಿಂಚಿಂಗ್
ಇದಕ್ಕೆ ಉತ್ತರಿಸಿದ ಸಮಂತಾ ಅವರು, ಒಂದೇ ವಾಕ್ಯದಲ್ಲಿ ನಿಮಗೆ ಕೇಳುವುದಾದರೆ ರೀಪ್ರೊಡ್ಯೂಸ್ ಅನ್ನು ಹೇಗೆ ಬಳಸುವುದು. ಅದನ್ನು ಮೊದಲು ಗೂಗಲ್ ಮಾಡಬೇಕೇ? ಎಂದಿದ್ದಾರೆ.
ಮತ್ತೊಬ್ಬ ಅಭಿಮಾನಿ ಸಮಂತಾ ಅವರಿಗೆ ಕೇಳಿದರು, ಭವಿಷ್ಯದಲ್ಲಿ ನೀವು ಚಲನಚಿತ್ರವನ್ನು ನಿರ್ದೇಶಿಸುತ್ತೀರಾ ಅಂತ ಕೇಳಿದ್ದಾರೆ. ಇದಕ್ಕೆ ಅವರು ಈಗಲೇ ಇಲ್ಲ ಇತ್ತೀಚೆಗೆ ನಿರ್ದೇಶನದ ಬಗ್ಗೆ ಕಲಿಯುತ್ತಿದ್ದೇನೆ ಎಂದರು. ಇದನ್ನೂ ಓದಿ: ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ
View this post on Instagram
ಅಂದಹಾಗೆ ನಟಿ ಸಮಂತಾ ಶಕುಂತಲಂ ಸಿನಿಮಾದ ಫಸ್ಟ್ ಲುಕ್ ಪೆÇೀಸ್ಟರ್ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿದೆ. ಹತ್ತಾರು ಹಿಟ್ ಚಿತ್ರಗಳನ್ನು ಕೊಟ್ಟಿರುವ ಸಮಂತಾ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಸಮಂತಾ ಅವರ ಹೊಸ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದು, ಇದೀಗ ಶಕುಂತಲಂ ಈ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿದೆ.