ಟಾಲಿವುಡ್ ಹೀರೋ ವಿಜಯ್ ದೇವರಕೊಂಡ (Vijay Devarakonda) ಅವರು ರಶ್ಮಿಕಾ ಮಂದಣ್ಣ (Rashmika Mandanna) ಬಿಟ್ಟು ಸಮಂತಾ ನನ್ನ ಕ್ರಶ್ ಎಂದು ಹೇಳುವ ಮೂಲಕ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದ್ದಾರೆ. ಖುಷಿ ಸಿನಿಮಾದ ಸಹನಟಿ ಸಮಂತಾ(Samantha) ಬಗ್ಗೆ ಅಚ್ಚರಿ ಹೇಳಿಕೆಯೊಂದನ್ನ ವಿಜಯ್ ಬಿಚ್ಚಿಟ್ಟಿದ್ದಾರೆ.
ಸಮಂತಾ ಸದ್ಯ ಆರೋಗ್ಯಕ್ಕಾಗಿ ಲಾಂಗ್ ಬ್ರೇಕ್ ತೆಗೆದುಕೊಂಡಿದ್ದಾರೆ. ‘ಖುಷಿ’ (Kushi) ಸಿನಿಮಾ ಮುಗಿಸಿಕೊಟ್ಟು, ಮೈಯೋಸಿಟೀಸ್ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿರುವಾಗ ಚಿತ್ರತಂಡದ ಜೊತೆ ಸೇರಿ ವಿಜಯ್ ದೇವರಕೊಂಡ ಖುಷಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಖುಷಿ ಸಿನಿಮಾದ ಟ್ರೈಲರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಈ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ವಿಜಯ್, ಮದುವೆ ಬಗ್ಗೆ ಮಾತನಾಡುವಾಗ ಸಮಂತಾ ನನ್ನ ಕ್ರಶ್ ಎಂದು ಹೇಳಿಕೆ ನೀಡಿದ್ದಾರೆ. ವಿಜಯ್ ಹೇಳಿಕೆಗೆ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ವಿಜಯ್- ರಶ್ಮಿಕಾ ಮಂದಣ್ಣ ಡೇಟಿಂಗ್ ಕಹಾನಿ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇಬ್ಬರು ಕದ್ದು ಮುಚ್ಚಿ ಆಗಾಗ ಭೇಟಿಯಾಗುತ್ತಿರುತ್ತಾರೆ. ಇದನ್ನೂ ಓದಿ:ಎಡಗೈ ಬಳಕೆದಾರರಿಗೆಂದೇ ವಿಶೇಷವಾದ ಹೆಲ್ಮೆಟ್ ಲಾಂಚ್- ದಿಗಂತ್ & ಟೀಮ್ ಸಾಥ್
ಈಗ ವಿಜಯ್ ದೇವರಕೊಂಡ, ಸಮಂತಾ ನನ್ನ ಕ್ರಶ್ ಎಂದಿರೋದ್ದಕ್ಕೆ ರಶ್ಮಿಕಾ ಮಂದಣ್ಣ ಕಥೆಯೇನು ಎಂದು ಪ್ರಶ್ನೆ ಮಾಡ್ತಿದ್ದಾರೆ. ರಶ್ಮಿಕಾ ಜೊತೆ ಬ್ರೇಕಪ್ ಆಯ್ತಾ ಅಂತಾ ಇನ್ನೊಂದ್ ಕಡೆ ಅಭಿಮಾನಿಗಳು ತಲೆಕೆಡೆಸಿಕೊಂಡಿದ್ದಾರೆ. ಈ ಪ್ರಶ್ನೆಗೆ ಉತ್ತರ ಸಿಗೋದು ಕಷ್ಟವೇ ಬಿಡಿ. ರಶ್ಮಿಕಾ ಜೊತೆಗಿನ ಲವ್ ವಿಜಯ್ ಎಂದಿಂಗೂ ಅಸಲಿ ಉತ್ತರ ನೀಡಿರಲಿಲ್ಲ. ಅಡ್ಡ ಗೋಡೆಯ ಮೇಲೆ ಇಬ್ಬರು ದೀಪವಿಡುವ ಉತ್ತರವೇ ನೀಡುತ್ತಿದ್ದರು. ಹಂಗೂ ಮುಂದಿನ ದಿನಗಳಲ್ಲಿ ಉತ್ತರ ಸಿಗುತ್ತಾ ಕಾಯಬೇಕಿದೆ.
ಸದ್ಯ ವಿಜಯ್ ದೇವರಕೊಂಡ- ಸಮಂತಾ ನಟನೆಯ ಖುಷಿ(Kushi) ಸಿನಿಮಾ ಇದೇ ಸೆಪ್ಟೆಂಬರ್ 1ಕ್ಕೆ ಬಹುಭಾಷೆಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ವಿಜಯ್- ಸಮಂತಾ ಕಾಂಬೋ ಚಿತ್ರಮಂದಿರದಲ್ಲಿ ಮೋಡಿ ಮಾಡುತ್ತಾ ಕಾದುನೋಡಬೇಕಿದೆ. ಇಬ್ಬರಿಗೂ ಯಶಸ್ಸಿನ ಅವಶ್ಯಕತೆಯಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]