ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು (Samantha Ruth Prabhu) ನಟನೆಯ ‘ಸಿಟಾಡೆಲ್’ (Citadel) ರಿಮೇಕ್ ‘ಹನಿ ಬನಿ’ ಪ್ರಾಜೆಕ್ಟ್ ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಬಾಲಿವುಡ್‌ನಲ್ಲಿ ಮೊದಲ ಪ್ರಾಜೆಕ್ಟ್ ಆಗಿರೋದ್ರಿಂದ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಇದೀಗ ತೆಲುಗು ಸಿನಿಮಾಗಳಿಗೆ ಗುಡ್ ಬೈ ಹೇಳಿ, ಬಾಲಿವುಡ್‌ನಲ್ಲಿಯೇ ಸೆಟಲ್ ಆಗಲು ಸಮಂತಾ ಪ್ಲ್ಯಾನ್ ಮಾಡಿದ್ದಾರೆ.
ಸ್ಯಾಮ್ ಸದಾ ಒಂದಲ್ಲಾ ಒಂದು ಸಿನಿಮಾ ವಿಚಾರವಾಗಿ ಸದ್ದು ಮಾಡುತ್ತಲೇ ಇರುತ್ತಾರೆ. ತೆಲುಗಿನಲ್ಲಿ ನಟಿಗೆ ಆಫರ್ ಕಮ್ಮಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಸಮಂತಾ ಈಗ ಮುಂಬೈನಲ್ಲಿಯೇ ಬೀಡು ಬೀಡಲು ಯೋಚಿಸಿದ್ದಾರಂತೆ. `ಸಿಟಾಡೆಲ್’ ಬಳಿಕ ಹಿಂದಿ ಸಿನಿಮಾಗೆ (Bollywood) ಆಧ್ಯತೆ ಕೊಡಲು ಸ್ಯಾಮ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದು ಹೊಸ ಕಥೆ ಹೊತ್ತು ಸಮಂತಾರನ್ನು ಸಂಪರ್ಕಿಸಿದ್ದು, ಇದರ ಜೊತೆಗೆ ಬೇರೆ ಬೇರೇ ತಂಡದ ಕಥೆಯನ್ನು ಕೂಡ ಸಮಂತಾ ಕೇಳುತ್ತಿದ್ದಾರೆ. ಒಂದಿಷ್ಟು ಸಿನಿಮಾಗಳ ಮಾತುಕತೆ ಆಗುತ್ತಿರೋದ್ರಿಂದ ಮುಂಬೈನಲ್ಲಿ ನಟಿ ಉಳಿದುಕೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಒಂದಾದ ’ಬಾವಲ್’ ಜೋಡಿ- ಜಾನ್ವಿ ಜೊತೆ ವರುಣ್ ಧವನ್ ರೊಮ್ಯಾನ್ಸ್

ಆದರೆ ಯಶೋದ ಮತ್ತು ಖುಷಿ ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 8 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ.



