ಸಮಂತಾ ಮೊದಲ ಸಂಭಾವನೆ ಕೇಳಿದ್ರೆ ನೀವು ಶಾಕ್‌ ಆಗುತ್ತೀರಾ

Advertisements

ಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಸಮಂತಾ ಈಗ ಸಂಭಾವನೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕೈತುಂಬಾ ಸಿನಿಮಾ ಆಫರ್ಸ್‌ ಗಿಟ್ಟಿಸಿಕೊಂಡಿರುವ ನಟಿಯ ಮೊದಲ ಸಂಭಾವನೆ ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿಪಡುತ್ತೀರಾ. ಈಗ ಸಮಂತಾ ತಮ್ಮ ಮೊದಲ ಸಂಭಾವನೆ ವಿಷ್ಯವಾಗಿ ಸೌಂಡ್ ಮಾಡ್ತಿದ್ದಾರೆ.

Advertisements

ಚಿತ್ರರಂಗದಲ್ಲಿ ಆಸರೆಯಿಲ್ಲದೇ ನೆಲೆ ಗಿಟ್ಟಿಸಿಕೊಳ್ಳುವುದು ತುಂಬಾ ಕಷ್ಟ ಹೀಗಿರುವಾಗ ತಮ್ಮ ಸ್ವಂತ ಪ್ರತಿಭೆಯಿಂದ ಒಂದೊಂದೇ ಮೆಟ್ಟಿಲೇರಿದ ನಟಿ ಸಮಂತಾ ಪ್ರಸ್ತುತ ಒಂದು ಸಿನಿಮಾಗೆ 3 ರಿಂದ 5 ಕೋಟಿ ಚಾರ್ಜ್ ಮಾಡುತ್ತಾರೆ. ಆದರೆ ಈ ಹಿಂದಿನ ಸಮಂತಾ ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಾ. ನಟಿಯ ಮೊದಲ ಸಂಬಳ 500 ರೂಪಾಯಿ ಅನ್ನು ಸಂಪಾದಿಸಿದ್ದರಂತೆ. ಇದನ್ನೂ ಓದಿ:ಥೈಲ್ಯಾಂಡ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮಾಸ್ಟರ್ ಪೀಸ್ ಬೆಡಗಿ

Advertisements

10ನೇ ತರಗತಿಯಲ್ಲಿರುವಾಗ ಶಾಲೆಗೆ ರಜೆಯಿದ್ದ ಸಂದರ್ಭದಲ್ಲಿ ನಿರೂಪಕಿ ಆಗಿ ಸಮಂತಾ ಕೆಲಸ ಮಾಡುತ್ತಿದ್ದರು. ಈ ವೇಳೆ ದಿನವಿಡಿ ಕೆಲಸ ಮಾಡಿರುವುದಕ್ಕೆ 500 ರೂಪಾಯಿ ಅನ್ನು ನೀಡಿದ್ದರಂತೆ. ಈ ಕುರಿತು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದಾರೆ. ಈಗ ಟಾಲಿವುಡ್‌ನಿಂದ ಹಾಲಿವುಡ್‌ವರೆಗೂ ಸಮಂತಾ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಒಟ್ನಲ್ಲಿ ಜೀರೋ ಟು ಹೀರೋಯಿನ್ ಆದ ನಟಿ ಸಮಂತಾ ಏಳಿಗೆ ನೋಡಿ ಫ್ಯಾನ್ಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Live Tv

Advertisements
Exit mobile version