ನ್ಯೂಯಾರ್ಕ್ ವೆಕೇಷನ್ ಮೂಡ್‌ನಲ್ಲಿದ್ದಾರೆ ಸಮಂತಾ

Public TV
1 Min Read
samantha 1 5

ಸೌತ್ ಬ್ಯೂಟಿ ಸಮಂತಾ ‘ಖುಷಿ’ (Kushi) ಸಿನಿಮಾ ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆ ದೂರದ ನ್ಯೂಯಾರ್ಕ್‌ನಲ್ಲಿ ಬೀಡು ಬಿಟ್ಟಿದ್ದಾರೆ. ನ್ಯೂಯಾರ್ಕ್‌ನಲ್ಲಿ (Newyork) ಸ್ನೇಹಿತರ ಜೊತೆ ಮೋಜು- ಮಸ್ತಿ ಮಾಡ್ತಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

samantha 1 4

ನ್ಯೂಯಾರ್ಕ್‌ಗೆ ಸಮಂತಾ (Samantha) ಹಾರಿದ್ದಾರೆ. ಅಲ್ಲಿ ಕಾಲ ಕಳೆಯುತ್ತಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಮತ್ತು ಮಾನಸಿಕವಾಗಿ ರಿಲ್ಯಾಕ್ಸ್‌ ಆಗಲು ವಿದೇಶದಲ್ಲಿ ನಟಿ ಎಂಜಾಯ್‌ ಮಾಡ್ತಿದ್ದಾರೆ. ಸ್ಯಾಮ್‌ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಈಗ ಸದ್ದು ಮಾಡುತ್ತಿವೆ.

samantha 2 2

ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಒಂದು ವರ್ಷ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಸಂಪೂರ್ಣ ಗುಣಮುಖ ಆಗುವವರೆಗೂ ಸಿನಿಮಾ ಕೆಲಸದಿಂದ ಕೊಂಚ ದೂರವಿರುವ ಪ್ರಯತ್ನ ಮಾಡ್ತಿದ್ದಾರೆ. ಸದ್ಯ ನ್ಯೂಯಾರ್ಕ್‌ನಲ್ಲೂ ನಟಿ ವರ್ಕೌಟ್ ಮಾಡಿರುವ ಫೋಟೋ ಸೇರಿದಂತೆ ಟ್ರಾವೆಲಿಂಗ್ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಧನಂಜಯ್ ಹುಟ್ಟು ಹಬ್ಬಕ್ಕೆ ‘ಉತ್ತರಕಾಂಡ’ ಟೀಸರ್

samantha 1 3

‘ಖುಷಿ’ ಸಿನಿಮಾ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಜೊತೆ ಭರ್ಜರಿಯಾಗಿ ಕುಣಿದಿದ್ದರು. ಒಂದಲ್ಲ ಎರಡಲ್ಲ ಮೂರು ಮೂರು ಬಾರಿ ವೆರೈಟಿ ಡ್ರೆಸ್‌ಗಳಲ್ಲಿ ಮಿಂಚಿದ್ದರು. ಮಯೋಸಿಟಿಸ್ ಖಾಯಿಲೆ ಮರೆತು ಜನರು ಕೇಕೆ ಹಾಕುವಂತೆ ಮಾಡಿದ್ದರು. ನೋವನ್ನು ಒಳಗಿಟ್ಟುಕೊಂಡು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಅಭಿಮಾನಿಗಳಿಗೆ ಐ ಟು ಲವ್ ಯೂ ನಿಮಗಾಗಿ ಸಿನಿಮಾ ಮಾಡ್ತೀನಿ. ನಟಿಸುತ್ತೀನಿ ಅಂತಾ ಫ್ಯಾನ್ಸ್‌ಗೆ ಪ್ರಾಮೀಸ್ ಮಾಡಿದ್ದರು. ವೇದಿಕೆಯ ಮೇಲೆ ಅಭಿಮಾನಿಗಳ ಪ್ರೀತಿ ನೋಡಿ ಭಾವುಕರಾದರು.

ಇದೇ ಸೆಪ್ಟೆಂಬರ್ 1ರಂದು ‌’ಖುಷಿ’ ಸಿನಿಮಾ ರಿಲೀಸ್‌ ಆಗುತ್ತಿದೆ. ಬಹುಭಾಷೆಗಳಲ್ಲಿ ಸಮಂತಾ- ವಿಜಯ್ ದೇವರಕೊಂಡ ನಟನೆಯ ಸಿನಿಮಾ ತೆರೆ ಕಾಣಲಿದೆ. ಅದೆಷ್ಟರ ಮಟ್ಟಿಗೆ ಸಕ್ಸಸ್ ಕಾಣಲಿದೆ. ಮುಂದಿನ ದಿನಗಳವರೆಗೂ ಕಾಯಬೇಕಿದೆ.

Share This Article