BollywoodCinemaLatestMain PostSouth cinema

ಸ್ಟಾರ್ ಹೀರೋ ಎದುರು ಖಡಕ್ ವಿಲನ್ ಆಗಿ ಮಿಂಚಲಿದ್ದಾರೆ ಸಮಂತಾ

ಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ಎಲ್ಲಾ ಬಗೆಯ ಪಾತ್ರದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಾಯಕಿಯಾಗಿ ಡಿಮ್ಯಾಂಡ್‌ಯಿರೋ ಸಮಂತಾಗೆ ನಾಯಕಿಪಟ್ಟನೇ ಬೇಕು ಅಂತಾ ಕೂತವರಲ್ಲ, ಪಾತ್ರಕ್ಕೆ ಪ್ರಾಮುಖ್ಯತೆಯಿದ್ದು, ಭಿನ್ನ ಎಂದೆನಿಸಿದರೆ ಹೊಸ ಬಗೆಯ ಪಾತ್ರಕ್ಕೂ ಸಮಂತಾ ಜೈ ಎನ್ನುತ್ತಾರೆ. ಈಗ ಅಂತಹದ್ದೇ ಭಿನ್ನ ಪಾತ್ರದ ಮೂಲಕ ಸ್ಟಾರ್ ಹೀರೋ ಎದುರು ಖಡಕ್ ವಿಲನ್ ಆಗಿ ಮಿಂಚಲು ಸಮಂತಾ ರೆಡಿಯಾಗಿದ್ದಾರೆ.

`ದಿ ಫ್ಯಾಮಿಲಿಮೆನ್ 2′, `ಪುಷ್ಪ’ ಸೂಪರ್ ಸಕ್ಸಸ್ ನಂತರ ಸಮಂತಾ ಪಾತ್ರಗಳ ಆಯ್ಕೆಯಲ್ಲಿ ಮತ್ತಷ್ಟು ಸೆಲೆಕ್ಟೀವ್ ಆಗಿದ್ದಾರೆ. ಸ್ಟಾರ್ ನಾಯಕಿಯಾಗಿದ್ದರು, ನಾಯಕಿಯ ಪಟ್ಟನೇ ಬೇಕು ಅಂತಾ ಕೂರದೇ ಪವರ್‌ಫುಲ್ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗ ಸೂಪರ್ ಸ್ಟಾರ್ ದಳಪತಿ ವಿಜಯ್‌ಗೆ ಖಡಕ್ ಲೇಡಿ ವಿಲನ್ ಆಗಿ ಮಿಂಚಲು ಸಮಂತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ನನ್ನ ಪತಿ ಜನಸಂಖ್ಯೆ ನಿಯಂತ್ರಣ ಮಾಡುತ್ತಿದ್ದಾರೆ: ಕರೀನಾ ಕಪೂರ್‌

ವಂಶಿ ಪೈಡಿಪಲ್ಲಿ ನಿರ್ದೇಶನದ `ವಾರಿಸು’ ಸಿನಿಮಾದಲ್ಲಿ ದಳಪತಿ ವಿಜಯ್‌ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ವಿಜಯ್‌ಗೆ ಎದುರಾಗಿ ಲೇಡಿ ವಿಲನ್ ಆಗಿ ಸಮಂತಾ ಟಕ್ಕರ್ ಕೊಡಲಿದ್ದಾರೆ. ಈ ಹಿಂದಿನ ಚಿತ್ರಗಳಲ್ಲಿ ವಿಜಯ್ ಮತ್ತು ಸಮಂತಾ ರೊಮ್ಯಾಂಟಿಕ್ ಜೋಡಿಯಾಗಿ ಸಿನಿರಸಿಕರ ಮನಗೆದ್ದಿದ್ರು. ಈಗ ವಿಜಯ್‌ಗೆ ವಿಲನ್ ಸಮಂತಾ ಬಂದಿರೋದು ಅಭಿಮಾನಿಗಳಲ್ಲಿ ಮತ್ತಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ.

Live Tv

Leave a Reply

Your email address will not be published. Required fields are marked *

Back to top button