ಚಿತ್ರ ವಿಚಿತ್ರ ಡ್ರೆಸ್ ಧರಿಸಿ ಕ್ಯಾಮೆರಾ ಮುಂದೆ ಬರುವ ಉರ್ಫಿ ಜಾವೇದ್ (Urfi Javed) ಇದೀಗ ಫ್ಲೈಯಿಂಗ್ ಬಟರ್ ಫ್ಲೈ ಗೌನ್ ಧರಿಸಿದ್ದಾರೆ. ಉರ್ಫಿಯ ಹೊಸ ಗೆಟಪ್ ಸಮಂತಾ, ಮೃಣಾಲ್‌ರನ್ನೇ ಬೆರಗು ಮೂಡಿಸಿದೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಫ್ಯಾಷನ್ ಪ್ರಿಯರಿಗೆ ಹೊಸ ಟ್ರೆಂಡ್‌ಗಳನ್ನು ಆಗಾಗ ಉರ್ಫಿ ಪರಿಚಯಿಸುತ್ತಾರೆ. ವಿಭಿನ್ನ ಗೆಟಪ್‌ನಲ್ಲಿ ಬರುವ ಮೂಲಕ ನಟಿ ಸುದ್ದಿಯಾಗುತ್ತಾರೆ. ಕಪ್ಪು ಬಣ್ಣದ ಗೌನ್‌ನಲ್ಲಿ ಉರ್ಫಿ ಇದೀಗ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್
ಇದರ ವಿಶೇಷತೆ, ಉರ್ಫಿ ಧರಿಸಿದ ಶೋಲ್ಡರ್ ಲೆಸ್ ಗೌನ್‌ನಲ್ಲಿ ಪ್ಲ್ಯಾಸ್ಟಿಕ್ ಎಲೆ ಮತ್ತು ಚಿಟ್ಟೆಗಳನ್ನು ಅಂಟಿಸಲಾಗಿದೆ. ಉರ್ಫಿ ಚಪ್ಪಾಳೆ ತಟ್ಟೋಕು ಆ ಎಲೆಗಳು ಮತ್ತು ಚಿಟ್ಟೆಗಳು ಹಾರುತ್ತವೆ. ಇದು ನೋಡುಗರಿಗೆ ಮ್ಯಾಜಿಕಲ್ ಎಂದೆನಿಸಿದೆ. ಇದರ ವಿಡಿಯೋ ತುಣುಕನ್ನು ಉರ್ಫಿ ಹಂಚಿಕೊಂಡಿದ್ದು, ಸಮಂತಾ ಮತ್ತು ಮೃಣಾಲ್ ಠಾಕೂರ್ ಬ್ಯೂಟಿಫುಲ್ ಎಂದು ಹಾಡಿ ಹೊಗಳಿದ್ದಾರೆ.
View this post on Instagram
ಅಂದಹಾಗೆ, ಇತ್ತೀಚೆಗೆ ಉರ್ಫಿ ಜಾವೇದ್ ‘ಲವ್ ಸೆಕ್ಸ್ ಔರ್ ದೋಕಾ -2’ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಉರ್ಫಿ ಕಮಾಲ್ ಮಾಡಿದ್ದರು. ಇಂದಿನ ಪೀಳಿಗೆಯ ಅನುಭವಗಳ ಮೇಲೆ ಈ ಸಿನಿಮಾದ ಕಥೆ ಆಧರಿಸಿತ್ತು. ಸೋಷಿಯಲ್ ಮೀಡಿಯಾ ಮೇಲಿನ ಪ್ರೀತಿ, ಮುಂದೆ ಏನೆಲ್ಲಾ ತಿರುವು ನೀಡಲಿದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದರು.