ನಟಿ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು 1 ವರ್ಷ ಆಗುತ್ತಾ ಬಂದಿದೆ. ಈಗ ಇಬ್ಬರೂ ವೃತ್ತಿ ಜೀವನದ ಕಡೆ ಗಮನ ನೀಡ್ತಿದ್ದಾರೆ. ಹೀಗಿರುವಾಗ ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ವಿಚಾರದಲ್ಲಿ ಅನಗತ್ಯವಾಗಿ ಸಮಂತಾ ಅವರನ್ನು ಚೈ ಫ್ಯಾನ್ಸ್ ಎಳೆದು ತಂದಿದ್ದಾರೆ. ಇವರೆಲ್ಲರಿಗೂ ಸಮಂತಾ ಖಡಕ್ ಉತ್ತರ ನೀಡಿದ್ದಾರೆ.
Advertisement
ಕಳೆದ ವರ್ಷ ಸಮಂತಾ ಮತ್ತು ನಾಗ ಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಿದ್ದಾರೆ. ಎಲ್ಲವನ್ನು ಮರೆತು ಹೊಸ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಕೆಲವರು ಇವರ ಗಾಯದ ಮೇಲೆ ಮತ್ತೆ ಬರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಸಮಂತಾ ತಕ್ಕ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಬಾಲಿವುಡ್‌ಗೆ ರಾಮ್ ಚರಣ್: ಸಲ್ಮಾನ್ ಖಾನ್ ಜೊತೆ ಜ್ಯೂ.ಮೆಗಾಸ್ಟಾರ್
Advertisement
Advertisement
ಸಮಂತಾ ಜತೆಗಿನ ವಿಚ್ಛೇದನ ನಂತರ ನಾಗಚೈತನ್ಯ ನಟಿ ಶೋಭಿತಾ ಧುಲಿಪಾಲ ಜತೆ ಪ್ರೀತಿಯಲ್ಲಿದ್ದಾರಂತೆ. ಸಾಕಷ್ಟು ದಿನಗಳಿಂದ ನಾಗ ಚೈತನ್ಯ ಶೋಭಿತಾ ಜತೆ ಡೇಟಿಂಗ್‌ನಲ್ಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ವಿಷ್ಯಕ್ಕೆ ಸಮಂತಾ ಅವರನ್ನು ಎಳೆದಿದ್ದಾರೆ. ಅದಕ್ಕೆ ಸಮಂತಾ ಟ್ವೀಟ್ ಮೂಲಕ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.
Advertisement
ಹೆಣ್ಣು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಅದು ನಿಜ ಎನ್ನುತ್ತೀರಿ. ಗಂಡು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಇದು ಹೆಣ್ಣಿನ ಕೆಲಸ ಎನ್ನುತ್ತೀರಿ. ಇದರಲ್ಲಿ ಭಾಗಿಯಾದವರೇ ಎಲ್ಲವನ್ನು ಬಿಟ್ಟು ಮುಂದೆ ಸಾಗಿದ್ದಾರೆ. ನೀವೂ ಇದನ್ನು ಬಿಟ್ಟು ಮುಂದೆ ಸಾಗಿ. ನಿಮ್ಮ ಕೆಲಸ ನೋಡಿಕೊಳ್ಳಿ, ನಿಮ್ಮ ಕುಟುಂಬದ ಕಡೆ ಗಮನ ನೀಡಿ ಅಂತಾ ಕೆಣಕಿದವರಿಗೆ ಸಮಂತಾ ತಿರುಗೇಟು ನೀಡಿದ್ದಾರೆ.
Rumours on girl – Must be true !!
Rumours on boy – Planted by girl !!
Grow up guys ..
Parties involved have clearly moved on .. you should move on too !! Concentrate on your work … on your families .. move on!! https://t.co/6dbj3S5TJ6
— Samantha (@Samanthaprabhu2) June 21, 2022
ಟಾಲಿವುಡ್‌ನ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ನಾಗ ಚೈತನ್ಯ ವಿಚ್ಛೇದನದ ಬಳಿಕ ಮತ್ತೊಂದು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಸುದ್ದಿಯ ಬಗ್ಗೆ ಅಕ್ಕಿನೇನಿ ಕುಟುಂಬ ಯಾವುದೇ ರಿಯಾಕ್ಷನ್ ಕೊಟ್ಟಿರಲಿಲ್ಲ. ಇದೀಗ ಶೋಭಿತಾ ಧುಲಿಪಾಲ ಜತೆಗಿನ ಡೇಟಿಂಗ್ ವದಂತಿಗೆ ನಾಗ ಚೈತನ್ಯ ಕುಟುಂಬ ಉತ್ತರ ನೀಡತ್ತಾರಾ ಅಕ್ಕಿನೇನಿ ಮನೆ ಸೊಸೆ ಆಗಲಿದ್ದಾರಾ ಅಂತಾ ಕಾದು ನೋಡಬೇಕಿದೆ.
Live Tv