ಹೈದರಾಬಾದ್‌ನಲ್ಲಿ ಐಷಾರಾಮಿ ಮನೆ ಖರೀದಿಸಿದ ನಟಿ ಸಮಂತಾ

Public TV
1 Min Read
samantha 3

ಸೌತ್ ಬ್ಯೂಟಿ ಸಮಂತಾ (Samantha) ಇತ್ತೀಚಿಗೆ ನಟಿಸಿದ ‘ಶಾಕುಂತಲಂ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಫ್ಲಾಪ್ ಆಗಿದೆ. ಆದರೂ ಅವರಿಗೆ ಇರುವ ಬೇಡಿಕೆ ಕಮ್ಮಿಯಾಗಿಲ್ಲ. ಸೌತ್- ಬಾಲಿವುಡ್‌ನಲ್ಲಿ (Bollywood) ಸಿನಿಮಾ ಮೇಲೆ ಸಿನಿಮಾ ಮಾಡ್ತಿದ್ದಾರೆ. ಸಂಭಾವನೆ ಕೂಡ ಜಾಸ್ತಿ ಮಾಡಿದ್ದಾರೆ. ಹೀಗಿರುವಾಗ ಹೈದರಾಬಾದ್‌ನಲ್ಲಿ ದುಬಾರಿ ಮನೆಯೊಂದನ್ನ (Home) ಖರೀದಿಸಿದ್ದಾರೆ.

samantha

ಸಮಂತಾ- ನಾಗ ಚೈತನ್ಯ (Nagachaitanya) ಡಿವೋರ್ಸ್ ಬಳಿಕ ಇಬ್ಬರೂ ಕೆರಿಯರ್ ಕಡೆ ಗಮನ ವಹಿಸುತ್ತಿದ್ದಾರೆ. ಇಬ್ಬರೂ ಮೂವ್ ಆನ್ ಆಗಿ ಹೆಚ್ಚೆಚ್ಚು ಸಿನಿಮಾಗಳನ್ನ ಮಾಡುತ್ತಾ ನೋವನ್ನ ಮರೆಯುತ್ತಿದ್ದಾರೆ. ಇನ್ನೂ ಡಿವೋರ್ಸ್ ಮೊದಲು ಸಮಂತಾ- ನಾಗ ಚೈತನ್ಯ ಒಟ್ಟಿಗೆ ವಾಸವಿದ್ದ ಅದೇ ಐಶಾರಾಮಿ ಮನೆಯನ್ನು ಡಿವೋರ್ಸ್ ಬಳಿಕ ಹಠಕ್ಕೆ ಬಿದ್ದು ನಟಿ ಸಮಂತಾ ಖರೀದಿ ಮಾಡಿ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇತ್ತೀಚೆಗೆ ಹೈದರಾಬಾದ್‌ನ ಐಶಾರಾಮಿ ಏರಿಯಾ ಒಂದರಲ್ಲಿ ಡ್ಯೂಪ್ಲೆಕ್ಸ್ ಮನೆಯನ್ನು ಭಾರಿ ದುಬಾರಿ ಬೆಲೆಗೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

samantha

7944 ಚದರ ಅಡಿ ವಿಸ್ತೀರ್ಣದ ನಾಲ್ಕು ಬೆಡ್‌ರೂಂಗಳುಳ್ಳ ಡ್ಯೂಪ್ಲೆಕ್ಸ್ ಮನೆಯನ್ನು ಸಮಂತಾ ಖರೀದಿ ಮಾಡಿದ್ದಾರೆ ಹೇಳಲಾಗುತ್ತಿದೆ. ಹೈದರಾಬಾದ್‌ನ ದುಬಾರಿ ಏರಿಯಾದ ಐಶಾರಾಮಿ ಅಪಾರ್ಟ್‌ಮೆಂಟ್ ಒಂದರ 14ನೇ ಅಂತಸ್ತಿನಲ್ಲಿ ಈ ಡ್ಯೂಪ್ಲೆಕ್ಸ್ ಮನೆ ಇದೆಯಂತೆ. ಈ ಡ್ಯೂಪ್ಲೆಕ್ಸ್ ಮನೆಗೆ ಸಮಂತಾ 7.8 ಕೋಟಿ ರುಪಾಯಿ ಹಣ ತೆತ್ತಿರುವುದಾಗಿ ಹಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಸಮಂತಾ ಪ್ರಸ್ತುತ ಹೈದರಾಬಾದ್‌ನ ಪಲಾಟಿಯಾಲ್ ಹೌಸ್‌ನಲ್ಲಿ ನೆಲೆಸಿದ್ದಾರೆ.

samantha

ಸಮಂತಾ ತೆಲುಗಿನ ಖುಷಿ, ಬಾಲಿವುಡ್‌ನ ಸಿಟಾಡೆಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಗ ಚೈತನ್ಯ- ಕೃತಿ ಶೆಟ್ಟಿ ನಟನೆಯ ‘ಕಸ್ಟಡಿ’ ಸಿನಿಮಾ ಮೇ 12ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ.

Share This Article