ಸಮಂತನಾ ಅಪಾರವಾಗಿ ಗೌರವಿಸ್ತೀನಿ, ಡಿವೋರ್ಸ್ ವಿಚಾರ ಇಲ್ಲಿಗೆ ಬಿಡಿ : ನಾಗಚೈತನ್ಯ

ಪದೇ ಪದೇ ಡಿವೋರ್ಸ್ ವಿಚಾರವನ್ನೇ ಕೇಳುತ್ತಿರುವುದಕ್ಕೆ ತೆಲುಗು ನಟ ನಾಗಚೈತನ್ಯ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಖಾಸಗಿ ವಿಚಾರಗಳನ್ನು ಬೇರೆಯವರಿಗೆ ತಿಳಿದುಕೊಳ್ಳಲು ಕುತೂಹಲ ಇರುತ್ತದೆ ನಿಜ. ಆದರೆ, ನಮಗೆಲ್ಲ ಅದು ಅಪಾರ ಹಿಂಸೆ ಕೊಡುತ್ತದೆ. ನಾನು ಸಮಂತಾ ಅವರನ್ನು ಅಪಾರವಾಗಿ ಗೌರವಿಸುತ್ತೇನೆ. ಡಿವೋರ್ಸ್ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದಿದ್ದಾರೆ ನಾಗಚೈತನ್ಯ.
ಸಮಂತಾ ಮತ್ತು ತಮ್ಮ ನಡುವೆ ಏನು ನಡೆಯಿತು, ಡಿವೋರ್ಸ್ ಯಾಕಾಯಿತು ಎನ್ನುವುದು ನಮ್ಮಿಬ್ಬರಿಗೆ ಮಾತ್ರ ಗೊತ್ತಿದೆ. ಉಳಿದೆಲ್ಲವೂ ಸುಳ್ಳು. ಅವರು ಅದನ್ನು ದಾಟಿಕೊಂಡು ಬಹುಮುಂದೆ ಹೋಗಿದ್ದಾರೆ. ನಾನಿನ್ನೂ ಪ್ರಯತ್ನದಲ್ಲಿದ್ದೇನೆ. ನಮ್ಮ ಪಾಡಿಗೆ ನಮಗೆ ಕೆಲಸ ಮಾಡಲು ಬಿಡಿ ಎಂದು ನಾಗಚೈತನ್ಯ ಮನವಿ ಮಾಡಿಕೊಂಡಿದ್ದಾರೆ. ಎಲ್ಲರ ಬದುಕಿನಲ್ಲಿ ನಡೆಯುವುದು ನಮ್ಮ ಬದುಕಿನಲ್ಲೂ ನಡೆದಿದೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್‌ಗೆ ಯಾಕೆ ಹೋಗಬಾರದು? ನವ್ಯಶ್ರೀ ರಾವ್ ಪ್ರಶ್ನೆ
ನಾಗಚೈತನ್ಯ ಮತ್ತು ಸಮಂತಾ ಇಷ್ಟಪಟ್ಟು ಮದುವೆಯಾದವರು. ಇಬ್ಬರೂ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದವರು. ಇಬ್ಬರೂ ದೂರವಾಗುತ್ತಾರೆ ಎಂದಾಗ ಅಭಿಮಾನಿಗಳು ದುಃಖಿಸಿದ್ದಾರೆ. ಇದೀಗ ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಈ ವಿಷಯವನ್ನು ಇಲ್ಲಿಗೆ ಬಿಟ್ಟು, ನಮ್ಮ ನೆಮ್ಮದಿಯ ಬದುಕಿಗೆ ಶುಭ ಹಾರೈಸಿ ಎಂದು ನಾಗಚೈತನ್ಯ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.