ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಮಂತಾ ನಂ 1

Public TV
1 Min Read
samantha 1

ಪುಷ್ಪ ಸಿನಿಮಾದ ನಂತರ ಸಮಂತಾ ರುತ್ ಪ್ರಭು (Samantha) ಅಷ್ಟೇನೂ ಹೇಳಿಕೊಳ್ಳುವಂತಹ ಸಿನಿಮಾ ಕೊಟ್ಟಿಲ್ಲ. ಮಾಡಿರುವ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಗೆಲ್ಲಲು ತಿಣುಕಾಡಿವೆ. ಆದರೂ, ಭಾರತದ ಜನಪ್ರಿಯ ಸೆಲೆಬ್ರಿಟಿಗಳ (Celebrity) ಪಟ್ಟಿಯಲ್ಲಿ ಸಮಂತಾ ನಂಬರ್ 1 (Number 1) ಸ್ಥಾನವನ್ನು ಅಲಂಕರಿಸಿದ್ದಾರೆ.  ಸದಾ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಮುಖಾಮುಖಿ ಆಗುವ ಸಮಂತಾ, ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಅಪ್ ಡೇಟ್ ನೀಡಿದ್ದರು.

samantha 3

ಐಎಂಡಿಬಿ (IMDb) ಪ್ರಕಟಿಸಿರುವ ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಮಂತಾ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿರುವುದಕ್ಕೆ ಅಭಿಮಾನಿಗಳಿಗೆ ಸಹಜವಾಗಿಯೇ ಖುಷಿ ಆಗಿದೆ. ಅನೇಕರು ಸಮಂತಾಗೆ ಶುಭ ಹಾರೈಸಿದ್ದಾರೆ. ಇನ್ನೂ ಎತ್ತರಕ್ಕೆ ನೀವು ಬೆಳೆಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಎಲ್ಲ ನೋವಿನಿಂದಲೂ ಬೇಗ ಆಚೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

samantha 1 1

ಸದ್ಯ ಸಮಂತಾ ಸಿಟಾಡೆಲ್ (Citadel) ವೆಬ್ ಸೀರಿಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಅಲ್ಲಿಯೇ ತಮ್ಮ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದರು. ಅಲ್ಲದೇ, ಐಸ್ ಬಾತ್ ಥಿರೇಪಿಗೂ ಅವರು ಒಳಗಾಗಿದ್ದರು. ಆ ಅನುಭವನ್ನು ನಿನ್ನೆಯಷ್ಟೇ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಅಲ್ಲದೇ, ಅದೊಂದು ಯಮಯಾತನೆಯ ನೋವು ಎಂದು ಹೇಳಿದ್ದರು.

samantha 1 1

ಸಮಂತಾ ವೈಯಕ್ತಿಕ ಕಾರಣಗಳಿಂದಾಗಿ ಹಲವು ಬಾರಿ ಸುದ್ದಿ ಆಗಿದ್ದಾರೆ. ಅಲ್ಲದೇ, ನಿರ್ಮಾಪಕ ಚಿಟ್ಟಿಬಾಬು ಕೂಡ ಸಮಂತಾ ಅವರ ಮೇಲೆ ನಿರಂತರವಾಗಿ ಮಾತಿನ ದಾಳಿ ಮಾಡಿದ್ದರು. ಅದಕ್ಕೂ ಸೌಮ್ಯ ರೀತಿಯಲ್ಲಿ ಸಮಂತಾ ಉತ್ತರ ನೀಡಿದ್ದರು.

Share This Article