ಟಾಲಿವುಡ್ (Tollywood) ನಟಿ ಸಮಂತಾ (Samantha) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸೂಕ್ತ ಚಿಕಿತ್ಸೆಯನ್ನ ಕೂಡ ನಟಿ ಪಡೆಯುತ್ತಿದ್ದಾರೆ. ಇದರ ನಡುವೆ ಕ್ರಿಸ್‌ಮಸ್ ಸೆಲೆಬ್ರೇಷನ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ವ್ಯಕ್ತಿಯಿಂದ ಸಮಂತಾಗೆ ಭರ್ಜರಿ ಗಿಫ್ಟ್ ಸಿಕ್ಕಿದೆ.
ನಟಿ ಸಮಂತಾ ಸಾಕಷ್ಟು ಸಮಯದಿಂದ ವಯೋಸಿಟಿಸ್ ಖಾಯಿಲೆಯಿಂದ ಬಳಲುತ್ತಿದ್ದಾರೆ. `ಯಶೋದ’ (Yashoda) ಚಿತ್ರದ ನಂತರ ಸಿನಿಮಾಗೆ ಬ್ರೇಕ್ ಕೊಟ್ಟು, ಆರೋಗ್ಯದ ಕಡೆ ಗಮನ ಕೊಡುತ್ತಿದ್ದಾರೆ. ಈ ವೇಳೆ ಕ್ರಿಸ್‌ಮಸ್ ಹಬ್ಬವನ್ನ ನಟಿ ಸೆಲೆಬ್ರೇಟ್ ಮಾಡಿದ್ದಾರೆ. ಅನಾರೋಗ್ಯದ ನಡುವೆ ಹಬ್ಬಕ್ಕೆ ಮಹತ್ವ ನೀಡಿದ್ದಾರೆ. ಈ ವೇಳೆ ನೆಚ್ಚಿನ ನಟಿಗೆ ನಿರ್ದೇಶಕ ರಾಹುಲ್ ರವೀಂದ್ರನ್ (Rahul Ravidran) ಕಡೆಯಿಂದ ಸ್ಪೆಷಲ್ ಉಡುಗೊರೆ ಸಿಕ್ಕಿದೆ.
ಈ ಕುರಿತು ಸ್ವತಃ ಸಮಂತಾ ಅವರೇ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. ಗಿಫ್ಟ್ ಫೋಟೋ ಶೇರ್ ಮಾಡಿ, ಸಮಂತಾ ಧನ್ಯವಾದಗಳನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ ಬರ್ತ್‌ಡೇಗೆ ನಟಿ ರಾಕುಲ್ ಲವ್ಲಿ ವಿಶ್
View this post on Instagram
ಅನಾರೋಗ್ಯದ ಹಿನ್ನೆಲೆ ಇತ್ತೀಚೆಗಷ್ಟೇ ವರುಣ್ ಧವನ್ (Varun Dhawan) ಸಿನಿಮಾದಿಂದ ಸಮಂತಾ ಹೊರಬಂದಿದ್ದರು. ಸಂಪೂರ್ಣವಾಗಿ ಆರೋಗ್ಯದಲ್ಲಿ ಚೇತರಿಕೆ ಕಾಣಿಸುವವರೆಗೂ ಸಿನಿಮಾಗೆ ಬ್ರೇಕ್ ಕೊಟ್ಟಿದ್ದಾರೆ.