ತಮನ್ನಾ ಬಾಯ್‌ಫ್ರೆಂಡ್ ವಿಜಯ್ ಜೊತೆ ಕಾಣಿಸಿಕೊಂಡ ಸಮಂತಾ

Public TV
1 Min Read
samantha 1 4

ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು (Samantha) ಸದ್ಯ ವರುಣ್ ಧವನ್ ಜೊತೆಗಿನ ‘ಹನಿ ಬನಿ’ (Honey Bunny) ವೆಬ್ ಸರಣಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ತಮನ್ನಾ ಭಾಟಿಯಾ ಬಾಯ್‌ಫ್ರೆಂಡ್ ಜೊತೆ ಸಮಂತಾ ಕಾಣಿಸಿಕೊಂಡಿದ್ದಾರೆ. ಸ್ಯಾಮ್- ವಿಜಯ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

vijay varma

ಒಟಿಟಿ ಕಾರ್ಯಕ್ರಮವೊಂದರಲ್ಲಿ ತಮನ್ನಾ ಬಾಯ್‌ಫ್ರೆಂಡ್ ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಜೊತೆ ಸಮಂತಾ (Samantha) ಕಾಣಿಸಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಿಜಯ್ ಜೊತೆ ಮಾತನಾಡುತ್ತಾ ನಗು ನಗುತ್ತಾ ಸಮಂತಾ ಬರುತ್ತಿದ್ದಾರೆ. ಇದನ್ನು ನೋಡ್ತಿದ್ದಂತೆ ತಮನ್ನಾ (Tamannaah Bhatia) ಎಲ್ಲಿದ್ದಾರೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಕಾಲಿಗೆ ಬಿದ್ದ ಅಭಿಮಾನಿ ವರ್ತನೆ ಕಂಡು ಶಾಕ್‌ ಆದ ಲಕ್ಷ್ಮಿ ಮಂಚು

samantha 4

ಚಿತ್ರರಂಗದಲ್ಲಿ ಒಬ್ಬ ನಟಿಯನ್ನು ಕಂಡರೆ ಮತ್ತೊಬ್ಬ ನಟಿಗೆ ಆಗೋದೇ ಇಲ್ಲ ಎಂಬ ಮಾತಿದೆ. ಆದರೆ ಅದನ್ನು ಸಮಂತಾ-ತಮನ್ನಾ ಹುಸಿ ಮಾಡಿದ್ದಾರೆ. ಇದೇ ಒಟಿಟಿ ಕಾರ್ಯಕ್ರಮದಲ್ಲಿ ಹಲವು ತಿಂಗಳುಗಳ ಬಳಿಕ ವಿಜಯ್ ಜೊತೆಯೇ ತಮನ್ನಾ ಅವರು ಸಮಂತಾರನ್ನು ಭೇಟಿಯಾಗಿದ್ದಾರೆ. ಇಬ್ಬರು ಖುಷಿಯಿಂದ ತಬ್ಬಿಕೊಂಡು ಫೋಟೋ ತೆಗೆದುಕೊಂಡಿದ್ದಾರೆ. ಅಸಲಿಗೆ ಆ ಫೋಟೋವನ್ನು ಕ್ಲಿಕ್ ಮಾಡಿದ್ದೇ ವಿಜಯ್ ವರ್ಮಾ. ಇಬ್ಬರ ಸ್ನೇಹಕ್ಕೆ ವಿಜಯ್ ಸಾಕ್ಷಿಯಾಗಿದ್ದಾರೆ.

ತಮನ್ನಾರನ್ನು ಭೇಟಿಯಾದ ಖುಷಿಗೆ ಸಮಂತಾ ‘ಓ ಮೈ ಲವ್’ ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ, ವಿಜಯ್‌ರನ್ನು ಸಮಂತಾಗೆ ತಮನ್ನಾ ಪರಿಚಯ ಮಾಡಿಸಿಕೊಟ್ಟಿದ್ದಾರೆ.

Share This Article