ಸಮಂತಾ (Samantha) ನಿಜವಾದ ವಯಸ್ಸು ಎಷ್ಟು? ಇದಕ್ಕೆ ಉತ್ತರ ಸಿಕ್ಕಿದೆ. ಅಸಲಿಗೆ ಆ ಹುಡುಗಿಗೆ 36 ವರ್ಷ. ಆದರೆ ಹೊಳೆಯುವ ಮುಖವನ್ನು ನೋಡಿ ಹೇಳುವುದು 23 ವರ್ಷ. ಅದು ಹೇಗೆ ಸಾಧ್ಯ? ಅದಕ್ಕೂ ಮೆಡಿಕಲ್ ಸೈನ್ಸ್ ಉತ್ತರ ಕೊಟ್ಟಿದೆ. ಇದೇನಿದು ಮೆಟಾಬಾಲಿಕ್ ಏಜ್? ಅದು ಹೇಗೆ 13 ವರ್ಷ ಇರುವುದಕ್ಕಿಂತ ಚಿಕ್ಕ ಹುಡುಗಿಯಾಗಿ ಸಮಂತಾ ಕಾಣಿಸುತ್ತಾರೆ? ಇಲ್ಲಿದೆ ಮಾಹಿತಿ.
ಸಮಂತಾಗೆ ಮೈಯೋಸಿಟಿಸ್ ಖಾಯಿಲೆ ಇದೆ. ಅದಕ್ಕಾಗಿ 1 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರ ವಯಸ್ಸು 36 ವರ್ಷ. ಆದರೆ ಮೆಡಿಕಲ್ ಸೈನ್ಸ್ ಏನು ಹೇಳುತ್ತದೆ ಗೊತ್ತೆ? ಅವರ ದೇಹಕ್ಕೆ ವಯಸ್ಸು ಆಗಿದೆ. ಆದರೆ ಮೆಟಾಬಾಲಿಕ್ ಪ್ರಕಾರ ಅವರಿಗೆ ಈಗಿನ್ನೂ 23 ವರ್ಷ. ಈ ರೀತಿ ಅದನ್ನು ಜೋಪಾನ ಮಾಡಿದ್ದಾರೆ ಸಮಂತಾ. ಇದು ಸತ್ಯ. ಇದಕ್ಕೆ ಸಾಕ್ಷಿಯಾಗಿ ಖುದ್ದು ಸಮಂತಾ ಬಾಡಿ ಕಂಪೋಸಿಷನ್ ಅನಾಲಿಸಿಸ್ ರಿಪೋರ್ಟ್ ಹಂಚಿಕೊಂಡಿದ್ದಾರೆ.
ಸಮಂತಾ ಇದಕ್ಕೆಲ್ಲ ಏನು ಮಾಡುತ್ತಾರೆ ? ಉತ್ತರ ಇದೆ. ಅವರು ಹೊಟ್ಟೆಗೆ ಸೇರಿಸುವ ಪ್ರತಿಯೊಂದು ಆಹಾರಕ್ಕೂ ಲೆಕ್ಕ ಇಡುತ್ತಾರೆ. ತೂಕ ಮಾಡಿ ಹೊಟ್ಟೆಗೆ ಅನ್ನವನ್ನು ಇಳಿಸುತ್ತಾರೆ. ಹಣ್ಣು, ತರಕಾರಿ, ಚಪಾತಿ ಯಾವುದು ಎಷ್ಟು ಬೇಕು ಅಷ್ಟು ಮಾತ್ರ ಅವರ ಹೊಟ್ಟೆಗೆ ಸೇರುತ್ತದೆ. ಇದನ್ನೂ ಓದಿ:ಒಂದು ರಾತ್ರಿಗೆ 25 ಲಕ್ಷ ಎಂದಿದ್ದ ರಾಜಕಾರಣಿ ರಾಜು ವಿರುದ್ಧ ತ್ರಿಶಾ ಕಾನೂನು ಸಮರ
View this post on Instagram
ಅದರ ಜೊತೆಗೆ ದೇಹವನ್ನು ದಣಿಸುತ್ತಾರೆ. ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ಸರಿಯಾದ ಸಮಯಕ್ಕೆ ಮಲಗುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರಿಗೆ ದೇಹವೇ ದೇವಾಲಯ. ಅದನ್ನು ಪೂಜಿಸುತ್ತಾರೆ. ಆರಾಧಿಸುತ್ತಾರೆ. ಕೊನೆಗೆ 36 ವರ್ಷದಲ್ಲೂ 20ರ ಹುಡುಗಿಯಂತೆ ಕಾಣಿಸುತ್ತಿದ್ದಾರೆ. ಇದೇ ಅವರ ಸೀಕ್ರೇಟ್.
ಗ್ಯಾಪ್‌ನ ನಂತರ ಮತ್ತೆ ಕ್ಯಾಮೆರಾ ಮುಂದೆ ನಿಲ್ಲಲು ಸಮಂತಾ ಸಜ್ಜಾಗಿದ್ದಾರೆ. ಈಗಾಗಲೇ ಬಂದಿರುವ ಸ್ಕ್ರಿಪ್ಟ್‌ಗಳನ್ನು ಕೈಗೆತ್ತಿಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾ (Films) ಬಗ್ಗೆ ಅಪ್‌ಡೇಟ್ ಹಂಚಿಕೊಳ್ಳಲಿದ್ದಾರೆ.