ಮುಂಬೈ: ಟಾಲಿವುಡ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ತಾವು ಎದುರಿಸಿದ ಮಾನಸಿಕ ಸಮಸ್ಯೆ ಕುರಿತು ನೇರವಾಗಿ ಮಾತನಾಡಿದರು.
ರೋಶಿನಿ ಟ್ರಸ್ಟ್ ಮತ್ತು ದಾಟ್ಲಾ ಫೌಂಡೇಶನ್ ‘ನಿಮ್ಮ ಮನೆ ಬಾಗಿಲಿಗೆ ಮನೋವೈದ್ಯ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಮಂತಾ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಅವರು ಇತ್ತೀಚೆಗೆ ಅವರು ಎದುರಿಸುತ್ತಿರುವ ಮಾನಸಿಕ ತೊಂದರೆ ಕುರಿತು ನೇರವಾಗಿ ಮಾತನಾಡಿದರು. ತಮ್ಮ ಸಮಸ್ಯೆಗಳನ್ನು ಹೇಗೆ ಎದುರಿಸಿದ್ದರು ಎಂಬುದನ್ನು ವಿವರಿಸಿದರು. ಇದನ್ನೂ ಓದಿ: ‘ಪುಷ್ಪ-2’ಗೆ ಶೇ.50 ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ!
Advertisement
Advertisement
ಕಾರ್ಯಕ್ರಮದಲ್ಲಿ ಮಾತನಾಡಿದ ಸಮಂತಾ, ನೀವು ಮಾನಸಿಕವಾಗಿ ತೊಂದರೆಗೊಳಗಾದಾಗ ಸಹಾಯವನ್ನು ಪಡೆಯಲು ಯಾವುದೇ ನಿರ್ಬಂಧಗಳು ಇರಬಾರದು. ನನ್ನ ವಿಷಯದಲ್ಲಿ, ನನ್ನ ಸಲಹೆಗಾರರು ಮತ್ತು ಸ್ನೇಹಿತರ ಸಹಾಯದಿಂದ ನಾನು ನನ್ನ ಮಾನಸಿಕ ಆರೋಗ್ಯ ಸುಧಾರಿಸಿಕೊಳ್ಳಲು ಸಾಧ್ಯವಾಯಿತು ಎಂದು ವಿವರಿಸಿದರು.
Advertisement
ದೈಹಿಕ ಗಾಯಗಳಿಗೆ ನಾವು ಹೇಗೆ ವೈದ್ಯರ ಬಳಿಗೆ ಹೋಗುತ್ತೇವೆಯೋ, ಹಾಗೆಯೇ ನಮ್ಮ ಹೃದಯಕ್ಕೆ ನೋವಾಗಿದ್ದರೆ ಅಥವಾ ಮಾನಸಿಕವಾಗಿ ನಾವು ತೊಂದರೆ ಅನುಭವಿಸುತ್ತಿದ್ದರೆ ನಾವು ವೈದ್ಯರನ್ನು ಸಂಪರ್ಕಿಸಬೇಕು ಎಂದು ಒತ್ತಿ ಹೇಳಿದರು. ಈ ಮೂಲಕ ನಾವು ಮನೋವೈದ್ಯರಿಂದ ಸಹಾಯ ಪಡೆಯುವುದಕ್ಕೆ ಯಾವುದೇ ರೀತಿ ಹಿಂಜರಿಯಬಾರದು ಎಂದು ತಿಳಿಸಿದರು.
Advertisement
ನಾನು ಮಾನಸಿಕವಾಗಿ ಕುಗ್ಗಿ ಮತ್ತೆ ಸುಧಾರಿಸಿಕೊಂಡು ಯಶಸ್ವಿಯಾಗಿದ್ದರೆ, ಅದು ನಾನು ಬಲಶಾಲಿಯಾಗಿದ್ದಕ್ಕಾಗಿ ಅಲ್ಲ. ಅದಕ್ಕೆ ಮುಖ್ಯ ಕಾರಣ ನನ್ನ ಸುತ್ತಲಿರುವ ಅನೇಕರು. ಅವರು ನನಗೆ ಧೈರ್ಯ ತುಂಬಿದ್ದರಿಂದ ನಾನು ಬಲಶಾಲಿಯಾಗಲು ಸಾಧ್ಯವಾಯಿತು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ಸಿನ ಸರ್ವನಾಶಕ್ಕೆ ಅವರೇ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ: ಪ್ರತಾಪ್ ಸಿಂಹ
ನಾನು ಕುಗ್ಗಿದ್ದಾಗ ನನಗೆ ಬಹಳಷ್ಟು ಜನರು ಸಹಾಯ ಮಾಡಿದ್ದಾರೆ. ಅವರ ತಮ್ಮ ಸಾಕಷ್ಟು ಸಮಯ ಮತ್ತು ಶ್ರಮವನ್ನು ವ್ಯಯಿಸಿದ್ದಾರೆ. ಅದಕ್ಕೆ ಈಗ ನಾನು ಸಾಮಾನ್ಯ ಜೀವನಕ್ಕೆ ಮರಳಿದ್ದೇನೆ. ಒಟ್ಟಿನಲ್ಲಿ ತಾವು ಮಾನಸಿಕವಾಗಿ ಹಿಂಸೆ ಪಡುತ್ತಿದ್ದಾಗ ಹಲವು ಜನರು ನನ್ನನ್ನು ಸಾಮಾನ್ಯ ಜೀವನಕ್ಕೆ ತರಲು ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದನ್ನು ಸಮಂತಾ ಮೆಲುಕು ಹಾಕಿಕೊಂಡರು.