ಸಮಂತಾ ನಿರ್ಮಾಣದ ‘ಶುಭಂ’ (Subham Film) ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ಇದರ ಪ್ರಮೋಷನಲ್ ಹಾಡಿನಲ್ಲಿ ಸಮಂತಾ ಕೂಡ ಹೆಜ್ಜೆ ಹಾಕಿದ್ದಾರೆ. ಯೂಟ್ಯೂಬ್‌ನಲ್ಲಿ ಈ ಚಿತ್ರದ ಹಾಡು ಭರ್ಜರಿ ವಿವ್ಸ್ ಗಿಟ್ಟಿಸಿಕೊಳ್ತಿದೆ. ಇದನ್ನೂ ಓದಿ:ಚಿರಂಜೀವಿ ಜೊತೆ ನಟಿಸಲು ಅಬ್ಬಬ್ಬಾ 18 ಕೋಟಿ ಡಿಮ್ಯಾಂಡ್ ಮಾಡಿದ್ರಾ ನಯನತಾರಾ?
ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಎಂಬ ನಿಟ್ಟಿನಲ್ಲಿ ಸಮಂತಾ (Samantha) ಚಿತ್ರ ನಿರ್ಮಾಣ ಸಂಸ್ಥೆ ಶುರು ಮಾಡಿದ್ದಾರೆ. ಈ ನಿರ್ಮಾಣ ಸಂಸ್ಥೆಯ ಮೂಲಕ ‘ಶುಭಂ’ ಚಿತ್ರವನ್ನು ನಟಿ ನಿರ್ಮಾಣ ಮಾಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ ವಿಶೇಷ ಪಾತ್ರ ಮಾಡುವ ಮೂಲಕ ಚಿತ್ರತಂಡ ಸಾಥ್ ನೀಡಿದ್ದಲ್ಲದೇ ಈಗ ಹಾಡೋದಕ್ಕೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಪತ್ನಿ ರಿಲ್ಯಾಕ್ಸ್- ಕುದುರೆ ಜೊತೆ ವಿಜಯಲಕ್ಷ್ಮಿ ಪೋಸ್
View this post on Instagram
‘ಜನ್ಮ ಜನ್ಮಮಲಾ ಬಂಧಂ’ ಹಾಡಿನಲ್ಲಿ ಹೊಸ ಪ್ರತಿಭೆಗಳ ಜೊತೆ ಸಮಂತಾ ಕೂಡ ಡ್ಯಾನ್ಸ್ ಮಾಡಿದ್ದಾರೆ. ಮಸ್ತ್ ಆಗಿ ಹೆಜ್ಜೆ ಹಾಕಿರೋ ನಟಿಯನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ನಿಮ್ಮಗೋಸ್ಕರ ಈ ಚಿತ್ರವನ್ನು ನಾವು ನೋಡ್ತೀವಿ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.




