ಕಳೆದ ಎರಡ್ಮೂರು ದಿನಗಳಿಂದ ಸಮಂತಾ ಅವರದ್ದು ಎನ್ನಲಾದ ಬೆತ್ತಲೆ (nude) ಫೋಟೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಬೆತ್ತಲೆ ಫೋಟೋ ಹಾಕಿ, ಡಿಲಿಟ್ ಮಾಡಿದ್ದಾರೆ ಎಂದು ಸಮಂತಾ ಮೇಲೆ ಆರೋಪ ಮಾಡಲಾಗುತ್ತಿದೆ. ಸಮಂತಾ ಹೀಗೆಲ್ಲ ಹೇಗೆ ಮಾಡೋಕೆ ಸಾಧ್ಯವೆಂದು ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಅದು ಯಾರ ಫೋಟೋ ಎಂದು ಬೆನ್ನುಕೂಡ ಬಿದ್ದಿದ್ದರು. ಈಗ ಸತ್ಯ ಬಯಲಾಗಿದೆ.
Advertisement
ಸಮಂತಾರದ್ದು ಎನ್ನಲಾದ ಆ ಬೆತ್ತಲೇ ಫೋಟೋ ಅಮೆರಿಕಾದ ನೀಲಿ ತಾರೆ ವೇನಸ್ ವೇಲೆನ್ಸಿಯಾದ್ದು (Venus Valency) ಎಂದು ಅಭಿಮಾನಿಯೊಬ್ಬ ಪತ್ತೆ ಮಾಡಿದ್ದಾನೆ. ಆ ಫೋಟೋವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿ, ಸಮಂತಾ ಅಂಥವರು ಅಲ್ಲವೆಂದು ಸಾರಿದ್ದಾನೆ. ಅಭಿಮಾನಿಯ ಈ ಹುಡುಕಾಟಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
Advertisement
Advertisement
ಒಂದಿಲ್ಲೊಂದು ಕಾರಣಕ್ಕಾಗಿ ಸಮಂತಾ ಸದಾ ಸುದ್ದಿಯಲ್ಲಿರುತ್ತಾರೆ. ತಾವು ಮಾಡಿದ ತಪ್ಪಿಗೆ ಸುದ್ದಿ ಆಗೋದು ಸಹಜ. ಮಾಡದೇ ಇರೋ ತಪ್ಪಿಗೂ ಬಲಿಯಾಗುತ್ತಾರೆ. ಅಂಥದ್ದೇ ಒಂದು ಬಲಿಪಶು ಸ್ಟೋರಿ ಬೆತ್ತಲೇ ಫೋಟೋದ್ದು. ಸಮಂತಾ (Samantha) ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬೆತ್ತಲೆ ಫೋಟೋ ಹಾಕಿದ್ದಾರೆ ಎನ್ನುವ ವಿಚಾರ ಮೊನ್ನೆಯಿಂದ ಭರ್ಜರಿ ಸೇಲ್ ಆಗಿತ್ತು.
Advertisement
ಡಿವೋರ್ಸ್ ನಂತರ ಸಮಂತಾ ಯಾಕೆ ಹೀಗೆ ಆದರು ಎನ್ನುವ ಪ್ರಶ್ನೆಯನ್ನೂ ಹಲವರು ಮಾಡಿದ್ದರು. ಬೆತ್ತಲೇ ಫೋಟೋ ಹಾಕಿ, ಯಾಕೆ ಡಿಲಿಟ್ ಮಾಡಿದರು ಎನ್ನುವ ಕುತೂಹಲ ಕೂಡ ಹಲವರದ್ದಾಗಿತ್ತು. ಅದು ಅವರೇ ಮಾಡಿದ್ದಾರಾ? ಅಥವಾ ಬೇರೆ ಯಾರಾದರೂ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎನ್ನುವ ಚರ್ಚೆ ಕೂಡ ಮಾಡಲಾಯಿತು.
ಈಗ ಸಮಂತಾ ಈ ಕುರಿತಂತೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮದಲ್ಲದ ತಪ್ಪಿಗೆ ಅಥವಾ ಪ್ರತಿಕ್ರಿಯೆ ನೀಡಲು ಯೋಗ್ಯವಲ್ಲದಕ್ಕೆ ಪ್ರತಿಕ್ರಿಯೆ ನೀಡಬಾರದು ಎಂದು ಬರೆದುಕೊಂಡಿದ್ದಾರೆ. ಅಂದರೆ, ಅದು ತಮ್ಮಿಂದ ಆಗಿರುವ ತಪ್ಪಲ್ಲ. ಹಾಗಾಗಿ ಪ್ರತಿಕ್ರಿಯೆ ಅನಗತ್ಯ ಎಂದಿದ್ದಾರೆ.